ತುಂಬಿದ ಕೊಡ ತುಳುಕುವುದಿಲ್ಲ, ತುಂಬಿದ ಯೌವ್ವನ?
ತುಂಬಿದ ಕೊಡ ತುಳುಕುವುದಿಲ್ಲ, ತುಂಬಿದ ಯೌವ್ವನ?
-ಯಾವುದಕ್ಕೂ 'ಅಳುಕುವುದಿಲ್ಲ'!
ಪಿ.ಜೆ. ರಾಘವೇಂದ್ರ, ಮೈಸೂರು.
ವಿದ್ಯಾರ್ಥಿಗಳಿಗೆ ಲೈಂಗಿಕ ಶಿಕ್ಷಣ ನೀಡುವ ಬದಲು ಶಿಕ್ಷಕರಿಗೆ ನೀಡಿದರೆ?
-ಅವರು ಅದರ ಪರೀಕ್ಷೆಗೆ ಇಳೀತಾರೆ!
ಬೋ.ಪಾ. ವೆಂಕಟೇಶ್, ಬೋಧನ ಹೊಸಹಳ್ಳಿ
ಧಮ್ಗೂ ರಮ್ಗೂ ಇರುವ ವ್ಯತ್ಯಾಸವೇನು?
-ಧಮ್ನಲ್ಲಿ ಹೊಗೆ ಹೋಗುತ್ತೆ, ರಮ್ನಲ್ಲಿ ಮರ್ಯಾದೆನೇ ಹೋಗುತ್ತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
ತಾಯಿಯ ಕೈ ತುತ್ತಿಗೂ ಪತ್ನಿಯ ಕೈ ತುತ್ತಿಗೂ ವ್ಯತ್ಯಾಸವೇನು?
-ಒಂದರಲ್ಲಿ ಪ್ರೀತಿ ಇರುತ್ತೆ, ಮತ್ತೊಂದರಲ್ಲಿ ಪ್ರೇಮ ಇರುತ್ತೆ!
ವಿ. ಹೇಮಂತ್ಕುಮಾರ್, ಬೆಂಗಳೂರು.
ಕಾಲೇಜ್ಗೂ ಕಲ್ಯಾಣ ಮಂಟಪಕ್ಕೂ ವ್ಯತ್ಯಾವೇನು?
-ಕಾಲೇಜ್ದು ಗೋಲ್ಡನ್ ಲೈಫ್. ಕಲ್ಯಾಣ ಮಂಟಪದಲ್ಲಿ ಗೋಲ್ಡು ಜೊತೆಗೆ ವೈಫು!
ಸ್ವಾಮಿ ನಿರ್ಮಲಾ, ಉಡಿಗಾಲ.
ಪ್ರೀತಿಸ್ತಿಲ್ಲ ಅಂದ್ಮೆಲೆ ಅವಳು ತಿರುಗಿ ನೋಡೋದ್ಯಾಕೆ?
-ಪ್ರೀತಿಸ್ತಿಲ್ಲ ಅಂದ್ಮೆಲೆ ನೀವು ತಿರುಗಿ ಅವಳ ಹಿಂದೆ ಹೋಗೋದ್ಯಾಕೆ?
ನೇರಲಗುಡ್ಡ ಶಿವಕುಮಾರ್, ಶಿರಾ.
ಆಸ್ಪತ್ರೆಗಳಲ್ಲಿ ಸಾಮಾನ್ಯ ವಾರ್ಡ್ಗೂ ತೀವ್ರ ನಿಗಾ ಘಟಕಕ್ಕೂ ವ್ಯತ್ಯಾಸವೇನು?
-ಸಾಮಾನ್ಯ ವಾರ್ಡ್ನಲ್ಲಿ ನಿಮ್ಮ ಆರೋಗ್ಯದ ಮೇಲೆ ನಿಗಾ ಇಡ್ತಾರೆ. ತೀವ್ರ ನಿಗಾ ಘಟಕದಲ್ಲಿ ಬಿಲ್ ಮೇಲೆ ತೀವ್ರ ನಿಗಾ ಇಡ್ತಾರೆ
-ಎಸ್.ವಿ. ಪದ್ಮನಾಭ