ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಜೋಕ್ಸ್ ಪಿಯರ್

Rashmi Kasaragodu
Updated On : 4 Jan 2014, 3:38 am

ಸುದ್ದಿ: ನಟ ಹೃತಿಕ್ ರೋಷನ್ ತನ್ನ ಹೆಂಡ್ತಿ ಸುಸ್ಸಾನೆಗೆ ವಿಚ್ಛೇದನ ನೀಡಿದ.
ನೀತಿ: ಗೊತ್ತಾಯ್ತಲ್ಲ ಕ್ರಿಶ್‌ನ ಸೂಪರ್ ಹೀರೋಗೂ ಹೆಂಡ್ತಿನ ಹ್ಯಾಂಡ್ಲ್ ಮಾಡೋದಿಕ್ಕೆ ಆಗ್ಲಿಲ್ಲ!
=
ಫಂಟಾ: ಹುಡುಗಿ ಅಂತ ಅಳತೆ ಮಾಡೋದಿಕ್ಕೆ ಯಾರಿಂದ ಸಾಧ್ಯ?
ಕೋಲ್ಯ: ಟೈಲರ್.
=
ಫಂಟಾ: ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದಂತೆ ಹೌದಾ?
ಕೋಲ್ಯ: ಅದಕ್ಕೆ ಬಫೆ ಸಿಸ್ಟಂ ಶುರುಮಾಡಿದ್ದು.
=
ಕೋಲ್ಯ ಎಫೆಮ್ ಸ್ಟೇಶನ್ನಿಗೆ ಕರೆಮಾಡಿದ...
ಕೋಲ್ಯ: ನಿನ್ನೆ ಟ್ರೈನಲ್ಲಿ ಹೋಗ್ತಾ ಒಬ್ಬರ ಪರ್ಸ್ ಸಿಕ್ಕಿತು. ಅದರೊಳಗೆ ನೆಕ್ಲೆಸ್, 10 ಸಾವಿರ ರು. ಇತ್ತು.
ರೇಡಿಯೋ ಜಾಕಿ: ಹೋ, ಏನೀಗ ಅವರಿಗೆ ನಿಮ್ಮ ಪೋನ್ ನಂಬರ್ ಕೊಡ್ತೀರಾ?
ಕೋಲ್ಯ: ಇಲ್ಲ, ಅವರಿಗಾಗಿ ಒಂದು ವಿಷಾದ ಗೀತೆ ಪ್ರಸಾರ ಮಾಡಿ!
=
ನಿರ್ದೇಶಕ: ನೀವು 4ನೇ ಮಹಡಿಯಿಂದ ಈಜುಕೊಳಕ್ಕೆ ಧುಮುಕಬೇಕು.
ನಟ: ಆದರೆ ನನಗೆ ಈಜು ಬರುವುದಿಲ್ಲ.
ನಿರ್ದೇಶಕ: ಯೋಚಿಸಬೇಡಿ, ಅದರಲ್ಲಿ ನೀರು ಇರುವುದಿಲ್ಲ!
=
ನಡುರಾತ್ರಿ ಕುಡುಕನೊಬ್ಬ ಖಾಲಿ ಗೋರಿಯೊಳಗೆ ಬಿದ್ದ. 'ಚಳಿ ತಾಳೋಕಾಗ್ತಾ ಇಲ್ಲ... ಯಾರಾದ್ರೂ ಬನ್ನಿ...' ಎಂದು ಕೂಗಾಡುತ್ತಾ ಇದ್ದ. ಇನ್ನೊಬ್ಬ ಕುಡುಕ ಬಂದು ಕೆಳಗೆ ಬಾಗಿ ನೋಡಿದ.
'ಚಳಿಯಾಗದೇ ಇನ್ನೇನಾದೀತು? ಮೂರ್ಖರು, ನಿನ್ನನ್ನು ಗೋರಿಗೆ ಇಳಿಸಿದ ಮೇಲೆ ಮಣ್ಣು ಮುಚ್ಚಲು ಮರೆತಿದ್ದಾರೆ' ಎಂದು ಗೋರಿಗೆ ಮಣ್ಣು ತುಂಬಿದ.
=
ಇಂಗ್ಲಿಷ್ ಟೀಚರ್ ಕೇಳಿದರು: 'ಯಾವ ಯಾವ ಕಾಲಕ್ಕೆ ಏನೆಲ್ಲಾ ಆಗಬೇಕೋ ಅದು ಆಗಲೇಬೇಕು. ಸಣ್ಕಾ ಇದನ್ನ ಇಂಗ್ಲಿಷಲ್ಲಿ ಹೇಳೋ'
ಸಣ್ಕ: ವಾಟ್ ವಾಟ್ ಟೈಮ್ಸ್ ವಾಟ್ ಹ್ಯಾಪ್ಪನ್ಸೋ ಇಟ್ ಹೆಪ್ಪನ್ಸ್.
ಟೀಚರ್: (ಕೋಪದಿಂದ) ನಿನ್ನ ತಲೆಯಲ್ಲಿ ಬರೀ ಸಗಣಿ ತುಂಬಿದೆ.
ಸಣ್ಕ: ಅದಕ್ಕೇ ನೀವು ದಿನಾ ನನ್ನ ತಲೆ ತಿನ್ನೋದು.
=
ಕಳ್ಳರ ಬಾಸ್: ಏನೋ, ಹೇಗಿದೆ ಬಿಜಿನೆಸ್?
ಪಿಕ್ ಪಾಕೆಟ್ ಕಳ್ಳ: ಚಳಿಗಾಲ ಬಾಸ್, ಅದ್ಕೇ ಕಡ್ಮೆ.
ಬಾಸ್: ಚಳಿಗಾಲ ಆದ್ರೇನಂತೆ?
ಕಳ್ಳ: ಎಲ್ರೂ ಜೇಬಲ್ಲಿ ಕೈಯಿಟ್ಟು ತಿರುಗ್ತಾ ಇರ್ತಾರೆ ಬಾಸ್!


