ಕೇಸರಿ ಕೆಂಪು ಬಣ್ಣದ ಆಕರ್ಷಕ ರಚನೆ ಉಳ್ಳ ಹೂವು. ಕನ್ನಡದಲ್ಲಿ ನಾಗಲಿಂಗ ಪುಷ್ಪ. ತಮಿಳಿನಲ್ಲಿ ನಾಗಲಿಂಗಂ. ಹಿಂದಿಯಲ್ಲಿ ಹೂವು. ನೋಡಲು ಅತ್ಯಂತ ಸುಂದರ.
ಇಂಗ್ಲೀಷಿನಲ್ಲಿ ಕೌರೌಪಿತ ಗುಯೇನೆನ್ಸಿಸ್. ಇದು ಸದಾ ಹಸಿರು ಮರ. ಲೆಸಿಥಿಯೇಸಿಯಾ ಕುಟುಂಬಕ್ಕೆ ಸೇರಿದ ಮರ. ಗಿಡ ಬೆಳೆಯುತ್ತಲೇ ಇದರಲ್ಲಿ ಅನೇಕ ಹೂವುಗಳು ಕಂಡು ಬರುತ್ತವೆ. ಇದರಲ್ಲಿ ಕಂಡುಬರುವ ದೊಡ್ಡ ಮದ್ದುಗುಂಡಿನ ರೀತಿಯ ದೊಡ್ಡ ದೊಡ್ಡ ಕಾಯಿಗಳು.
ನಾಗಲಿಂಗ ಮರ 25 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಮೂರು ಮೀಟರ್ ಉದ್ದದ ಗೊಂಚಲುಗಳು ಕಂಡು ಬಂದು ಅದರಲ್ಲಿ ಹೂವುಗಳು ಕಾಣಿಸುತ್ತವೆ. ಫ್ರೆಂಚ್ ಸಸ್ಯ ಶಾಸ್ತ್ರಜ್ಞ 1755ರಲಿ ವೈಜ್ಞಾನಿಕ ಹೆಸರು ನೀಡಿದನು.
ಅಮೆಜಾನ್ ಕಣಿವೆಯ ಮೂಲದ ಮರ ಇದು. ಭಾರತ, ಥೈಲ್ಯಾಂಡ್ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ನಾಗಲಿಂಗ ಹೂವುಗಳಲ್ಲಿ ಮಧು ರಸ ಇಲ್ಲ. ಪರಾಗಕ್ಕಾಗಿ ಜೇನುನೊಣಗಳು ಹೂವು ಅರಸಿಕೊಂಡು ಬರುತ್ತವೆ. ಮರದ ತೊಗಟೆಯ ಮೇಲೆ ಎದ್ದು ಬಂದಂತಿರುವ ಗೊಂಚಲುಗಳು ಈ ಮರದ ವಿಶೇಷತೆ. ನಾಗಲಿಂಗ ಹೂವುಗಳಲ್ಲಿ ಆರು ದಳಗಳು ಇರುತ್ತವೆ. ಅತ್ಯಂತ ಸುವಾಸನೆಯಿಂದ ಕೂಡಿರುತ್ತವೆ. ಭಾರತದಲ್ಲಿ ಈ ಮರದ ಸುತ್ತ ಧಾರ್ಮಿಕ ನಂಬಿಕೆಗಳು ಬೆಸೆದುಕೊಂಡಿವೆ. ಶಿವ ದೇವಾಲಯಗಳಲ್ಲಿ ಮರವನ್ನು ನೆಟ್ಟು ಬೆಳೆಸಲಾಗುತ್ತದೆ. ಶಿವಕಮಲ ಎಂಬ ಹೆಸರೂ ಹಿಂದಿಯಲ್ಲಿ ಇದೆ. ಕೈಲಾಸಪತಿ ಹೂವು ಎಂದೂ ಉತ್ತರ ಭಾರತದಲ್ಲಿ ಕರೆಯುವ ವಾಡಿಕೆಯಿದೆ. ತೆಲುಗಿನಲ್ಲಿ ಮಲ್ಲಿಕಾರ್ಜುನ ಪುಷ್ಪ ಎಂದು ಕರೆಯುವರು.
ನಾಗಲಿಂಗ ಪುಷ್ಪದ ದಳಗಳು ನಾಗನ ಹೆಡೆಯನ್ನು ಹೋಲುವುದು. ಶಿವಲಿಂಗವನ್ನು ರಕ್ಷಿಸುವ ನಾಗನನ್ನು ಹೋಲುತ್ತದೆ ಎಂದು ಅನೇಕರ ನಂಬಿಕೆ.
ಶ್ರೀಲಂಕಾ ಥೈಲ್ಯಾಂಡ್ ಹಾಗೂ ಇತರ ಬೌದ್ದ ದೇಶಗಳಲ್ಲಿ ನೆಟ್ಟು ಬೆಳೆಸಲಾಗುತ್ತದೆ. ಈ ಮರದಲ್ಲಿ ಜೀವಿ ನಿರೋಧಕ ಶಕ್ತಿಯಿದೆ. ಹೀಗಾಗಿ ಔಷಧಿಗಳಲ್ಲಿ ಬಳಸಲಾಗುತ್ತದೆ. ಶೀತ, ಹೊಟ್ಟೆ ನೋವಿನ ಸಂಧರ್ಭದಲ್ಲಿ ತೊಗಟೆ ಬಳಸುತ್ತಾರೆ. ಎಲೆಯ ರಸ ಚರ್ಮದ ಖಾಯಿಲೆಗೆ ಉಪಯೋಗವಿದೆ.
ಮದ್ದು ಗುಂಡಿನ ಗಾತ್ರದ ಕಾಯಿಗಳನ್ನು ಹೊಂದಿರುವುದರಿಂದ ಕ್ಯಾನನ್ ಅಬಲ್‌ಲ್ಟ್ರೀ ಎಂಬ ಹೆಸರು ಜನಪ್ರಿಯ. ಈ ಹಣ್ಣಿನ ಒಳಭಾಗ ಅತ್ಯಂತ ಕೆಟ್ಟ ವಾಸನೆಯಿಂದ ಕೂಡಿದೆ. ಸಂಸ್ಕೃತದಲ್ಲಿ ನಾಗಕೇಸರವೆಂಬ ಹೆಸರಿನ ಹೂವನ್ನು ಉರಿಯೂತ ಶಮನಕ್ಕೆ ಹೂವಿನ ಬಳಕೆ ಇದೆ. ಹೊಟ್ಟೆಯ ವಾಯು ತೊಂದರೆಗೆ ಬಳಸುವ ಔಷದಗಳಲ್ಲಿ ನಾಗಲಿಂಗ ಪುಷ್ಪವನ್ನು ಇತರ ಘಟಕಗಳೊಂದಿಗೆ ಉಪಯೋಗಿಸುತ್ತಾರೆ.
- ರಮೇಶ್ ಕೈಂತಜೆ
ಚಿತ್ರ: ರಾಮ್ ನರೇಶ್ ಮಂಚಿ