ಖುಷಿ

ವಾದ ವಿವಾದ

ಮಹಿಳೆಯೊಬ್ಬಳು ಸಮುದ್ರ ತೀರದಲ್ಲಿ ಪುಸ್ತಕ ಓದುತ್ತಾ ಕುಳಿತಿದ್ದಳು. ಅಲ್ಲಿಗೆ ಮೀನುಗಾರ ಬಂದ.
ಮೀನುಗಾರ: 'ಮೇಡಂ ನೀವು ನಿಷೇಧಿತ ಪ್ರದೇಶದಲ್ಲಿ ಕುಳಿತಿದ್ದೀರಿ. ಇದು ಮೀನುಗಾರರ ಪ್ರದೇಶ'.  
ಮಹಿಳೆ: ನಾನು ಪುಸ್ತಕ ಓದುತ್ತಿದ್ದೇನೆ. ಮೀನು ಹಿಡಿಯುತ್ತಿಲ್ಲ!
ಮೀನುಗಾರ: ಅದಕ್ಕೆ ಬೇಕಾದ ಉಪಕರಣಗಳು ನಿಮ್ಮ ಜೊತೆಗಿವೆ. ಯಾವುದೇ ಸಂದರ್ಭದಲ್ಲಾದರೂ ನೀವು ಮೀನು ಹಿಡಿಯಬಹುದು.
ಮಹಿಳೆ: ನಾನು ನಿನ್ನ ಮೇಲೆ ಲೈಂಗಿಕ ಶೋಷಣೆಯ ಕೇಸು ಹಾಕುತ್ತೇನೆ.
ಮೀನುಗಾರ: ನಾನು ನಿಮ್ಮನ್ನು ಮುಟ್ಟಲೇ ಇಲ್ಲ.
ಮಹಿಳೆ: ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳೂ ನಿನ್ನ ಬಳಿ ಇದೆ. ಯಾವುದೇ ಸಂದರ್ಭದಲ್ಲಾದರೂ ನೀವು 'ಹಾಗೆ' ಮಾಡಬಹುದು!


ಓವರ್ ಆಕ್ಟ್
ಹುಡುಗ: ನಿನ್ನ ಕೈ ಹಿಡಿದುಕೊಳ್ಳಲೆ?
ಹುಡುಗಿ: ಬೇಡ
ಹುಡುಗ: ಯಾಕೆ?
ಹುಡುಗಿ: ನಂತರ ಕೈ ಬಿಟ್ಟಾಗ ಸಂಕಟವಾಗುತ್ತದೆ!
ಹುಡುಗ (ಮನಸ್ಸಲ್ಲೇ): ಓವರ್ ಆ್ಯಕ್ಟ್ ಮಾಡೋಕೂ ಒಂದು ಮಿತಿ ಬೇಕು!
=
ಹೆಂಡತಿ ಇಲ್ಲದಿದ್ದಾಗ ಅಡುಗೆಮನೆ ಪ್ರವೇಶಿಸಿದ ಗಂಡ!
ಹೆಂಡತಿ ಇಲ್ಲದಿದ್ದಾಗ ಗಂಡ ಅಡುಗೆಮನೆ ಪರಿಶೀಲಿಸುತ್ತಿದ್ದ. ಸಕ್ಕರೆ ಡಬ್ಬದ ಮೇಲೆ 'ಮೆಣಸಿನ ಪುಡಿ' ಎಂದು ಬರೆದಿದ್ದಳು. ಅನುಮಾನ ಬಗೆಹರಿಸಲು ಆಕೆ ಬಂದ ನಂತರ ಕೇಳಿಯೇಬಿಟ್ಟ.
ಗಂಡ: ಸಕ್ಕರೆ ಡಬ್ಬದ ಮೇಲೆ ಮೆಣಸಿನ ಪುಡಿ ಎಂದೇಕೆ ಬರೆದಿದ್ದೀಯ?
ಹೆಂಡತಿ: ಒಂದು ಇರುವೆ ಮುತ್ತದಿರಲಿ ಎಂದು. ಎರಡನೆಯದಾಗಿ ನಾನಿಲ್ಲದಾಗ ಯಾರ್ಯಾರು ಅಡುಗೆಮನೆ ಪ್ರವೇಶಿಸುತ್ತಾರೆ ಎಂಬುದನ್ನು ಕಂಡುಹಿಡಿಯಲು!
(ಗಂಡ ಒಂದು ಕ್ಷಣ ಮೌನ)
ಹೆಂಡತಿ: ಇನ್ನು ಹೇಳಿ? ಯಾಕೆ ಅಡುಗೆಮನೆಗೆ ಬಂದಿದ್ದು?!

