ಖುಷಿ

ಪಿಜಿ ಮಲ್ಲಿಗೆ

ಅವತ್ತು ಬೆಳಗ್ಗೆ ಅದ್ಯಾವ ಘಳಿಗೆಯಲ್ಲಿ ಎದ್ದೆನೋ... ಹಗಲಲ್ಲಿ ಹುಣ್ಣಿಮೆಯ ದರ್ಶನವಾಗಿತ್ತು! ಪ್ರಕಾಶ ಬೆಳಕನ್ನೇ ಅನುಸರಿಸಿದ ನನಗೆ ಚಂದಿರ ಕಂಡಿದ್ದ. ಚಂದಕೆ...

ಅವತ್ತು ಬೆಳಗ್ಗೆ ಅದ್ಯಾವ ಘಳಿಗೆಯಲ್ಲಿ ಎದ್ದೆನೋ... ಹಗಲಲ್ಲಿ ಹುಣ್ಣಿಮೆಯ ದರ್ಶನವಾಗಿತ್ತು! ಪ್ರಕಾಶ ಬೆಳಕನ್ನೇ ಅನುಸರಿಸಿದ ನನಗೆ ಚಂದಿರ ಕಂಡಿದ್ದ. ಚಂದಕೆ, ಆತನ ಲುಕ್ಕಿಗೆ ಮಾತೇ ಇಲ್ಲ ಕ್ಲೀನ್‌ಬೋಲ್ಡ್. ಕ್ರಶ್ ಇರಬಹುದೆಂಬ ತಾತ್ಸಾರ ಮೂಡಿದ್ದರೂ ಅದೂ ತಾತ್ಕಾಲಿಕ. ನೀಳಕೇಶಕ್ಕೆ ತಂಗಾಳಿಯ ತಂಪು ಸೋಕಿದೊಡನೆ ಆತನ ಸ್ಪರ್ಶದಂತೆ ಭಾಸವಾಗಿತ್ತು. ಹಾಗಂತ ನಾನೇನು ಪರ್ಮಿಷನ್ ಕೊಟ್ಟಿಲ್ಲ. ಆದರೂ ಅವನು ಒಂದು ವೇಳೆ ಬೇಕಾಬಿಟ್ಟಿ ಬಂದು ಸ್ಪರ್ಶಿಸಿ ಹೋಗಿದ್ದಿದ್ದರೆ ನಾನೇನು ಹೇಳುತ್ತಿರಲಿಲ್ಲ.
ಅಂತೂ ಹೃದಯದ ಇನ್‌ಬಾಕ್ಸ್‌ನಲ್ಲಿ ಕೂತೇಬಿಟ್ಟ. ಸುಂದರ ಮೊಗವಷ್ಟೇ ಕಣ್ಣಲ್ಲಿ ಕಟ್ಟಿತ್ತೇ ವಿನಾ ಆತ ಯಾರು ಎಂಬುದೇ ತಿಳಿದಿರಲಿಲ್ಲ. ಹುಡುಗಿಯ ಹುಡುಕಾಟ ಶುರುವಾಯಿತು ಎನ್ನಿ. ಅಷ್ಟಕ್ಕೂ ನವಯುಗ ನಾರಿಮಣಿ. ಯಾರದ್ದೇ ಮಾಹಿತಿ ಬೇಕಿದ್ರೂ ಫೇಸ್‌ಬುಕ್ ಜಾಲಾಡಿದ್ರೆ ಸಾಕು ಎಂಬಷ್ಟು ತಿಳಿವಳಿಕೆ ಹೊಂದಿದವಳು. ಬಿಡುತ್ತೀನ, ಅಂತೂ ಹುಡುಕಿಯೇಬಿಟ್ಟೆ.
ಫ್ರೆಂಡ್ ರಿಕ್ವೆಸ್ಟ್ ಕಳಿಸುವಾಗ ಏನೋ ಅಳುಕು. ಸ್ವೀಕರಿಸುತ್ತಾನೋ ಇಲ್ವೋ ಎಂಬ ಆತಂಕ. ಅವನು ಸ್ವೀಕರಿಸಿಬಿಟ್ಟ. ನನಗಾದ ಆನಂದ ಅಷ್ಟಿಷ್ಟಲ್ಲ. ಹಿಮಾಲಯ ಏರಿದ ಖುಷಿ. ಆ ಕಡೆಯಿಂದ ಬಂದ ಮೆಸೇಜು ನೋಡಿ ಹಿಮಾಲಯ ಏರಿದ್ದಕ್ಕೆ ಪ್ರಶಸ್ತಿಯನ್ನೇ ಕೊಟ್ಟಹಾಗೆನಿಸಿತು. ಅವನಾಗಿಯೇ ಚಾಟ್ ಮಾಡೋಕೆ ಶುರು. ಅರರೆ, ನಾನಂದುಕೊಂಡ ಹಾಗೆ ಎಲ್ಲ ಆಗುತ್ತಿದೆಯಲ್ಲ! ನನ್ನ ಅದೃಷ್ಟವೇ ಇರಬೇಕು ಎಂದು ಆಗಾಗ ಮನಸ್ಸಲ್ಲೇ ಅದೃಷ್ಟ ದೇವತೆಗೆ ಪ್ರದಕ್ಷಿಣೆ ಹಾಕುತ್ತಿದ್ದೆ. ದನಿ ಕೇಳಬೇಕು ಎಂಬ ಕಾತರಕ್ಕೆ ಇಬ್ಬರ ಫೋನ್ ನಂಬರ್ ವಿನಿಮಯ. ನನಗೋ ಇಬ್ಬರ ಹೃದಯವೇ ವಿನಿಮಯವಾದಂಥ ಅಚ್ಚರಿ.
ದಿನಚರಿಯಲ್ಲಿ ಏನೋ ಬದಲಾದಂತೆ ಅನಿಸಿತು. ನಿಜ, ಕಾಲೇಜಿಂದ ಮನೆಗೆ ಬಂದೊಡನೆ ಅಪ್ಪ- ಅಮ್ಮ ಮನೆಯವರೊಂದಿಗೆ ಫೋನ್‌ನಲ್ಲಿ ಹರಟಿ ಊಟ ಮಾಡಿದ ಮೇಲೆ ಮನಸಲ್ಲೇನೋ ವಿದ್ಯುತ್ ಸಂಚಾರವಾಗುತ್ತಿತ್ತು. ಕಾಯುವಲ್ಲೂ ಸುಖವಿದೆ ಎಂಬ ಮಾತು ನಿಜವೆನಿಸುತ್ತಿತ್ತು. ಸರಿಯಾಗಿ 11 ಗಂಟೆಗೆ ಅವನು ಫೋನ್ ಮಾಡುತ್ತಾನೆ ಎಂದು ನಿಖರವಾಗಿ ಗೊತ್ತಿತ್ತು. ಅವನೊಂದಿಗೆ ಮಾತಾಡಿ ಫೋನ್ ಇಟ್ಟಮೇಲೆ ಮತ್ತೊಮ್ಮೆ ಅವನ ಮಾತುಗಳನ್ನು ಮೆಲುಕು ಹಾಕುತ್ತಾ ನಿದ್ರೆಗಿಳಿಯುತ್ತಿದ್ದೆ. ಮಾತಿನ ಮಂಟಪ ನಿರ್ಮಾಣವಾದಂತೆ, ಮದುವೆ ಮಂಟಪದಲ್ಲಿ ಇಬ್ಬರೂ ಕೂರುವ ಆಲೋಚನೆ ಮೂಡಿ ಮನ ಪುಳಕಗೊಳಿಸುತ್ತಿತ್ತು. ನೋಟ್‌ಬುಕ್‌ಗಳಲ್ಲಿ ಅವನ ಹೆಸರಿನೊಂದಿಗೆ ನನ್ನ ಹೆಸರು ಸೇರಿಸಿ ಬರೆಯುವಾಗ ಥ್ರಿಲ್ಲಾಗುತ್ತಿತ್ತು. ನಾನೇ ಸೃಷ್ಟಿಸಿದ ಹೆಸರನ್ನು ಗೆಳತಿಯರಿಗೆ ತೋರಿಸುವುದು ಮಜವೆನಿಸುತ್ತಿತ್ತು. ತಾನು ಪ್ರೀತಿಸುತ್ತಿರುವ ವಿಚಾರ ಆತನಿಗೆ ಹೇಳಬೇಕು ಎಂದು ಹಲವು ದಿನಗಳಿಂದಲೇ ವಿಚಾರ ಮಾಡುತ್ತಿದ್ದೆ. 'ಐ ಲವ್ ಯು' ಎಂಬ ಸಾಲನ್ನು ಕಂಠಪಾಠ ಮಾಡಿದ್ದೂ ಆಯಿತು. ಅಂತೂ ಒಂದಿನ ಪ್ರೇಮ ನಿವೇದನೆ ಮಾಡಲೇಬೇಕು ಎಂದು ಪಣ ತೊಟ್ಟಿದ್ದೆ. ಫೋನಾಯಿಸಿದೆ. ಮೊದಲ ಪ್ರಯತ್ನ ಮಿಸ್ ಕಾಲ್‌ನಲ್ಲೇ ಠುಸ್ಸು. ಎರಡನೇ ಪ್ರಯತ್ನದಲ್ಲಿ ಏನೇನು ಹೇಳ್ಬೇಕಂತಿದ್ನೋ ಅದಕ್ಕಿಂತ ಸ್ವಲ್ಪ ಜಾಸ್ತಿನೇ ಹೇಳ್ಬಿಟ್ಟೆ. ಅವನೂ ಬಹಳ ಆಸಕ್ತಿಯಿಂದಲೇ ಕೇಳಿಸಿಕೊಂಡ. ಅಂತೂ ಒಂದು ಹೆರಿಗೆ ಆದ ಸಂತೃಪ್ತಿ. ಅವನ ಪ್ರತ್ಯುತ್ತರ ಕೇಳಲು ಬಹಳ ಜಾಗೃತಳಾದೆ. ಅಮ್ಮನ ತುತ್ತನ್ನು ತಿರಸ್ಕರಿಸುವ ಮಗುವಿನಂತೆ 'ಊಹ್ಞೂಂ' ಎಂದಿದ್ದ. ಮನಸ್ಸಿಗೆ ಆಘಾತವಾಗತ್ತು. ನಿಶ್ಕಲ್ಮಷ ಪ್ರೀತಿ ಧಿಕ್ಕರಿಸಿದ ಹುಡುಗ. ಆದರೂ ಆತನನ್ನು ದೂಷಿಸಲೊಲ್ಲೆ.
ಓದುತ್ತಿದ್ದ ಕಣ್ಣುಗಳು ತೇವವಾಗಿದ್ದವು. ಆಕೆ ಪಿ.ಜಿ. ತೊರೆದು ದಿನಗಳೇ ಕಳೆದಿದ್ದವು. ಇನ್ನು ಯಾವಾಗಾದರೂ ಇತ್ತೆಡೆ ಬಂದರೆ ಬಿಟ್ಟು ಹೋಗಿರುವ ಈ ಡೈರಿ ಕೊಡಬೇಕು ಎಂದು ಜೋಪಾನವಾಗಿ ತೆಗೆದಿರಿಸಿದೆ.


-  ಸ್ವಸ್ತಿಕಾ ಉಜಿರೆ
swasthikamallya@gmail.com




'ಹ್ಯಾಗೆ ಬರೆಯೋದು?', 'ನಾವ್ ಬರೆದಿದ್ದನ್ನ ಪ್ರಕಟಿಸ್ತಾರಾ?' ಎಂಬ ಆತಂಕ ಬದಿಗಿಟ್ಟು ನಿಮ್ಮ ಮೊದಲಬರಹಗಳನ್ನು ನಮಗೆ ಕಳುಹಿಸಿ. 'ಇದೇ ಮೊದಲ ಬಾರಿಗೆ ನನ್ನ ಬರಹ ಪ್ರಕಟವಾಗಿದೆ' ಎಂಬ ಖುಷಿ ನಿಮ್ಮದಾದರೆ ಸಾಕು. ತೊದಲು ಬರಹಗಳಿಗೇ ಇರುವ ಅಂಕಣ ಇದು, 'ಮೊದಲ ಖುಷಿ'. ನೀವೂ ಗೀಚಿ...
khushimag@gmail.com
ನಮ್ಮ ಅಂಚೆ ವಿಳಾಸ
ಕನ್ನಡಪ್ರಭ, 'ಮೊದಲ ಖುಷಿ' ವಿಭಾಗ, ನಂ.1, ಕ್ವೀನ್ಸ್ ರಸ್ತೆ, ಬೆಂಗಳೂರು-01

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!