ಖುಷಿ

ಟ್ವಿಟ್ಟರೇಚರ್

'ನಾನು ಬದುಕಿನ ಬಗ್ಗೆ ಕಲಿತದ್ದನ್ನು ಮೂರೇ ಮೂರು ಪದಗಳಲ್ಲಿ ಹಿಡಿದಿಡಬಲ್ಲೆ- ಇದು ಮುಂದಕ್ಕೆ ಸಾಗುತ್ತದೆ...''(it goes on)...

'ನಾನು ಬದುಕಿನ ಬಗ್ಗೆ ಕಲಿತದ್ದನ್ನು ಮೂರೇ ಮೂರು ಪದಗಳಲ್ಲಿ ಹಿಡಿದಿಡಬಲ್ಲೆ- ಇದು ಮುಂದಕ್ಕೆ ಸಾಗುತ್ತದೆ...''(it goes on). ಅಂದವನು ರಾಬರ್ಟ್ ಫ್ರಾಸ್ಟ್ ಈತ ಕಳೆದ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದ ಅಮೆರಿಕದ ಕವಿ.
ಮೂರು ಪದಗಳು, ನಮ್ಮ ಕಾಲಕ್ಕೆ ಬಂದಾಗ 140 ಅಕ್ಷರಗಳಾಗಿಬಿಟ್ಟಿವೆ. ಟ್ವಿಟ್ಟರ್‌ನಲ್ಲಿ ನಾವು ಮಾಡುವ ಒಂದು ಟ್ವೀಟ್‌ನ ಶಬ್ದಮಿತಿ ಇಷ್ಟೇ. ಆದರೆ ಇಷ್ಟರಲ್ಲೇ ಬದುಕಿನ ಸಾರಸಂಗ್ರಹವನ್ನೆಲ್ಲ ಹಿಡಿದಿಡಬಹುದು ಎಂಬುದು ಹೊಸ ತಲೆಮಾರಿನ ಅಂಬೋಣ. ಟ್ವಿಟ್ಟರ್‌ನಲ್ಲಿ ಸಾಹಿತ್ಯ ರಚನೆ ಹೊಸ ಟ್ರೆಂಡ್. ಹೀಗೆ ಪೋಸ್ಟ್ ಮಾಡಿದ್ದನ್ನು ಸಂಕಲಿಸಿ ಪುಸ್ತಕಗಳನ್ನೂ ತರಲಾಗುತ್ತಿದೆ. ಜಗತ್ಪ್ರಸಿದ್ಧ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇದಕ್ಕಾಗಲೇ 'ಟ್ವಿಟ್ಟರೇಚರ್‌' ಎಂಬ ಹೆಸರನ್ನೂ ಟಂಕಿಸಿದೆ.
ಜಗತ್ತಿನ ಮಹಾ ಮಹಾ ಕೃತಿಗಳ ಸಾರವನ್ನೆಲ್ಲ ಟ್ವಿಟ್ಟರೇಚರ್‌ನಲ್ಲಿ ಹೇಳಬಹುದೆ ಎಂಬ ಪ್ರಯತ್ನಗಳೂ ಆಗಿವೆ. ಲೂಸಿ ಕೋಟ್ಸ್ ಎಂಬಾಕೆ 100 ಗ್ರೀಕ್ ಪುರಾಣಕತೆಗಳನ್ನು 100 ಟ್ವೀಟ್‌ಗಳಲ್ಲಿ ಹೇಳಿದ್ದಾಳೆ. ಅಮೆರಿಕದಲ್ಲಿ ನಡೆಯುತ್ತಿರುವ 'ಟ್ವಿಟ್ಟರ್ ಫಿಕ್ಷನ್ ಫೆಸ್ಟಿವಲ್‌'ಗೆ ಈಗ ಎರಡು ವರ್ಷ.
ನಮ್ಮ ಮಹಾ ಕೃತಿಗಳನ್ನು ಟ್ವಿಟ್ಟರೇಚರ್‌ಗೆ ಇಳಿಸಿದರೆ ಹೇಗಿರಬಹುದು?

ಮಲೆಗಳಲ್ಲಿ ಮದುಮಗಳು
ಕತ್ತಲೆಯಲ್ಲಿ ಕಾಡು ಬಿದ್ದ ಮದುಮಗಳು ಚಿನ್ನಮ್ಮ ಹೊಸ ಬಾಳು ಕಂಡುಕೊಂಡಳು. ಗುತ್ತಿಯ ಇನ್ನೊಂದು ಜೀವವಾದ ಹುಲಿಯ ತುಂಗೆಯ ಪ್ರವಾಹದಲ್ಲಿ ಕೊಚ್ಚಿಹೋಯ್ತು. ಮಲೆನಾಡಿನ ನಿಬಿಡ ಕಾನನ ಇದೆರಡಕ್ಕೂ ಮೌನಸಾಕ್ಷಿಯಾಯ್ತು.

ಮೂಕಜ್ಜಿಯ ಕನಸುಗಳು
ಗತಕಾಲದ ವಸ್ತುಗಳನ್ನು ಮುಟ್ಟಿದಾಗ ಮೂಕಜ್ಜಿಯ ಮೈ ಮನಸ್ಸುಗಳು ಕಂಪಿಸುತ್ತಿದ್ದವು. ಅವು ರವಾನಿಸಿದ ಸ್ಪಂದನ ಆಕೆಯ ಬಾಯಿಯಿಂದ ಕತೆಗಳಾಗಿ ಹೊಮ್ಮುತ್ತಿತ್ತು.

ಶಿಕಾರಿ
ತನ್ನ ಪಾಡಿನ ಕಾರಣ ತಿಳಿಯದೆ, ಪಾರಾಗುವ ದಾರಿ ತಿಳಿಯದೆ ವಿಲವಿಲ ಒದ್ದಾಡುತ್ತಿದ್ದ ನಾಗಪ್ಪ ತನ್ನನ್ನು ನಿರಂತರವಾಗಿ ಬೇಟೆಯಾಡಲು ಬೆನ್ನಟ್ಟಿದ್ದ ವ್ಯಕ್ತಿಗಳಿಗೆ 'ಒಂದೂ ಮಗನೇ' ಎಂದು ಬೈಯುತ್ತಲೇ ಮುಕ್ತನಾಗುವ ದಾರಿ ಹುಡುಕಿಕೊಂಡ.


-ಹರೀಶ್ ಕೇರ
harishkera@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜನರು ಬಿಜೆಪಿ, ಮೋದಿ ಅವರೊಂದಿಗಿದ್ದಾರೆ': 2029ರ ಚುನಾವಣೆಯಲ್ಲಿ ಮತ್ತೊಂದು 'ಭಾರಿ ಸೋಲಿಗೆ' ಸಿದ್ಧರಾಗಿ: ರಾಹುಲ್ ಗಾಂಧಿ ವಿರುದ್ಧ ಅಮಿತ್ ಶಾ ವಾಗ್ದಾಳಿ

'ನನ್ನ ಜೊತೆ ಮಲಗಿದ್ರೆ ಸಿನಿಮಾ ಅವಕಾಶ’: ಚಿಕ್ಕ ವಯಸ್ಸಿಗೆ ಚಿತ್ರರಂಗ ಬಿಟ್ಟಿದ್ದೇಕೆ; ಸೌಥ್ ನಿರ್ದೇಶಕನ ಬಗ್ಗೆ ನಟಿ ಶಾಕಿಂಗ್ ಹೇಳಿಕೆ!

3 ಬಾರಿ ಸಿಎಂ ಕೂಡ ಸುರಕ್ಷಿತವಾಗಿಲ್ಲ: ಮಮತಾ ಬ್ಯಾನರ್ಜಿ ಮೇಲೆ ಚಾಕುವಿನಿಂದ ದಾಳಿಗೆ ಯತ್ನ; ಮಹಿಳೆ ಬಂಧನ

ವಿಚಿತ್ರವಾದ್ರೂ ಸತ್ಯ: ಅಪ್ರಾಪ್ತೆಯನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ; ರೋಬೋಟ್ ವಶಕ್ಕೆ ಪಡೆದ ಪೊಲೀಸರು!

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!