ಆಕಸ್ಮಿಕವಾಗಿ ಮಾಜಿ ಸಚಿವ ರೇಣುಕಾಚಾರ್ಯ ಅವರು ಮುಖ್ಯಮಂತ್ರಿಯಾದರೆ ಕೈಗೊಳ್ಳಬಹುದಾದ ಯೋಜನೆಗಳು...
    ಬಾರಿಗೆ ಬಾರೋ
    ಕುಡಿಯೋಣು ಬಾರಾ
    'ನೀರಾ' ಭಾಗ್ಯ
    ಕುಡುಕರ ದಾಸೋಹ



ಕೋಟ್ ಆ್ಯಂಡ್ ಬೋಲ್ಡ್

ಯಾವುದೇ ಮಹಿಳೆ ತನ್ನ ಮಗಳಿಗಿಂತ ಹತ್ತು ವರ್ಷ ಯಂಗ್ ಆಗಿ ಕಾಣಿಸುತ್ತಿದ್ದಾಳಂದ್ರೆ ಅವಳು ಸಂತೃಪ್ತೆ ಅಂತ ಅರ್ಥ.
- ಆಸ್ಕರ್ ವೈಲ್ಡ್



ಸಾಲ್‌ಪನಿಕ

    ಜಗತ್ತಿನ ಅತಿ ಹೆಚ್ಚು ಜನ ಹೆಚ್ಚಾಗಿ ಕೈಯಲ್ಲಿ ಹಿಡಿಯುವುದು 'ಮೌಸ್‌' ಅನ್ನು!
    ಪತ್ರ ಬರೆಯುವವಾಗ 'ಯಾರಿಗೆ' ಎಂಬುದನ್ನು ಶಾರ್ಟಾಗಿ ಬರೆಯುವ ಅಭ್ಯಾಸ ಬಿಟ್ಟುಬಿಡಿ!
    ಪ್ರಚಲಿತ ಬಳಕೆಯಲ್ಲಿರುವ 'ಎಫ್‌'ನಿಂದ ಪ್ರಾರಂಭಗೊಳ್ಳುವ ಎರಡನೇ ಶಬ್ದ 'ಫೇಸ್‌ಬುಕ್‌'!
    ಅರವಿಂದ 'ಕ್ರೇಜಿವಾಲ' ಎಂಬುದನ್ನು ಅರಿಯದೆ ಹೋದೆವು ಎನ್ನುತ್ತಿದ್ದಾರಂತೆ ದೆಹಲಿ ಮಂದಿ!
    ಹೆಚ್ಚಿನವರು ಹೆಚ್ಚಾಗಿ ಫೋಟೋ ತೆಗಿಸಿಕೊಳ್ಳುವುದು ಫೇಸ್‌ಬುಕ್‌ಗಾಗಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್

ಶಕ್ತಿ, ಜ್ಞಾನ, ಸಂಸ್ಕೃತಿ, ಸಮಾನತೆಯ ಸಂಗಮ ಮೈಸೂರು ದಸರಾ: ಸಿಎಂ ಡಿಕೆ ಶಿವಕುಮಾರ್