ಖುಷಿ

ಅಪ್ಪಟ ಕಾಳಜಿ

ಮದರ್ಸ್ ಡೇ ಬಂದಾಗಲೆಲ್ಲಾ ಮಕ್ಕಳು ಅದೆಷ್ಟು ಖುಶಿಪಟ್ಟು ಹಬ್ಬದಂತೆ ಆ ದಿನವನ್ನು ಆಚರಿಸುತ್ತಾರೆ. ಆದರೆ ಅಪ್ಪಂದಿರ ದಿನವನ್ನು ಕೆಲವರು ಮಾತ್ರ ನೆನಪಿನಲ್ಲಿಟ್ಟು ಸಂಭ್ರಮಿಸುತ್ತಾರೆ. ಇನ್ನು ಮನೆ, ಮಕ್ಕಳು, ಕಚೇರಿ, ಬ್ಯಾಂಕು, ಜೀವನ, ವಿಮೆ, ಅದು-ಇದು ಎಂದು ಜವಾಬ್ದಾರಿಗಳನ್ನು ಹೊತ್ತು ದಿನ ನಿತ್ಯ ದುಡಿವ ಅಪ್ಪನಿಗೆ ತಮ್ಮ ಜನ್ಮ ದಿನವೇ ನೆನಪಿರುವುದಿಲ್ಲ. ಹಾಗಿದ್ದಾಗ ಅಪ್ಪಂದಿರ ದಿನ ಹೇಗೆ ತಾನೆ ನೆನಪಿನಲ್ಲಿರುತ್ತದೆ?
ಅಪ್ಪಟ ಕಾಳಜಿ

