E ಇಲ್ಲದೆ ಕಾದಂಬರಿ ಬರೆದ!
ಇಂಗ್ಲಿಷಿನಲ್ಲಿ ಅತಿಹೆಚ್ಚು ಬಳಕೆಯಾಗುವ ಪದ 'ಊ'. ಆದರೆ, ಅಂಥ 'ಊ'ನೇ ಇಲ್ಲದೆ ಇಲ್ಲೊಬ್ಬ ಪುಸ್ತಕ ಬರೆದಿದ್ದಾನೆ. ಅದೂ ಕಾದಂಬರಿಯನ್ನ! ಆತನ ಹೆಸರು ಜಾರ್ಜೆಸ್ ಪೆರೆಕ್. ಇದರಲ್ಲಿ ಈತನ ಹೆಸರಿನಲ್ಲಿ ಮಾತ್ರ 'ಊ' ಇದೆ. ಆದರೆ, ಒಳಗಿನ ಪುಟಗಳಲ್ಲಿ ಎಲ್ಲೂ ಅದರ ಬಳಕೆಮಾಡಿಲ್ಲ. 'ಪದಗಳ ಆಟ'ದ ಮೋಜಿಗಾಗಿ ಬರೆದ ಈ ಕಾದಂಬರಿಯಲ್ಲಿ ಒಟ್ಟಿರುವುದು 300 ಪುಟಗಳು. ಅಂದಹಾಗೆ, ಜಾರ್ಜೆಸ್ ಈ ಕೃತಿಯಲ್ಲಿ ಅಲ್ಲಲ್ಲಿ ಫ್ರೆಂಚ್ ಪದಗಳನ್ನೂ ಮಿಕ್ಸ್ ಮಾಡಿ 'ಊ' ಇಂದ ಬಚಾವಾಗಿದ್ದಾನೆ. ಲೇಖಕನೇ ಹೇಳುವ ಹಾಗೆ ಇದು 'ವರ್ಡ್ ಪಝಲ್'. ಅಷ್ಟಕ್ಕೂ ಜಾರ್ಜೆಸ್ ಒಬ್ಬನೇ 'ಊ'ರಹಿತ ಕಾದಂಬರಿ ಬರೆದು ಸಾಧನೆ ಮಾಡಿಲ್ಲ. 1939ರಲ್ಲಿ ಅರ್ನೆಸ್ಟ್ ವಿನ್ಸೆಂಟ್ ರೈಟ್ ಎಂಬಾತ 50 ಸಾವಿರ ಪದಗಳಲ್ಲಿ ಒಂದು ಕೃತಿ ಬರೆದಿದ್ದ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.