ಕಡಸೂರು ಶಂಕರನಾರಾಯಣ, ಮೈಸೂರು
ಈಗಿನ ಸರ್ಕಾರ 'ಶಾದಿಭಾಗ್ಯ', ಮುಂದಿನ ಸರ್ಕಾರ 'ಮಕ್ಕಳ ಭಾಗ್ಯ' ತರಬಹುದೆ?
- ಆ ನಂತರದ ಸರ್ಕಾರಗಳಿಗೆ 'ಆಹಾರ ಭಾಗ್ಯ', 'ವಿದ್ಯಾ ಭಾಗ್ಯ' ಕೊಡುವುದೇ ಕೆಲಸವಾಗುತ್ತೆ!
ವಿ. ಹೇಮಂತಕುಮಾರ್, ಬೆಂಗಳೂರು
ಪ್ರೀತಿ ಮನಸ್ಸಿನಿಂದ ಮನಸ್ಸಿಗೆ ಪ್ರವಹಿಸುವ ಜೀವ ನದಿಯೆ?
- ಅದು ಈಗ ಮೊಬೈಲ್‌ನಿಂದ ಮೊಬೈಲ್‌ಗೆ ಪ್ರವಹಿಸುವ ಮೆಸೇಜ್ ಆಗಿದೆ!
ಬಿ.ಎಸ್. ನಾರಾಯಣಸ್ವಾಮಿ, ಬೋಧನ ಹೊಸಹಳ್ಳಿ
ಹೆಣ್ಣು ಹೂವಾದರೆ ಗಂಡು?
- ಕೆಲವರು ಗಂಡ, ಇನ್ನೂ ಕೆಲವರು ಬರೀ ಹೂಕುಂಡ.
ಹೆಸರಿಲ್ಲ, ಊರಿಲ್ಲ
ಟಿ.ವಿ. ಧಾರಾವಾಹಿಯ ಪ್ರೇಮಕ್ಕೂ, ಸಿನಿಮಾಗಳಲ್ಲಿನ ಪ್ರೇಮಕ್ಕೂ ವ್ಯತ್ಯಾಸವೇನು?
- ಅದು ಹಲವಾರು ಕಂತುಗಳ ಪ್ರೇಮ, ಸಿನಿಮಾದಲ್ಲಿ ಒಂದೇ ಕಂತಿನ ಪ್ರೇಮ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ನಟಿಯರೇಕೆ ಹುಚ್ಚಿ ಪಾತ್ರಗಳನ್ನು ಮಾಡಲು ಹೆಚ್ಚು ಇಷ್ಟಪಡುತ್ತಾರೆ?
- ನಿಜ ಜೀವನಕ್ಕಿಂತ ಅವರು 'ಕಲ್ಪನಾ ಲೋಕ'ದಲ್ಲೇ ತೇಲುತ್ತಿರುತ್ತಾರಲ್ಲ ಅದಕ್ಕೆ!
ಸ್ವಾಮಿ ನಿರ್ಮಲಾ, ಉಡಿಗಾಲ
ಜಿಡ್ಡಿನ ಅಂಶ ಇಲ್ಲದಿದ್ರೂ ಹೆಂಡವನ್ನೇಕೆ 'ಎಣ್ಣೆ' ಅಂತ ಕರೆಯುತ್ತಾರೆ?
- ಹೆಂಡ ಕುಡಿದಾಗ ಮಾತು ಜಾರುತ್ತೆ, ನಡಿಗೆ ಜಾರುತ್ತೆ, ಮನಸ್ಸು ಜಾರುತ್ತೆ ಅದಕ್ಕೆ!
ಅಂದಾನಯ್ಯ ತಿಗರಿಮಠ, ಅಳವಂಡಿ
ಯಡಿಯೂರಪ್ಪ ಬಿಜೆಪಿಗೆ ಬಂದ್ರೆ ಕಾಂಗ್ರೆಸ್‌ನವರಿಗೇಕೆ ನಡುಕ?
- ಅವರ ಹಿಂದೆ ರೇಣುಕಾಚಾರ್ಯ ಬರ್ತಾರೆ ಅಂತ!
ಅಲ್ಲಾಬಕ್ಸ್, ಮಧುಗಿರಿ
ಮನೆಯಲ್ಲಿರುವ ಮಹಿಳೆಗೆ 'ಹೌಸ್‌ವೈಫ್' ಎನ್ನುತ್ತಾರೆ, ಮನೆಯಲ್ಲೇ ಇರುವ ಪುರುಷರಿಗೆ?
- ಹೌಸಲ್ಲೆ ಲೈಫ್ ಅಂತ ಗೇಲಿ ಮಾಡ್ತಾರೆ!
ಪಿ.ಜೆ. ರಾಘವೇಂದ್ರ, ಮೈಸೂರು
ರಾಷ್ಟ್ರಪತಿ ಪ್ರಥಮ ಪ್ರಜೆಯಾದರೆ, ಅಂತಿಮ ಪ್ರಜೆ ಯಾರು?
- ನಮ್ಮ ಪತಿ ಅಂತಿದ್ದಾರೆ ಕೆಲವು ಹೆಂಗಸರು!
ಎಸ್.ವಿ .ಪದ್ಮನಾಭ