ಅಂದ ಹಾಗೆ ನೆನಪಿಲ್ಲದವರಿಗೆ ಒಂದು ರಿಮೈಂಡರ್, ಇಂದು ಫಾದರ್ಸ್ ಡೇ. ನೀವು ನಿಮ್ಮ ತಂದೆಗೆ ಏನನ್ನು ಉಡುಗೊರೆಯಾಗಿ ನೀಡಲಿದ್ದೀರಾ?
ಅಮ್ಮಂದಿರಿಗಾದರೆ ಬಳೆ, ಸರ, ಸೀರೆ, ಚೂಡಿದಾರ, ನೈಲ್ ಪಾಲಿಷ್, ಲಿಪ್‌ಸ್ಟಿಕ್, ಕಣ್ಣುಕಪ್ಪು, ಫರ್ಫ್ಯೂಂನಂಥ ಮೇಕಪ್ ಸಾಮಾಗ್ರಿ, ಪರ್ಸ್, ಬ್ಯಾಗ್, ಅಡುಗೆಗೆ ಬೇಕಾದ ಸಾಮಾಗ್ರಿಗಳು, ಉಪಕರಣಗಳು, ಇತ್ಯಾದಿ ಕೊಡಬಹುದು. ಆದರೆ ಅಪ್ಪಂದಿರಿಗೆ ಉಡುಗೊರೆ ನೀಡುವುದು ಎಂದರೆ ಶೇವಿಂಗ್ ಕಿಟ್, ಬೆಲ್ಟ್, ಶೂ-ಸಾಕ್ಸ್, ಗಾಗಲ್ಸ್, ವಾಲೆಟ್, ಶರ್ಟ್- ಪ್ಯಾಂಟ್ ಮಾತ್ರ ನಮ್ಮ ತಲೆಗೆ ಹೊಳೆಯುವ ಐಡಿಯಾ. ಅದೆಲ್ಲವೂ ನನ್ನ ಬಳಿ ಇದೆ ಎಂದು ಅದಕ್ಕೂ ಕಲ್ಲು ಹಾಕುತ್ತಾರೆ ಅಪ್ಪ. ಹಾಗಾಗಿ ಮಕ್ಕಳ ಬಳಿ ಹೆಚ್ಚಿನ ಆಯ್ಕೆಯೇ ಇಲ್ಲ!
ಫೋಟೊ ಫ್ರೇಮುಗಳು ಪ್ರತಿ ವರ್ಷ ನೀಡಿ ಮನೆ ಪೂರ್ತಿ ಫೋಟೊ ಗ್ಯಾಲರಿಯಾಗಿ ಬಿಡುತ್ತದೆ. ಇನ್ನು ಅತ್ಯಾಧುನಿಕ ಗ್ಯಾಜೆಟ್ ಕೊಡಿಸೋಣ ಎಂದರೆ- ಮತ್ತೆ ನಾವೇ ಅದನ್ನು ಬಳಸುವುದು ಹೇಗೆ ಎಂದು ಹೇಳಿಕೊಡಬೇಕು. (ಅವರಿಗೆ ಬೇಕಾದಂತೆ ಅದನ್ನು ಬಳಸಲು ಆಗುತ್ತಿಲ್ಲ ಎಂದಾಗ ಮತ್ತೆ ನಾವೇ ಬೈಸಿಕೊಳ್ಳಬೇಕು ಕೂಡ!) ಕಾರಿಗೆ ಬೇಕಾದ ಉಪಕರಣ ಕೊಡೋಣ ಎಂದರೆ ಅವುಗಳ ಬಗ್ಗೆ ನಮಗೆ ಅಷ್ಟು ತಿಳಿದಿಲ್ಲ. ತಂದು ಕೊಟ್ಟ ನಂತರ ಉಪಯೋಗಕ್ಕೆ ಬಾರದೆ ನಮ್ಮ ಉಡುಗೊರೆ ಮೂಲೆ ಗುಂಪು ಆಗುವುದು ಖಚಿತ.
ಆದುದರಿಂದ ಅಪ್ಪನಿಗೆ ಬೆಸ್ಟ್ ಉಡುಗೊರೆ ನೀಡುವುದೆಂದರೆ ಅವರಿಷ್ಟದ ಹವ್ಯಾಸವನ್ನು ಉತ್ತೇಜಿಸುವುದು. ಸಿನಿಮಾ ನೋಡುವುದು ಇಷ್ಟವಿದ್ದರೆ, ತಂದೆ- ಮಕ್ಕಳು ಜತೆಗೆ ಚಿತ್ರ ನೋಡಲು ಹೋಗಬಹುದು. ಅಡುಗೆ ಮಾಡುವುದು ಇಷ್ಟವಿದ್ದರೆ ನಳಪಾಕದಲ್ಲಿ ನೆರವಾಗಬಹುದು. ಕಾರೆಂದರೆ ಬಹಳ ಪ್ರೀತಿ ಇದ್ದರೆ, ಕಾರಿಗೆ ಸವೀರ್ಸ್ ಮಾಡಿಸುವುದು ಅಥವಾ ಮಕ್ಕಳೇ ಕಾರು ತೊಳೆದುಕೊಟ್ಟು ನೋಡಬಹುದು. ಅವರ ಆರೋಗ್ಯದ ಬಗ್ಗೆ ಕಾಳಜಿ ಇದ್ದರೆ ಜಿಂ ಮೆಂಬರ್‌ಶಿಪ್ ನೀಡುವುದು, ಈಜಲು ಜತೆ ಹೋಗುವುದು ಇಲ್ಲವೇ ಇಬ್ಬರು ಸೇರಿ ಒಂದು ಗಿಡ ನೆಟ್ಟು ದಿನಾ ನೀರುಣಿಸಬಹುದು. ಇಂಥ ಉಡುಗೊರೆ ನೀಡುವುದರಿಂದ ಮಕ್ಕಳ ಮತ್ತು ಅಪ್ಪನ ಜೀವನದಲ್ಲಿ ಹುರುಪು, ಲವಲವಿಕೆ ಹೆಚ್ಚಾಗುತ್ತದೆ.
ಟ್ರೆಕ್ಕಿಂಗ್, ಹೈಕಿಂಗ್ ಮುಂತಾದ ಹವ್ಯಾಸಗಳಿದ್ದರೆ ತಂದೆ- ಮಕ್ಕಳು ಹೊಸ ಜಾಗಗಳನ್ನು ಪರಿಶೋಧಿಸಬಹುದು. ಅಪ್ಪಂದಿರ ದಿನ ಪ್ರತಿ ವರ್ಷವೂ ಭಾನುವಾರ ಬರುವುದರಿಂದ ಸಮಯವಿಲ್ಲ ಎಂಬ ನೆಪ ನಡೆಯದು! ಇನ್ನು ಅಪ್ಪಂದಿರು ತಂಬಾಕು ಸೇವಿಸುವುದು ನೋಡಿ ಬೇಸತ್ತಿದ್ದರೆ, ಅವರ ಕೋಣೆಯ ಬಾಗಿಲ ಮುಂದೆ ಕುಳಿತು ಅರವಿಂದ ಕೇಜ್ರಿವಾಲ್‌ನಂತೆ ಧರಣಿ ಮಾಡಬಹುದು! ಇಲ್ಲವೇ ಚಟ ಬಿಡಿಸಲು ತಂಬಾಕು ರಹಿತ ಸುಪಾರಿ ಅಥವಾ ನಿಕೋಟಿನ್ ಚುಯಿಂಗ್ ಗಂಗಳನ್ನು ನೀಡಬಹುದು!
ನಿಮಗೆ ಕತೆ-ಕವನ ಬರೆಯುವುದು ಇಷ್ಟವಿದ್ದರೆ, ಚಿತ್ರ ಬಿಡಿಸುವುದು ಖುಶಿ ತರುತ್ತದೆಯೆಂದಾದರೆ ಅಪ್ಪನಿಗೆ ಗ್ರೀಟಿಂಗ್ ಕಾರ್ಡ್ ಮಾಡಿ ಕೊಡಿ. ನಿಮ್ಮ ವಯಸ್ಸು ಎಷ್ಟೇ ಆಗಿರಲಿ. ನೀವು ಕೈಯ್ಯಾರೆ ಮಾಡಿಕೊಟ್ಟಿದ್ದೀರ ಎಂದಾದರೆ ಅಪ್ಪ ಖಂಡಿತಾ ಸಂತೋಷಗೊಳ್ಳುತ್ತಾನೆ, ಹೆಮ್ಮೆಯಿಂದ ಬೀಗುತ್ತಾನೆ. ಇನ್ನು ಚೆನ್ನಾಗಿ ಹಾಡು ಹಾಡಲು ಅಥವಾ ನೃತ್ಯ ಮಾಡಲು ಬರುತ್ತದೆ ಎಂದಾದರೆ ಹಾಡು ಅಥವಾ ನೃತ್ಯವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿ ನೋಡಿ. ನಿಮ್ಮ ಸ್ನೇಹಿತರ ಬಳಿ ಅಪ್ಪನಿಗೆ ಶುಭಾಶಯ ಹೇಳಿಸಿ. ಸ್ವತಃ ನೀವೇ ಹೂಗುಚ್ಚ ತಯಾರಿಸಿ ಕೊಡಿ. ನೀವು ಕೈಗೊಂಡ ಯೋಜನೆಗಳು ಫೇಲ್ ಆಗಬಹುದು. (ನನ್ನವು ಹಲವು ಬಾರಿ ಆಗಿವೆ, ಆಗುತ್ತಲೇ ಇವೆ). ಆದರೆ ನಿರಾಶೆ ಬೇಡ. ಏಕೆಂದರೆ ಆ ಯೋಜನೆಯ ಹಿಂದಿನ ಶ್ರಮವನ್ನು ಖಂಡಿತವಾಗಿಯೂ ನಿಮ್ಮ ತಂದೆ ಗಮನಿಸಿಯೇ ಗಮನಿಸುತ್ತಾರೆ. ಆದ್ದರಿಂದ ಸಂಕೋಚವಿಲ್ಲದೇ ಈ ಬಾರಿಯ ಫಾದರ್ಸ್ ಡೇ ಆಚರಿಸಿ. ಆಲ್ ದಿ ಬೆಸ್ಟ್!