ಮುಂಬೈ: ಸೇವ್ ಎಕಾನಮಿ.
ಕೋಲ್ಕತಾ: ಸೇವ್ ವಾಟರ್.
ಬೆಂಗಳೂರು: ಸೇವ್ ಎಲೆಕ್ಟ್ರಿಸಿಟಿ.
ಕಾಶ್ಮೀರ: ಸೇವ್ ಪೀಪಲ್.
ರಾಜಸ್ಥಾನ:ಸೇವ್ ಟ್ರೀಸ್.
ಗುಜರಾತ್: ಸೇವ್ ಪುರಿ!

ಸಾಲ್ ವನಿಕ

    ಬೆಳಕು ಶಬ್ದಕ್ಕಿಂತ ಫಾಸ್ಟಾಗಿ ಚಲಿಸುತ್ತದೆ. ಅದಕ್ಕೇ ಕೆಲವರು ಮಾತಾಡಲು ಆರಂಭಿಸುವವರೆಗೂ ಜಾಣರಂತೆ ಕಾಣುತ್ತಾರೆ.
    ಟೊಮೇಟೊ ಒಂದು ಹಣ್ಣು ಎಂದು ತಿಳಿಯುವುದು ಜ್ಞಾನ. ಆದರೆ ಅದನ್ನು ಫ್ರುಟ್‌ಸಲಾಡ್‌ನಲ್ಲಿ ಹಾಕಬಾರದು ಎನ್ನುವುದು ವಿವೇಕ.
    ಸಂಜೆವಾರ್ತೆಗಳು 'ಗುಡ್ ಈವನಿಂಗ್‌' ಎಂದೇ ಶುರುವಾಗುತ್ತವೆ. ಆದರೆ ಅದು ಗುಡ್ ಈವನಿಂಗ್ ಅಲ್ಲ ಅನ್ನುವುದು ವಾರ್ತೆ ಕೇಳಿದ ಮೇಲೆ ತಿಳಿಯುತ್ತದೆ.
    ಗ್ಯಾರೇಜಿಗೆ ಹೋದ ಕೂಡಲೇ ಹೇಗೆ ನೀವು ಕಾರಿನ ಮಾಲಿಕರಾಗುವುದಿಲ್ಲವೋ, ಹಾಗೇ, ದೇವಾಲಯಕ್ಕೆ ಹೋದ ಕೂಡಲೇ ಭಕ್ತನಾಗುವುದಿಲ್ಲ.
    ನೀವು ಬದುಕಿರುವುದು ತುಂಬ ಮಂದಿಗೆ ಬೇಕಾಗಿದೆ- ಮುಖ್ಯವಾಗಿ ನಿಮಗೆ ಸಾಲ ಕೊಟ್ಟವರಿಗೆ.
    ಸುಮ್ಮನಿದ್ದು ಈತ ಮೂರ್ಖನಿರಬಹುದು ಅನ್ನಿಸಿಕೊಳ್ಳುವುದು, ಮಾತನಾಡಿ ಅದನ್ನು ಖಚಿತಪಡಿಸುವುದಕ್ಕಿಂತ ಮೇಲು.




ಕೋಟ್ & ಬೋಲ್ಡ್


ಟಿವಿ ನನ್ನ ಪಾಲಿಗೆ ಶೈಕ್ಷಣಿಕ ಮಾಧ್ಯಮ. ಯಾರಾದರೂ ಟಿವಿ ಹಾಕಿದರೆ ನಾನು ಬೇರೆಲ್ಲಿಗಾದರೂ ಹೋಗಿ ಪುಸ್ತಕ ಓದುತ್ತ ಕುಳಿತುಕೊಳ್ಳುತ್ತೇನೆ.
- ಗ್ರ್ಯೋಚೋ ಮಾರ್ಕ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments