ಹುಲ್ಲು ತಿನ್ನುವ ಕತ್ತೆಯು ಕಾಗದವನ್ನೇಕೆ ತಿನ್ನುತ್ತೆ ಸಾರ್?
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಹುಲ್ಲು ತಿನ್ನುವ ಕತ್ತೆಯು ಕಾಗದವನ್ನೇಕೆ ತಿನ್ನುತ್ತೆ ಸಾರ್?
- ಹುಟ್ಟಿಸಿದ ದೇವರು ಹುಲ್ಲನ್ನಷ್ಟೇ ಮೇಯಿಸುವುದಿಲ್ಲ ಅಂತ ತೋರಿಸಲು!
ಪಿ.ಜೆ. ರಾಘವೇಂದ್ರ, ಮೈಸೂರು.
ಡೊಳ್ಳು ಹೊಟ್ಟೆಯ ರಾಜಕಾರಣಿಗಳೆಲ್ಲ ಎಲ್ಲಿ ಹೋದ್ರು?
- ಕೆಲವರೆಲ್ಲ ವ್ಯಂಗ್ಯಚಿತ್ರಗಳಲ್ಲೇ ಉಳಿದುಹೋದ್ರು!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ಸತ್ತವರ ಸಮಾಧಿ ಮೇರೆ ಗೋರಿ ಯಾಕೆ ಕಟ್ತಾರೆ ಗುರು?
- ಇಲ್ಲದಿದ್ರೆ ಅದರ ಮೇಲೆನೇ ಮನೆ ಕಟ್ತಾರೆ!
ಜೆ.ಆರ್. ಆದಿನಾರಾಯಣಮುನಿ, ಶ್ರೀ ಕೋಡಿಹಳ್ಳಿಮಠ
ಮಾನ ಹೋದಾಗ ಅಡಕೆಯನ್ನೇ ಯಾಕೆ ಗುರಿಯಾಗಿಸುತ್ತಾರೆ?
- ಎಷ್ಟೆಂದರೂ ಅದು 'ವಾಣಿಜ್ಯ' ಬೆಳೆ ತಾನೆ!
ನೇರಲಗುಡ್ಡ ಶಿವಕುಮಾರ್, ಶಿರಾ.
ಕಳ್ಳನೋಟು ಮತ್ತು ಕಪ್ಪು ಹಣಕ್ಕೆ ವ್ಯತ್ಯಾಸವೇನು?
- ಕಳ್ಳ ನೋಟು ವ್ಯಕ್ತಿ, ಕಪ್ಪು ಹಣ ಶಕ್ತಿ!
ಓಂ ಚನ್ನೇಶ್, ಅರಬಿಳಚಿ ಕ್ಯಾಂಪ್, ಭದ್ರಾವತಿ.
ಕೆಲವರು ಮನೆ ಊಟಕ್ಕಿಂತ ಹೋಟೆಲ್ ಊಟವನ್ನೇ ಇಷ್ಟಪಡುತ್ತಾರಲ್ಲ ಯಾಕೆ?
- ಮನೆ ಬಾಳೆ ಎಲೆಗಿಂತ ಹೋಟೆಲ್ನ ತಟ್ಟೆನೇ ರುಚಿಯಾಗಿರುತ್ತಂತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
ಬೈಕ್ ಓಡಿಸುವ ಹುಡುಗರು, ಹುಡುಗಿಯರನ್ನು ಕಂಡಾಗ ವೇಗ ಹೆಚ್ಚಿಸುತ್ತಾರಲ್ಲ ಏಕೆ?
- ತಮ್ಮನ್ನು ನೋಡದಿದ್ರೂ ಬೈಕನ್ನಾದ್ರೂ ನೋಡಲೀಂತ!
ಅಣಜಿ ಮಂಜುನಾಥ್, ಮಾಧನಬಾಲಿ.
ಕತ್ತೆಯನ್ನು ಹಿಡಿದವರು ಒಂದಲ್ಲ ಒಂದು ದಿನ ಕತ್ತಿಗೆ ಬಲಿಯಾದ್ರೆ, ಪೆನ್ನು ಹಿಡಿದವರು?
- ಮೈ ಮೇಲೆ ಇಂಕ್ ಚೆಲ್ಲಿಕೊಳ್ತಾರೆ!
ರವಿಕುಮಾರ್ ಜೆ.ಬಿ. ಬೆಂಗಳೂರು.
ಬಿಜೆಪಿಯನ್ನು ಸರ್ವನಾಶ ಮಾಡುತ್ತೇನೆ ಎಂದ ಯಡಿಯೂರಪ್ಪ ಈಗ ಅದೇ ಪಕ್ಷ ಸೇರಿದ್ದಾರಲ್ಲಾ?
- ತಾವೇ ಸರ್ವನಾಶವಾಗ್ತೀನಿ ಎಂಬ ಭಯ!
ನೇರಲಗುಡ್ಡ ಶಿವಕುಮಾರ್, ಶಿರಾ.
ದೇವೇಗೌಡರಿಗೆ ಮುದ್ದೆ ಮೇಲೆ ಅಕ್ಕರೆಯಾದ್ರೆ, ನರೇಂದ್ರ ಮೋದಿಗೆ?
- ಪ್ರಧಾನಿ ಹುದ್ದೆ ಮೇಲೆ ಅಂತಿದ್ದಾರೆ ಕೈನವರು!
-ಎಸ್.ವಿ. ಪದ್ಮನಾಭ