ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಯೋಗದಾಗೆಲ್ಲಾ ಐತಾ?

Vishwanath S
Updated On : 25 Jan 2014, 4:40 am

ಟ್ಯಾಬ್ಲೆಟ್‌ಗಳ ವಿಷಯದಲ್ಲಿ ಬೆಳಗ್ಗೆ ಒಂದು, ಮಧ್ಯಾಹ್ನ ಒಂದು, ರಾತ್ರಿ ಒಂದು ಎನ್ನುವಂತೆ ಇದು ಕೂಡ ಬೆಳಗ್ಗೆ ಒಂದು ಸ್ಟೈಲ್, ಮಧ್ಯಾಹ್ನ ಒಂದು ಸ್ಟೈಲ್, ರಾತ್ರಿ ಒಂದು ಸ್ಟೈಲ್ ಎನ್ನುವಂಥ ಲೇಟೆಸ್ಟ್ ಟ್ಯಾಬ್ಲೆಟ್. ಹೆಸರು ಲೆನೋವೋ ಯೋಗಾ.
ಸ್ಯಾಮ್‌ಸಂಗ್ ನೋಟ್ 10.1, ಐಪ್ಯಾಡ್ 3, ಐಪ್ಯಾಡ್ ಏರ್, ಸೋನಿ ಎಕ್ಸ್‌ಪೀರಿಯಾ ಝೆಡ್, ಟ್ಯಾಬ್ಲೆಟ್‌ಗಳ ವಿಭಾಗದಲ್ಲಿ ಸದ್ಯಕ್ಕೆ ಲಭ್ಯವಿರುವ ಹೈ ಎಂಡ್ ಪ್ರಾಡಕ್ಟ್‌ಗಳು. ಆದರೆ ಮೊಬೈಲ್ ಫೋನ್ ಆದರೇನು ಶಿವಾ, ಟ್ಯಾಬ್ಲೆಟ್ ಆದರೇನು ಶಿವಾ ಪ್ರತಿದಿನ ಅಪ್‌ಡೇಟೆಡ್ ವರ್ಷನ್‌ಗಳು ಬರಲೇಬೇಕು. ಬರುತ್ತಲೇ ಇವೆ. ಹಾಗೆ ಬರುವಾಗ ಏನಾದರೊಂದು ಹೊಸತನ ಇದ್ದರೆ ಮಾತ್ರ ಮಾರುಕಟ್ಟೆಯಲ್ಲಿ ಆಕರ್ಷಣೆ ಗಳಿಸಲು ಸಾಧ್ಯ ಎಂಬುದು ಎಲ್ಲರಿಗೂ ಗೊತ್ತು. ಈಗ ಬಂದಿರುವ ಈ ಲೆನೋವೋ ಯೋಗಾ ಸೀರೀಸ್‌ನ ಟ್ಯಾಬ್ಲೆಟ್‌ಗಳಲ್ಲೂ ಅಂಥ ವಿಶೇಷತೆ ಖಂಡಿತಾ ಇದೆ. ಆ ವಿಶೇಷತೆ ಈ ಟ್ಯಾಬ್ಲೆಟ್‌ನ ಡಿಸೈನ್‌ಗೆ ಸಂಬಂಧಪಟ್ಟಿದ್ದು.
ಇಲ್ಲಿಯವರೆಗೂ ಬಂದ ಟ್ಯಾಬ್ಲೆಟ್‌ಗಳು ಡಿಸೈನ್‌ನ ವಿಷಯದಲ್ಲಿ ಹೆಚ್ಚು ಕಮ್ಮಿ ದೊಡ್ಡ ಮೊಬೈಲ್ ಪೋನ್‌ಗಳ ಎಕ್ಸ್‌ಟೆಂಡೆಡ್ ವರ್ಷನ್‌ನಂತೆ ಇದ್ದವು. ಆದರೆ ಅವುಗಳಿಗೆ ಅಪವಾದ ಎಂಬಂತೆ ಲೆನೋವೋ ಯೋಗಾ ಸೀರೀಸ್‌ನ ಟ್ಯಾಬ್ಲೆಟ್‌ಗಳು ಮಲ್ಟಿಮೋಡ್ ಡಿಸೈನ್ ಹೊಂದಿವೆ. ಹೋಲ್ಡ್, ಸ್ಟ್ಯಾಂಡ್, ಟಿಲ್ಟ್ ಎಂಬ ಮೂರು ವಿಧಾನಗಳಲ್ಲಿ ಬಳಸಲು ಈ ಟ್ಯಾಬ್ಲೆಟ್‌ಗಳು ಸಹಕಾರಿ. ಏಕೆಂದರೆ ಈ ಟ್ಯಾಬ್ಲೆಟ್‌ಗಳ ಒಂದು ಅಂಚಿನಲ್ಲಿ ಇನ್ನೋವೇಟಿವ್ ಕಿಕ್‌ಸ್ಟ್ಯಾಂಡ್ ಇದೆ. ಇದರ ಸಹಾಯದಿಂದ ಕೈಯಲ್ಲಿ ಹಿಡಿದುಕೊಳ್ಳಲು ಹೋಲ್ಡ್ ಮೋಡ್, ಟೇಬಲ್ ಮೇಲೆ ನಿಲ್ಲಿಸಿ ವಿಡಿಯೋ ನೋಡಲು ಸ್ಟ್ಯಾಂಡ್ ಮೋಡ್ ಮತ್ತು ಹಾಸಿಗೆಯ ಮೇಲೋ, ನೆಲದ ಮೇಲೋ ಇಡಲು ಇರುವ ಟಿಲ್ಟ್ ಮೋಡ್‌ಗಳಿಂದಾಗಿ ಈ ಟ್ಯಾಬ್ಲೆಟ್ ಯೂಸರ್ ಫ್ರೆಂಡ್ಲೀ ಎನಿಸುತ್ತದೆ.
ಇದಲ್ಲದೆ ಕಂಪನಿ ಹೇಳುವಂತೆ 18 ಗಂಟೆಗಳವರೆಗೆ ನಡೆಯುವ ಬ್ಯಾಟರಿ ಇದರ ಇನ್ನೊಂದು ಆಕರ್ಷಣೆ. ಡಾಲ್ಬಿ ಡಿಜಿಟಲ್ ಪ್ಲಸ್ ಸೌಂಡ್, ಆಪ್ಶನಲ್ ವೈರ್‌ಲೆಸ್ ಕೀಬೋರ್ಡ್ ಕೂಡ ಈ ಟ್ಯಾಬ್ಲೆಟ್‌ನಲ್ಲಿ ಲಭ್ಯವಿದೆ. ಆದರೆ ಈ ಬಹುತೇಕ ಎಲ್ಲ ವಿಭಾಗಗಳಲ್ಲೂ ಸೈ ಎನಿಸಿಕೊಳ್ಳುವ ಈ ಟ್ಯಾಬ್ಲೆಟ್ ದೊಡ್ಡ ಬ್ರ್ಯಾಂಡ್‌ಗಳಿಗೆ ಸ್ಪರ್ಧೆಯೊಡ್ಡುವಲ್ಲಿ ಸೋತರೆ ಅದಕ್ಕೆ ಇದರ ಡಿಸ್ಪ್ಲೇ ಕಾರಣವಾಗಬಹುದು. ಹಾಗಂತ ಇದೇನೂ ಕಳಪೆ ಡಿಸ್ಪ್ಲೇ ಹೊಂದಿಲ್ಲ. ಆದರೆ ಬಹುತೇಕ ಎಲ್ಲ ಹೈ ಎಂಡ್ ಟ್ಯಾಬ್ಲೆಟ್‌ಗಳಲ್ಲೂ ಈಗ 1080ಪಿ ಫುಲ್ ಎಚ್‌ಡಿ ಡಿಸ್ಪ್ಲೇ ಹೈಲೈಟ್ ಎನಿಸುವ ಫೀಚರ್ ಆಗಿದೆ. ಆದರೆ ಈ ಯೋಗಾ ಸೀರೀಸ್‌ನ ಲೆನೋವೋ ಟ್ಯಾಬ್ಲೆಟ್‌ಗಳಲ್ಲಿರುವುದು 1280 ಬೈ 800 ರೆಸಲ್ಯೂಶನ್‌ನ ಡಿಸ್ಪ್ಲೇ ಎಂಬುದೇ ನಿರಾಶೆ.
ಯೋಗ 8, ಯೋಗ 10 ಎಂಬ ಎರಡು ಮಾಡೆಲ್‌ಗಳಲ್ಲಿ 8 ಮತ್ತು 10 ಇಂಚಿನ ಡಿಸ್ಪ್ಲೇಗಳೊಂದಿಗೆ ಯೋಗಾ ಸೀರೀಸ್‌ನ ಟ್ಯಾಬ್ಲೆಟ್‌ಗಳು ಕ್ರಮವಾಗಿ ರು. 22,999 ಮತ್ತು ರು. 28,999 ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಸದ್ಯಕ್ಕೆ ಲೆನೋವೋ ಫ್ಲಿಪ್ ಕವರ್, ಹೆಡ್‌ಸೆಟ್ ಮತ್ತು ಸ್ಕ್ರಾಚ್ ಗಾರ್ಡ್ ಈ ಮಾಡೆಲ್‌ಗಳೊಂದಿಗೆ ಉಚಿತವಾಗಿ ಸಿಗುತ್ತಿದೆ. <
10.1 ಇಂಚಿನ ಐಪಿಎಸ್ ಡಿಸ್ಪ್ಲೇ
ವೈಫೈ ಮತ್ತು 3ಜಿ
ಡಾಲ್ಬಿ ಡಿಜಿಟಲ್ ಪ್ಲಸ್ ಸ್ಪೀಕರ್‌ಗಳು
ನಾಯ್ಸ್ ರಿಡಕ್ಷನ್ ಇರುವ ಮೈಕ್ರೋಫೋನ್
5 ಎಮ್‌ಪಿ ಕ್ಯಾಮೆರಾ
1.6 ಎಮ್‌ಪಿ ಫ್ರಂಟ್ ಕ್ಯಾಮೆರಾ
16 ಜಿಬಿ ಮೆಮೊರಿ
64 ಜಿಬಿವರೆಗೆ ವಿಸ್ತರಿಸಬಹುದಾದ ಮೆಮೊರಿ
18 ಗಂಟೆಗಳವರೆಗಿನ ಬ್ಯಾಟರಿ ಲೈಫ್


-ಹರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement