ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಹೋಮ್ಸ್ ಮುಕ್ತ ಮುಕ್ತ

ಶೆರ್ಲಾಕ್ ಹೋಮ್ಸ್ ಗೊತ್ತಲ್ಲ? ಸರ್ ಆರ್ಥರ್ ಕಾನನ್ ಡಾಯಲ್ ಸೃಷ್ಟಿಸಿದ ಈ ಪತ್ತೇದಾರ ಜನಪದ ಕತೆಯೇ ಆಗಿದ್ದಾನೆ. ಹೌದು...

Rashmi Kasaragodu
Updated On : 4 Jan 2014, 4:01 am

ಶೆರ್ಲಾಕ್ ಹೋಮ್ಸ್ ಗೊತ್ತಲ್ಲ? ಸರ್ ಆರ್ಥರ್ ಕಾನನ್ ಡಾಯಲ್ ಸೃಷ್ಟಿಸಿದ ಈ ಪತ್ತೇದಾರ ಜನಪದ ಕತೆಯೇ ಆಗಿದ್ದಾನೆ. ಹೌದು, ಈಗ ಆತ ಜನಪದದ ಸೊತ್ತು ಎಂಬುದನ್ನು ಅಮೆರಿಕದ ಒಂದು ಕೋರ್ಟ್ ಕೂಡ ದೃಢಪಡಿಸಿದೆ. 1923ರ ಹಿಂದಿನ ಡಾಯಲ್ ರಚನೆಗಳೆಲ್ಲ ಈಗ ಪಬ್ಲಿಕ್ ಡೊಮೈನ್ ಅರ್ಥಾತ್ ಸಾರ್ವಜನಿಕ ಸೊತ್ತು. ಇಲಿನಾಯ್ಸ್ ಕೋರ್ಟ್‌ನ ತೀರ್ಪಿನಂತೆ, ಇನ್ನು ಮುಂದೆ ಹೋಮ್ಸ್‌ನನ್ನು ನಾವು ನಮಗೆ ಬೇಕಾದಂತೆ ಮರು ಸೃಷ್ಟಿಸಿಕೊಳ್ಳಬಹುದು. ಇದು ಡಾಯಲ್ ಉತ್ತರಾಧಿಕಾರಿಗಳ ವಿರುದ್ಧ ಬಂದ ತೀರ್ಪು.
ಭಾರತದಲ್ಲಿ, ಕನ್ನಡದಲ್ಲಿ ಇಂಥ ತೀರ್ಪಿನ ವ್ಯಾಖ್ಯಾನ ಸುಲಭವಲ್ಲ. ಇಲ್ಲಿ ಬೌದ್ಧಿಕ ಹಕ್ಕಿನ ಅಸ್ತ್ರ ಹಿಡಿದು ತಮ್ಮ ಪೂರ್ವಜರ ಕೃತಿಗಳನ್ನು ನಿಧಿಯ ಸರ್ಪಗಳಂತೆ ಕಾಯುತ್ತಿರುವವರೂ ಇದ್ದಾರೆ- ಇವರು ತಾವೂ ಅನುಭವಿಸರು, ಇತರರೂ ಅನುಭವಿಸಲು ಬಿಡರು. ಹಾಗೇ ಇವರ ಕೃತಿಗಳ ಹಕ್ಕುಗಳನ್ನು ಲಪಟಾಯಿಸಿ ಬಾಚಿ ನಗದೀಕರಿಸಿಕೊಳ್ಳುವ ಹಾಳು ಹದ್ದುಗಳೂ ಸಾಕಷ್ಟು. ಉದಾಹರಣೆಗಳು? ಕಾಪಿರೈಟ್‌ಗೊಳಪಟ್ಟಿವೆ!
ಪ್ರತಿಮೆಗಳು
ಒಮ್ಮೆ ಆ ದೇಶದ ಪ್ರಮುಖ ನಗರಗಳಲ್ಲಿ ನಿಲ್ಲಿಸಲಾಗಿದ್ದ ಪ್ರತಿಮೆಗಳಿಗೆ ಜೀವ ಬಂತು. ಅವು ಇದ್ದಕ್ಕಿದ್ದಂತೆ ದಾಪುಗಾಲು ಹಾಕುತ್ತ ಊರ ತುಂಬಾ ನಡೆದಾಡತೊಡಗಿದವು. ಅವುಗಳಲ್ಲಿ ತೀರಿಹೋದ ಹಿರಿಯರ ಆತ್ಮಗಳೇನೂ ಇದ್ದಂತಿರಲಿಲ್ಲ. ಯಾಕೆಂದರೆ ಅವು ಊರ ಜನರಲ್ಲಿ ಭೀತಿ ಹುಟ್ಟಿಸಿದವೇ ವಿನಾ, ಭೀತಿಯನ್ನು ಓಡಿಸುವುದಕ್ಕೇನು ಬೇಕೋ ಅದನ್ನು ಮಾಡಲಿಲ್ಲ.  ಇದರ ಮಧ್ಯೆ, ಊರಲ್ಲಿ ನಿಜಕ್ಕೂ ಒಳ್ಳೆಯವರು ಎಂದು ಹೆಸರಾಗಿದ್ದವರು ಕೆಲವರು ಇದ್ದಕ್ಕಿದ್ದಂತೆ ಕಲ್ಲಾಗಿಬಿಟ್ಟರು. ಹಾಗಂತ ಅವರು ಹೆಣಗಳೇನೂ ಆಗಿರಲಿಲ್ಲ. ಚಲನೆಯೇ ಇಲ್ಲದೆ ಕಲ್ಲಾಗಿ ನಿಂತುಬಿಟ್ಟ ಇವರನ್ನು ಏನು ಮಾಡುವುದು? ಮುನ್ಸಿಪಾಲಿಟಿ ಯೋಚಿಸಿತು. ಬಳಿಕ ಯಾರೋ ಬುದ್ಧಿವಂತರ ಸಲಹೆಯಂತೆ, ಅವುಗಳನ್ನೆಲ್ಲ ತಂದು, ಹಿಂದೆ ಪ್ರತಿಮೆಗಳಿದ್ದ ಜಾಗದಲ್ಲಿ ನಿಲ್ಲಿಸಲಾಯಿತು.



-ಹರೀಶ್ ಕೇರ
harishkera@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments