ಬೇಡಿದ್ದ ಕೊಡೋ ದೇವರು...
ತಿಮ್ಮಾ: ದೇವರಡ ಮುಂದ ಭಾಳ ಭಕ್ತಿಯಿಂದಿರಬೇಕಪಾ ತಮ್ಮಾ!
ತಮ್ಮಾ: ಯಾಕ? ಏನಾತೋ ತಿಮ್ಮಾ??
ತಿಮ್ಮಾ: ನಾವು ಜೀವಂತ ಇದ್ದಾಗ ಬೇಡಿದ್ದನ್ನ, ಆ ದೇವರು ಸತ್ತ ಮ್ಯಾಲ ಸ್ಯಾಂಕ್ಷನ್ ಮಾಡ್ತಾನಂತ! ಹೇಳ್ತಾನ ಒಬ್ಬ ಕವಿ.
ತಮ್ಮಾ: ಹ್ಯಾಂಗ?
ತಿಮ್ಮಾ: ತಾನು ಜೀವಂತ ಇದ್ದಾಗ ಯಾರ ಜೋಡಿ ನಾಲ್ಕ ಛಂದ ಮಾತು ಆಡಬೇಕು ಅನಕೊಂಡಿದ್ನೋ ಅದು ಸತ್ತ ಮ್ಯಾಲ ಸಾಧ್ಯ ಆತು, ಅಂತಾನ ಆತ.
ತಮ್ಮಾ: ಹೌದ??
ತಿಮ್ಮಾ: ಮೂಲಿಮನಿ ಯಜಮಾನ ಎಂದೆಂದು ಒಂದಕ್ಷರ ಮಾತಾಡದಾವ ನಾ ಹೆಣ ಆಗಿ ಮಲಗಿದಾಗ, ಹತ್ತರ ಬಂದು ಕೂತು ಮನಿ ಮಂದಿನ್ನೆಲ್ಲಾ ಮಾತಾಡಿಸಿದ.
ತಮ್ಮಾ: ಆ ಸತ್ತ ಕವಿಯ 'ಜೀವನ' ಧನ್ಯ ಆಗಿರಬೇಕಲಾ?
ತಿಮ್ಮಾ: ಸತ್ತವನ ಜೀವನ ಹ್ಯಾಂಗ ಧನ್ಯ ಆಗತದಲೆ?... ಆದರ ಹೂವಿನ ಬಗ್ಗೆ ಏನಂತಾನ ಗೊತ್ತದ ನಿನಗ??
ತಮ್ಮಾ: ಜೀವನ ಹೂವಿನ ಹಾಸಿಗೆಯಾಗಲಿ, ಮುಳ್ಳು-ಕಂಟಿ ಏನೂ ಇರಬಾರದು ಜೀವನದಾಗ ಅಂದಿರತಾನ!!
ತಿಮ್ಮಾ: ಯೆಸ್ ಕರೆಕ್ಟ! ಜೀವಂತ ಇದ್ದಾಗ ಬದುಕು ಹೂವಿನ ಹಾಸಿಗೆ ಆಗಲಿ ಅಂದಿದ್ದೆ ದೇವರ. ಆದರ ನೀನು ನಾ ಸತ್ತ ಮ್ಯಾಲ ನನ್ನ ಮ್ಯಾಲ ಹೂವಿನ ಮಳಿ ಸುರಸಿದಿ!!
ತಮ್ಮಾ: ವಾಹ ಎಂಥಾ ಸತ್ಯಪಾ ಇದು! ಹೆಣ ಹೊತಗೊಂಡ ಹೋಗೋ ಸಂಭ್ರಮ ನೋಡೊಹಾಂಗ ಇರತದ ಬಿಡು... ಹೂ, ಚುರುಮರಿ, ಚಿಲ್ಲರು ಎಲ್ಲಾ ತುರತಾರ, ಪಟಾಕಿ ಹಾರಸ್ತಾರ!!
ತಿಮ್ಮಾ: ಮುಂದ ಆ ಕವಿ ಹೇಳ್ತಾನ... ದೇವರ ಜೀವಂತ ಇದ್ದಾಗ ನನಗೊಂದು ಸಹಾಯ ಹಸ್ತ ಕೊಡು ಅಂದಿದ್ದೆ, ನೀ ಕೊಡಲಿಲ್ಲ...
ತಮ್ಮಾ: ಹೌದರಿ ಬೇರೊಂದು ಕೈ ಸಪೊರ್ಟ್ಗೆ, ಮುದುಕರಾಗಿ ಬೆನ್ನು ಬಾಗಿದಾಗ... ಹೆಜ್ಜೆ ಎತ್ತಿಡಲಿಕ್ಕ ಆಗದಾಗ!! ಬೇಕಖ ಬೇಕು ಒಂದು ಹ್ಯಾಂಡ್.
ತಿಮ್ಮಾ: ಆದರ ನಾ ಲೋಕದ ಯಾತ್ರೆ ಮುಗಿಸಿ ಹೊಂಟಾಗ ಒಂದು ಕೈ ಯಾಕ್ ಅಂತ, ನಾಲ್ಕ ಮಜಬೂತ ಹೆಗಲ ಕೊಟ್ಟಿ ದೇವರಡಡ... ಸುಖನಿದ್ದೆಯೊಳಗ ಹೆಗಲ ಬದಲಿಸಿಗೋತ ಹೊಂಟೆ ನಾನು...
ತಮ್ಮಾ: ಎಯ್, ಭಾರಿ ಇದ್ದಾನ ಬಿಡು ಆ ಕವಿ!!
ತಿಮ್ಮಾ: ಕಡಿ ಸಾಲನ್ಯಾಗ ಏನಂತಾನ ಕೇಳು... ಸಾಯೋದ್ರಾಗ ಇಷ್ಟು ಸುಖ ಇದ್ದರ ಬದುಕಲಿಕ್ಕೆ ಯಾಕಿಷ್ಟು ಒದ್ದಾಡತಾರೋ ಮಂದಿ?
- ಯಶವಂತ ಸರದೇಶಪಾಂಡೆ
khullamkhullabevubella@gmail.com