ಬೆಂಗಳೂರಿನ ಯಕ್ಷ ಸಿಂಚನ ಟ್ರಸ್ಟ್ ವತಿಯಿಂದ 'ಕೃಷ್ಣಾರ್ಜುನ ಕಾಳಗ' ಮತ್ತು 'ಪ್ರಮಿಳಾರ್ಜುನ- ಬಬ್ರುವಾಹನ' ಯಕ್ಷಗಾನ ಪ್ರಸಂಗ ಜೂನ್ 14ರಂದು ನಡೆಯುತ್ತಿದೆ. ರವೀಂದ್ರ ಕಲಾಕ್ಷೇತ್ರದ ಎದುರಿರುವ ಎಡಿಎ ರಂಗಮಂದಿರದಲ್ಲಿ ಮಧ್ಯಾಹ್ನ 3ಕ್ಕೆ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಕಬ್ಬಿನಾಲೆ ವಸಂತ ಭಾರದ್ವಾಜ್, ಮಂಟಪ ಪ್ರಭಾಕರ ಉಪಾಧ್ಯಾಯ ಮತ್ತು ಕೆ.ಎನ್. ಅಡಿಗ ಆಗಮಿಸಲಿದ್ದಾರೆ. ಹಿರಿಯ ಭಾಗವತ ಕಜ್ಜೆಕೆರೆ ಸುಬ್ರಾಯ ಹೆಗಡೆ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಯಕ್ಷಕಲಾ ಅಕಾಡೆಮಿ ಬೆಂಗಳೂರು ಮತ್ತು ಯಕ್ಷ ಸಿಂಚನ ತಂಡದ ಕಲಾವಿದರು ಕ್ರಮವಾಗಿ ಯಕ್ಷಗಾನ ನಡೆಸಿಕೊಡಲಿದ್ದಾರೆ. ಚಂಡೆ, ಒಡ್ಡೋಲಗ, ಯುದ್ಧ ನೃತ್ಯ, ರಥ ಕುಣಿತ, ಸ್ತ್ರೀವೇಶ ಸೇರಿದಂತೆ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.