ಖುಷಿ

ಮಿಂಚಿಂಗ್ STAR

ಯಾವ ತಾರೆಯ ಲುಕ್ ಅಂದ?
ದಿರಿಸು ಪ್ರಜ್ಞೆ ಅನ್ನುವುದು ರಕ್ತಗತವಾಗಿ ಬರುವ ಗುಣವೇನೂ ಅಲ್ಲ. ತಾನು ಹೇಗೆ ಬಟ್ಟೆ ಧರಿಸಿಕೊಂಡರೆ ಚೆನ್ನ, ಯಾವುದು ಸಭ್ಯ ಹಾಗೂ ಅನುಕೂಲ, ಯಾವುದು ಆಕರ್ಷಕ ಎಂಬುದನ್ನೆಲ್ಲ ಆಯಾ ವ್ಯಕ್ತಿ ಬೆಳೆದುಬಂದ ಹಿನ್ನೆಲೆ ಮತ್ತು ಆಕೆಯ ಅನುಭವಗಳೇ ನಿರ್ಧರಿಸಬೇಕು. ಸಿನೆಮಾ ತಾರೆಯರೂ ಅಷ್ಟೇ. ಕೆಲವರಿಗೆ ಡ್ರೆಸ್ ಸೆನ್ಸ್ ಚೆನ್ನಾಗಿರುತ್ತದೆ. ಇನ್ನು ಕೆಲವರು ಕರಾಳವಾಗಿ ಡ್ರೆಸ್ ಮಾಡಿಕೊಳ್ಳುತ್ತಾರೆ- ರಾಖಿ ಸಾವಂತ್ ಥರ.
ಫ್ಯಾಶನ್ ಲೇಡಿ ವೆಬ್‌ಸೈಟ್ ನಡೆಸಿದ 'ಬೆಸ್ಟ್ ಡ್ರೆಸ್ಸಿಂಗ್ ಸೆನ್ಸ್‌' ಎಂಬ ಸಮೀಕ್ಷೆಯಲ್ಲಿ ಅಭಿಮಾನಿಗಳು ಟಾಪ್ 5 ಬಾಲಿವುಡ್ ನಟಿಯರನ್ನು ಆಯ್ಕೆ ಮಾಡಿದ್ದಾರೆ.

ದೀಪಿಕಾ ಪಡುಕೋಣೆ
ಬಾಲಿವುಡ್‌ನ ನಂ.1 ಸ್ಥಾನದಲ್ಲಿರೋ ದೀಪಿಕಾ ಸೀರೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಾರಂತೆ. ಅವರಿಗೂ ಸಹ ಸೀರೆಯಲ್ಲಿ ಕಾಣಿಸಿಕೊಳ್ಳೋದೇ ಇಷ್ಟವಂತೆ. ಹಾಗಂತ ಮಾಡರ್ನ್ ಡ್ರೆಸ್‌ಗಳನ್ನೂ ಮರೀಬೇಡಿ ಅನ್ನೋದು ಅಭಿಮಾನಿಗಳ ಬೇಡಿಕೆ.

ಅನುಷ್ಕಾ ಶರ್ಮ
ಬಾಲಿವುಡ್‌ನ ಯಂಗ್ ನಟಿ ಅನಿಸಿಕೊಂಡಿರೋ ಇವರು ಯಾವಾಗಲೂ ಎನರ್ಜಿಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಯಾವತ್ತೂ ಜೀನ್ಸ್ ಸಲ್ವಾರ್‌ಗಳಲ್ಲಿ ಕಾಣಿಸಿಕೊಳ್ಳುವ ಇವರ ಕ್ಯಾಷುವಲ್ ಲುಕ್ ಅಭಿಮಾನಿಗಳಿಗೂ ತುಂಬಾ ಇಷ್ಟ. ಮನೋಜ್ಞ ಅಭಿನಯ ಪ್ರತಿಭೆಯನ್ನೂ ಹೊಂದಿರುವ ಈ ಅರಗಿಣಿ ನೀಲಿ ಮತ್ತು ಕೆಂಪು ದಿರಿಸುಗಳಲ್ಲಿ ಚೆನ್ನಾಗಿ ಕಾಣಿಸುವಳಂತೆ.