-ಅದಿತಿಮಾನಸ. ಟಿ. ಎಸ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಯುವತಿ ಮೇಲೆ ಅತ್ಯಾಚಾರ ಆರೋಪ: ಹುಣಸಮಾರನಹಳ್ಳಿ ಮಠದ ನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ ಬಂಧನ

ಚುನಾವಣೆ ಘೋಷಣೆಯಾದ್ರೆ 25 ಕಾಂಗ್ರೆಸ್‌ ಶಾಸಕರು ಬಿಜೆಪಿ ಸೇರಲು ರೆಡಿ ಇದ್ದಾರೆ: ವಿಜಯೇಂದ್ರ ಹೊಸ ಬಾಂಬ್‌

KPSC ನೇಮಕಾತಿ ಹಗರಣದ ಕಿಂಗ್‌ಪಿನ್ ಬಸವರಾಜ್ ಕನ್ನಾಳೆಗೆ 5 ದಿನ ಜಾಮೀನು ಮಂಜೂರು; ಇಲ್ಲಿದೆ ಕಾರಣ...

ರಸ್ತೆ ಮಧ್ಯೆ ನಮಾಜ್ ಮಾಡುತ್ತಿದ್ದ ಪಾಕ್‌ ಮೂಲದ ವಿದ್ಯಾರ್ಥಿನಿಗೆ ಕಾರು ಢಿಕ್ಕಿ, ಸಾವು; ಚಾಲಕನಿಗೆ ಜೈಲು ಶಿಕ್ಷೆ ವಿನಾಯಿತಿ!