ಶ್ರೀಧರ್ ಡಿ.ರಾಮಚಂದ್ರಪ್ಪ, ತುರುವನೂರು
ಬಸ್ ಏಜೆಂಟ್‌ಗೂ, ಎಲ್‌ಐಸಿ ಏಜೆಂಟ್‌ಗೂ ವ್ಯತ್ಯಾಸವೇನು ?
-ಬಸ್ ಏಜೆಂಟ್ ಬಸ್ ಸ್ಟಾಪ್‌ಗಳ ಬಗ್ಗೆ ಹೇಳ್ತಾನೆ. ಎಲ್‌ಐಸಿ ಏಜೆಂಟ್ ನಿಮ್ಮ 'ಲಾಸ್ಟ್ ಸ್ಟಾಪ್' ಬಗ್ಗೆ ಮಾಹಿತಿ ಕೊಡ್ತಾನೆ !
ಬೋ.ಪಾ. ವೆಂಕಟೇಶ್, ಬೆಂಗಳೂರು
ಪ್ರಕೃತಿಯಲ್ಲಿ ಹಸಿರೇ ಇಲ್ಲದಿದ್ದರೆ ಹೇಗಿರುತ್ತಿತ್ತು ?
- ಮನುಷ್ಯಾಕೃತಿಗಳಲ್ಲಿ ಉಸಿರೇ ಇರುತ್ತಿರಲಿಲ್ಲ !
ಪಿ.ಜೆ.ರಾಘವೇಂದ್ರ, ಮೈಸೂರು
ಲೋಕೋಪಯೋಗಿ ಇಲಾಖೆ ಎಂದು ಬರೆಯುವ ಬದಲು 'ಲೋ ಕೋಪ ಯೋಗಿ' ಇಲಾಖೆ ಎಂದು ಬರೆದಿದ್ದಾರಲ್ಲ ?
- ಎಷ್ಟು 'ಲೋ' ಲೆವೆಲ್ಲಲ್ಲಿ ಬರೆದ್ರೂ ಆ ಇಲಾಖೆಗೆ ಕೋಪ ಬರೋಲ್ಲ !
ವಿ.ಹೇಮಂತ ಕುಮಾರ್, ಬೆಂಗಳೂರು
ಮುಂದೊಂದು ದಿನ ಪ್ರಿಯಾಂಕಗಾಂಧಿ ಇಂದಿರಾಗಾಂಧಿ ತರಹ ಆಗಬಹುದಾ ?
- ಅದೇ ಯೋಚನೆಯಲ್ಲೇ ರಾಹುಲ್‌ಗಾಂಧಿ ಮನೇಲಿ ನಿದ್ರೆ ಮಾಡೋದು ಬಿಟ್ಟು ಲೋಕಸಭೆಯಲ್ಲಿ ನಿದ್ರೆ ಮಾಡ್ತಿದ್ದಾರೆ !
ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ
ದಿನಪತ್ರಿಕೆಗೂ ವಾರಪತ್ರಿಕೆಗೂ ವ್ಯತ್ಯಾಸ ?
- ದಿನಪತ್ರಿಕೆ ಫಾಸ್ಟ್‌ಫುಡ್, ವಾರಪತ್ರಿಕೆ ರೆಡಿಮೇಡ್ ಫುಡ್ !
ಶ್ರೀಕಾಂತ್ ಮುದಗಲ್ಲ, ಇಳಕಲ್ಲ
ಸಾಲ ಮಾಡಿಯಾದರೂ ತುಪ್ಪ ತಿನ್ನು ಅನ್ನುತ್ತಾರಲ್ಲ ಏಕೆ ?
- ಅದು ಸಾಲ ಮಾಡಿ ಹಸು, ಎಮ್ಮೆ ಕೊಂಡವರ ಮಾತು !
ಉಜ್ಜನಿ ಜಲೇಂದ್ರ ಮಲ್ಲುಂಗೆರೆ
ಹಿಂದಿನ ಮಹಾರಾಜರುಗಳಿಗೂ, ಇಂದಿನ ಮಠಾಧೀಶರಿಗೂ ವ್ಯತ್ಯಾಸವೇನು ?
- ಮಹಾರಾಜರು ಕುದುರೆ ಮೇಲೆ ಸವಾರಿ ಮಾಡ್ತಿದ್ರು, ಈಗಿನ ಮಠಾಧೀಶರು ರಾಜಕಾರಣಿಗಳ ಮೇಲೆ ಸವಾರಿ ಮಾಡ್ತಾರೆ !
ಬಿ.ಎಂ.ಪರಶಿವಮೂರ್ತಿ, ಬೆಂಗಳೂರು
ಹೆಣ್ಣಿಗೆ ಶೀಲವೇ ಆಭರಣ, ಗಂಡಿಗೆ ?
- ದುಡ್ಡಿನ ಚೀಲ !
= ಎಸ್.ವಿ. ಪದ್ಮನಾಭ