ಶ್ರೀಕಾಂತ ಮುದಗಲ್ಲ, ಇಳಕಲ್ಲ
'ತೂಕದ ಮಾತು' ಇರುವಂತೆ ತೂಕದ ಕೆಲಸ ಅಂತ ಇದೆಯಾ?
-ತೂಕಡಿಸುತ್ತಾ ಮಾಡ್ತಾರಲ್ಲ ಅದೇ ತೂಕದ ಕೆಲಸ!
ಸ್ವಾಮಿ ನಿರ್ಮಲಾ, ಉಡಿಗಾಲ
ಇರುವೆಗಳು ಏಕೆ ಇಂದಿಗೂ ಸಾಲಲ್ಲೇ ಸಾಗುತ್ತವೆ ಸಾರ್?
-ನಾವು ಎಂದೆಂದಿಗೂ ಶಿಸ್ತಿನಲ್ಲಿಯೇ ಇರುವೆ ಅಂತ ತೋರಿಸೋಕೆ!
ಪೇಂಟರ್ ಪಾಪು, ಸಂತೇಮರಹಳ್ಳಿ
ಪೋಸ್ಟ್‌ಮ್ಯಾನ್ ಇನ್ನೂ ಸೈಕಲ್ ತುಳೀತಾನೆ, ಸ್ಕೂಟರ್ ಯಾಕೆ ಕೊಡುತ್ತಿಲ್ಲ?
-ಈ ಮೊಬೈಲ್ ಇಮೇಲ್ ಯುಗದಲ್ಲಿ ಮುಂದೆ ಸೈಕಲ್ ತುಳಿಯೋದೂ ಕಷ್ಟ!
ಪಿ.ಜೆ. ರಾಘವೇಂದ್ರ, ಮೈಸೂರು
ಚುನಾವಣೆಗೂ ಮುನ್ನ ಫ್ರೆಂಡ್ಲಿ ಮ್ಯಾಚ್ ಅಂತಿದ್ದ ಎಚ್. ವಿಶ್ವನಾಥ್, ಸೋತ ನಂತರ ಮ್ಯಾಚ್ ಫಿಕ್ಸಿಂಗ್ ಅಂತಿದ್ದಾರಲ್ಲ?
-ಅವರ ಫ್ರೆಂಡ್ಸ್‌ಗಳೇ ಫಿಕ್ಸ್ ಮಾಡಿರಬೇಕು!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಮಾತನಾಡುವವನೇ ಮಹಾಶೂರನಂತೆ, ಮಾತನಾಡದವನು?
-ಮಾಜಿ ಪ್ರಧಾನಿ ಮನ'ಮೌನ'ಸಿಂಗ್!
ಆರ್.ಸಿ. ಪರಶುರಾಮ್, ಶಿಕಾರಿಪುರ
ಗಂಡಸರ ಸಂಬಳ, ಹೆಂಗಸರ ವಯಸ್ಸು ಕೇಳಬಾರದಂತೆ ಯಾಕೆ?
-ಅವೆರಡೂ ಇಪ್ಪತ್ತರೊಳಗೇ ನಿಂತಿರುತ್ತೆ!
ಕಬ್ಬಳ್ಳಿ ಬಿ. ಚನ್ನಬಸಪ್ಪ, ಯಲಹಂಕ ಉಪನಗರ
ರಾಹುಲ್ ಗಾಂಧಿ-ಕೇಜ್ರಿವಾಲ್ ನಡುವೆ ಯಾರು ಹೆಚ್ಚು 'ಎಬಡ'ರು ಗುರುವೆ?
-ನಿಮಗೆ 'ತೃತೀಯ ರಂಗ'ದವರು ಯಾರೂ ಕಾಣಿಸ್ತಿಲ್ಲವೇ?
= ಎಸ್.ವಿ. ಪದ್ಮನಾಭ