ಸೋನಂ ಕಪೂರ್
ಮಾಡರ್ನ್ ಹಾಗೂ ಸಾಂಪ್ರದಾಯಿಕ ಎರಡೂ ಔಟ್‌ಫಿಟ್‌ಗಳಲ್ಲೂ ಮನಮೋಹಕವಾಗಿ ಕಾಣುತ್ತಾರೆ ಎಂದು ಅಭಿಮಾನಿಗಳ ಅಭಿಪ್ರಾಯ. ತಂದೆ ಅನಿಲ್ ಕಪೂರ್ ಕೂಡ ಚೆನ್ನಾಗಿ ಉಡುಪು ತೊಡುವುದರಲ್ಲಿ ಹೆಸರು ಮಾಡಿದ್ದಾರೆ.

ಸಲ್ವಾರ್ ಬಂದದ್ದೆಲ್ಲಿಂದ?
ಸಲ್ವಾರ್ ಕಮೀಜ್‌ನ ಮೂಲ ಅರಬ್ ದೇಶ. ಇದು ಹುಡುಗಿಯರಿಗಷ್ಟೇ ಸೀಮಿತವಲ್ಲ. ಅರೇಬಿಯನ್ ದೇಶಗಳಲ್ಲಿ ಪುರುಷರು ಸಲ್ವಾರ್ ಕಮೀಜ್ ತೊಡುತ್ತಾರೆ. ಆದರೆ ವಿನ್ಯಾಸದಲ್ಲಿ ವಿಭಿನ್ನ. ಸಲ್ವಾರ್ ಅಂದರೆ ಪ್ಯಾಂಟ್, ಕಮೀಜ್ ಎಂದರೆ ಕುರ್ತಾ ಎಂದೇ ಅರ್ಥ. ಭಾರತದಲ್ಲಿ ಸಲ್ವಾರ್‌ಗೆ ಬೇರೆ ರೂಪ ನೀಡಿ ಚೂಡಿದಾರ್ ಎಂದು ಕರೆಯಲಾಯಿತು. ಅನಾರ್ಕಲಿ, ಪಟಿಯಾಲ, ಪಂಜಾಬಿ, ಶಾರ್ಟ್ ಚೂಡಿದಾರ್ ಹೀಗೆ ಅನೇಕಾನೇಕ ವಿಧ. ಮೂಲ ಸಲ್ವಾರ್ ಕಮೀಜ್ ಜತೆ ಹುಡುಗಿಯರು ದುಪಟ್ಟಾ ಧರಿಸುತ್ತಾರೆ. ಸಲ್ವಾರನ್ನು ಭಾರತದಲ್ಲಿ ಮೊದಲು ಅಳವಡಿಸಿಕೊಂಡವರು ಪಂಜಾಬಿಗಳು. ಕುರ್ತಾಗೆ ಎಂಬ್ರಾಯಿಡರಿ, ಕುಂದನ್ ವರ್ಕ್ ಅಳವಡಿಸಿದರು. ಮುಖ್ಯ ಆಕರ್ಷಣೆ ದುಪ್ಪಟ್ಟಾ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸತತ 3ನೇ ದಿನ SIR ವಿರುದ್ಧ ಪ್ರತಿಭಟನೆ: ರಾಜ್ ಘಾಟ್ ನತ್ತ ಇಂಡಿಯಾ ಬ್ಲಾಕ್ ಸಂಸದರ ಮೆರವಣಿಗೆ!

ಫ್ರೀಡಂ ಪಾರ್ಕ್‌ನಲ್ಲಿ CJP ಪ್ರತಿಭಟನೆ: ಜ್ಞಾನೇಶ್ ಹೋದರೆ ಅಜ್ಞಾನೇಶ್ ಬರುತ್ತಾನೆ; ಮೊದಲು SIR ರದ್ದುಗೊಳಿಸಿ - ಪ್ರಕಾಶ್ ರಾಜ್

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

Indian Stock Market ಮತ್ತೆ ಭಾರಿ ಕುಸಿತ; ಸೆನ್ಸೆಕ್ಸ್ 1,045 ಅಂಕ ಕುಸಿತ, 10 ಲಕ್ಷ ಕೋಟಿ ರೂ ನಷ್ಟ!

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು