ಖುಷಿ

ಯಕ್ಷಗಾನದ ತೂಗುತೊಟ್ಟಿಲು

'ಯಕ್ಷಬ್ರಹ್ಮ' ಚಿಟ್ಟಾಣಿ ರಾಮಚಂದ್ರ ಹೆಗಡೆ ಅವರ ಬದುಕನ್ನು ಹಿಡಿಟ್ಟಿರುವ ಕೃತಿಯನ್ನು ಬೆಂಗಳೂರಿನ ಉದಯಭಾನು ಕಲಾಸಂಘ ಹೊರತಂದಿದೆ. ಒಟ್ಟು 78 ಪುಟಗಳ ಈ ಕೃತಿಯ ಬೆಲೆ 60 ರುಪಾಯಿ...

ಯಕ್ಷಗಾನದ ಭವ್ಯ ಪರಂಪರೆಯುಳ್ಳ ಜಿಲ್ಲೆ ಉತ್ತರ ಕನ್ನಡ. ಈ ಜಿಲ್ಲೆಯ ಹೊನ್ನಾವರ ಯಕ್ಷಗಾನದ ತೂಗುತೊಟ್ಟಿಲು ಎನಿಸಿದೆ. ಎರಡು ಪ್ರಮುಖ ಮೇಳಗಳು, ಹಲವು ಹವ್ಯಾಸಿ ಮೇಳಗಳು, ಈ ಪ್ರದೇಶದಲ್ಲಿ ಸ್ಥಾಪನೆಗೊಂಡು ಕಲಾಸೇವೆಗೈದಿದೆ. ಪ್ರಥಮ ರಾಷ್ಟ್ರಪ್ರಶಸ್ತಿ ವಿಜೇತ ಯಕ್ಷಗಾನ ಕಲಾವಿದ ಕೆರೆಮನೆ ಶಿವರಾಮ ಹೆಗಡೆ ಪರಮಯ್ಯ ಹಾಸ್ಯಗಾರ, ಕೆರೆಮನೆ ಮಹಾಬಲ ಹೆಗಡೆ, ಕೆರೆಮನೆ ಶಂಭು ಹೆಗಡೆ ಇವರೆಲ್ಲಾ ಈ ಪ್ರದೇಶದವರು.
ಹೊನ್ನಾವರದಿಂದ 26 ಕಿ.ಮೀ. ದೂರದಲ್ಲಿರುವ ಗುಂಡುಬಾಳ ಆಂಜನೇಯ ಯಕ್ಷಗಾನಪ್ರಿಯ. ಯಾವುದೇ ಕಲಾವಿದರು ರಂಗಪ್ರವೇಶಕ್ಕೆ ಮೊದಲು ಪ್ರಥಮವಾಗಿ ಗೆಜ್ಜೆ ಕಟ್ಟುವುದು ಇಲ್ಲಿಯ ಹನುಮಂತನ ಎದುರು. ಬಡಗುತಿಟ್ಟಿನ ಸಿದ್ಧಪ್ರಸಿದ್ಧ ಕಲಾವಿದರೆಲ್ಲ ಇಲ್ಲಿಯೇ ಗೆಜ್ಜೆ ಕಟ್ಟಿದರು. ಹೆಸರಾಂತ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಮಹಾಬಲ ಹೆಗಡೆ, ಪಿ.ವಿ. ಹಾಸ್ಯಗಾರ, ಚಿಟ್ಟಾಣಿ ರಾಮಚಂದ್ರ ಹೆಗಡೆ ಮತ್ತು ಜಲವಳ್ಳಿ ವೆಂಕಟೇಶರಾವ್ ಮೊದಲಾದವರು ಇಲ್ಲಿ ಗೆಜ್ಜೆ ಕಟ್ಟಿ ಹರಕೆ ಆಟಗಳನ್ನು ಆಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ದೇಗುಲಗಳು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಂತೆ ಮೇಳಗಳನ್ನು ಕಟ್ಟಿ ಯಕ್ಷಗಾನವನ್ನು ಪೋಷಿಸಿಕೊಂಡು ಬಂದಿಲ್ಲ. ಹರಕೆ, ಆಟ, ಗುಂಡುಬಾಳಿಯ ವೈಶಿಷ್ಟ್ಯ. ಇಲ್ಲಿ ಬಹುಮುಖ್ಯವಾದದ್ದು ಯಕ್ಷಗಾನ ಸೇವೆ. 19ನೇ ಶತಮಾನದ ಮೊದಲ ಭಾಗದಿಂದಲೂ ಇಲ್ಲಿ ಹರಕೆ ಆಟ ನಡೆದುಕೊಂಡು ಬಂದಿರುತ್ತದೆ. ಇದು ಯಕ್ಷಗಾನದ ಮುಕ್ತ ವಿಶ್ವವಿದ್ಯಾಲಯ.
ಇಂಥ ಅಭೂತಪೂರ್ವ ತಾಣ ಗುಂಡುಬಾಳ ಗ್ರಾಮ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ ಕಲಾವಿದರು ಇದನ್ನು ಪೋಷಿಸಿಕೊಂಡು ಬಂದಿದ್ದಾರೆ. ಕೆರೆಮನೆ ಶಿವರಾಮ ಹೆಗಡೆಯವರು ಒಂದೆಡೆ ಹೀಗೆ ಹೇಳಿಕೊಂಡಿದ್ದಾರೆ; 'ಯಕ್ಷಗಾನಪ್ರಿಯನಾದ ಶ್ರೀ ಹನುಮಂತ ದೇವರ ಅನುಗ್ರಹ ಪ್ರೇರಣೆ, ಈ ಕ್ಷೇತ್ರದಲ್ಲಿ ನಾನು ಗಳಿಸಿದ ಸಾಧನೆ ಸಿದ್ಧಿಗೆ ಬಲಿಷ್ಠ ಕಾರಣವೆಂದು ನನ್ನ ಪ್ರಾಮಾಣಿಕ ನಂಬಿಕೆ. ಗುಡುಬಾಳ ಆಂಜನೇಯ ನನ್ನ ಕಲಾಜೀವನ, ಬಾಲ್ಯದಲ್ಲಿ ಸತತ ಹದಿಮೂರು ವರ್ಷಗಳ ಕಾಲ ನನ್ನನ್ನು ವೇಷ ಕಟ್ಟಿಸಿ, ಕುಣಿಸಿ ಕಲಾ ಪ್ರೌಢಿಮೆಯನ್ನು ಪ್ರೋತ್ಸಾಹಿಸಿ ನನ್ನ ವಿಕಾಸಕ್ಕೆ ಭದ್ರಬುನಾದಿಯನ್ನೊದಗಿಸಿದ'.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!