ಪ್ಞೀಂ ಪ್ಞೀಂ...
ಎಲ್ಲ ಕ್ರೀಡಾಳುಗಳಿಗೂ ಫಿಟ್ನೆಸ್ ಪರೀಕ್ಷೆ ಇದ್ದಿದ್ದೆ. ಹಾಗೆಯೇ ಫುಟ್ಬಾಲ್ ಪಂದ್ಯಗಳ ರೆಫ್ರೀಗಳಿಗೂ ಫಿಟ್ನೆಸ್ ಪರೀಕ್ಷೆ ಕಾಮನ್. ಫುಟ್ಬಾಲ್ ರೆಫ್ರೀ ..
ಎಲ್ಲ ಕ್ರೀಡಾಳುಗಳಿಗೂ ಫಿಟ್ನೆಸ್ ಪರೀಕ್ಷೆ ಇದ್ದಿದ್ದೆ. ಹಾಗೆಯೇ ಫುಟ್ಬಾಲ್ ಪಂದ್ಯಗಳ ರೆಫ್ರೀಗಳಿಗೂ ಫಿಟ್ನೆಸ್ ಪರೀಕ್ಷೆ ಕಾಮನ್. ಫುಟ್ಬಾಲ್ ರೆಫ್ರೀ ಆಗಬೇಕಾದರೆ, 30 ಸೆಕೆಂಡ್ಗಳಲ್ಲಿ 150 ಮೀಟರ್ ಓಡಬೇಕು. ಸ್ಪರ್ಧೆಯಲ್ಲಿ ಒಂದು ಹೆಜ್ಜೆ ಹಿಂದಿದ್ದರೂ ಠುಸ್ಸಂತಲೇ ಲೆಕ್ಕ.
ಕ್ರಿಕೆಟ್, ಹ್ಯಾಂಡ್ಬಾಲ್, ವಾಲಿಬಾಲ್, ಬಾಸ್ಕೆಟ್ಬಾಲ್, ವಾಲಿಬಾಲ್ಗಳಲ್ಲೂ ರೆಫೆರೀ ಇರುತ್ತಾರೆ. ಆದರೆ, ಇವೆಲ್ಲಕ್ಕಿಂತ ಫುಟ್ಬಾಲ್ ರೆಫ್ರೀ ಆಗೋದು ಕಠಿಣ ವಿಚಾರ. ಫುಟ್ಬಾಲ್ ಆಟಗಾರರು ಇತರೆ ಎಲ್ಲ ಕ್ರೀಡಾಳುಗಳಿಂದ ಚುರುಕಿರಬೇಕು. ಈ ಪುಟ್ಬಾಲಿಗನಿಗಿಂತ ಚುರುಕು ರೆಫ್ರೀ ಇರಬೇಕು. ಎಲ್ಲ ಆಟಗಾರರ ಚಲನವಲನಗಳನ್ನು ಅವರು ನೋಡಿಕೊಳ್ಳಬೇಕಿರುತ್ತದೆ. ಅಂದಹಾಗೆ, ಬರುವ ವರ್ಷ ನಡೆಯಲಿರುವ ವಿಶ್ವಕಪ್ನಲ್ಲಿ ರೆಫೆರೀಗಳು ಫ್ರೀ ಕಿಕ್ ಸ್ಥಳ ಬದಲಾಗದಂತೆ, ಆ ಸ್ಥಳದಲ್ಲಿ ಕೆಲವೇ ಕ್ಷಣಗಳಲ್ಲಿ ಮಾಯವಾಗುವ ಸ್ಪ್ರೇ ಹಾಕುವ ಕಾರ್ಯವನ್ನೂ ನಿರ್ವಹಿಸಬೇಕಿದೆ.
ಅರ್ಹತೆ ಏನು?
ಹತ್ತನೇ ತರಗತಿ ಓದಿ ಫುಟ್ಬಾಲ್ ನಿಯಮ ತಿಳಿದುಕೊಂಡರೆ ಸಾಕು. ಫುಟ್ಬಾಲ್ ರೆಫ್ರೀ ಆಗಲು ಬೇಕಾದ ಮೊದಲ ಅರ್ಹತೆ ಇದು. ಉದಾಹರಣೆ ನೋಡಿ... ಐ-ಲೀಗ್ನಲ್ಲಿ ಮುಖ್ಯ ರೆಫ್ರೀಯಾಗಿ ಹೆಸರು ಮಾಡಿರುವ ಕೇರಳದ ಸಂತೋಷ್ ಕುಮಾರ್ ಮೊದಲು ಆಟೋ ಚಾಲಕರಾಗಿದ್ದರು. ಅಲ್ಲದೆ, ವಿಶ್ವದಲ್ಲೇ ರೆಫ್ರೀಗಳಿಗೆ ಅತಿ ಹೆಚ್ಚು ಮೊತ್ತ ನೀಡುವ ಚೀನಾದಲ್ಲಿ ಅವರು ಕಾರ್ಯನಿರ್ವಹಿಸಿದ್ದರು. ಅನೇಕ ಸಲ ರೆಫ್ರೀಗಳು ತೆಗೆದುಕೊಳ್ಳುವ ನಿರ್ಧಾರಗಳನ್ನು ಆಟಗಾರರು ವಿರೋಧಿಸಬಹುದು. ಅದು ಕೆಲ ಬಾರಿ ತಾರಕಕ್ಕೂ ಏರಬಹುದು. ಹೀಗಾಗಿ ತುಂಬಾ ಬಲಿಷ್ಠವಾಗಿ ಮತ್ತು ಆಕ್ರಮಣಕಾರಿಯಾಗಿರುವ ಫುಟ್ಬಾಲ್ ಆಟಗಾರರೊಂದಿಗೆ ರೆಫ್ರೀಗಳು ಸೂಜಿಗೆ ಮುತ್ತು ಕೊಟ್ಟಷ್ಟು ಸೂಕ್ಷ್ಮವಾಗಿ ವರ್ತಿಸಬೇಕು.
ಆಯ್ಕೆ ಹೇಗೆ?
ಆರಂಭದಲ್ಲಿ ಲೀಗ್ ಹಂತಗಳಿಗೆ ರೆಫೆರೀಗಳನ್ನು ಆಯ್ಕೆಮಾಡಲಾಗುತ್ತದೆ. ಇಲ್ಲಿನ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಹಂತ ಹಂತವಾಗಿ ಮೇಲೇರಬಹುದು. ಇಂಗ್ಲಿಷಿನಲ್ಲಿ ಹಿಡಿತ ಅತಿಮುಖ್ಯ. ಹಾಗಿದ್ದರೆ ವಿಶ್ವದ ಯಾವುದೇ ಕ್ರೀಡಾಂಗಣದಲ್ಲೂ ಮಿಂಚಬಹುದು.
ಗಳಿಕೆ ಏನು?
ಕ್ರಿಕೆಟ್ನ ರೆಫ್ರೀಗಳು ವರ್ಷದಲ್ಲಿ ಕೋಟಿಗಟ್ಟಲೆ ದುಡಿಯುತ್ತಾರೆ. ಆದರೆ, ಫುಟ್ಬಾಲ್ನಲ್ಲಿ ತೀರಾ ಕೆಳ ಹಂತದಿಂದ ಮೇಲೆ ಬರಬೇಕು. ಅಲ್ಲಿ ಪ್ರತಿ ಪಂದ್ಯಕ್ಕೆ ಅಲ್ಪ ಮೊತ್ತ ಸಿಗುತ್ತದೆ. ಆದರೆ, ಐ-ಲೀಗ್ಗೆ ಬಂದಾಗ ಪ್ರತಿಯೊಂದು ಪಂದ್ಯಕ್ಕೆ ಊಟ, ವಸತಿ ಹಾಗೂ ಪ್ರಯಾಣ ಭತ್ಯೆ ಹೊರತುಪಡಿಸಿ ರು. 2000ದವರೆಗೂ ಸಂಭಾವನೆ ಸಿಗುತ್ತದೆ. ಫುಟ್ಬಾಲ್ಗೆ ಹೆಸರಾಗಿರುವ ಇಂಗ್ಲೆಂಡ್ಗಿಂತ ಚೀನಾ ಮತ್ತು ಜಪಾನ್ಗಳು ರೆಫ್ರೀಗಳಿಗೆ ಹೆಚ್ಚು ಸಂಬಳ ನೀಡುತ್ತವೆ. ಪಂದ್ಯವೊಂದಕ್ಕೆ ಅವು ನೀಡುವ ಮೊತ್ತ ರು. 80 ಸಾವಿರಕ್ಕೂ ಅಧಿಕ. ಇನ್ನು ಸಹಾಯಕ ರೆಫ್ರೀಗಳಿಗೆ ರು. 45 ಸಾವಿರ ನೀಡುತ್ತವೆ.- ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.