ಯಕ್ಷ ಸಿಂಚನ
ಬೆಂಗಳೂರಿನ ಹವ್ಯಾಸಿ ಯಕ್ಷಗಾನ ತಂಡ ಯಕ್ಷಸಿಂಚನ ಟ್ರಸ್ಟ್ ತನ್ನ 5ನೇ ..
ಬೆಂಗಳೂರಿನ ಹವ್ಯಾಸಿ ಯಕ್ಷಗಾನ ತಂಡ ಯಕ್ಷಸಿಂಚನ ಟ್ರಸ್ಟ್ ತನ್ನ 5ನೇ ವಾರ್ಷಿಕೋತ್ಸವವನ್ನು ಇತ್ತೀಚೆಗೆ ಎಡಿಎ ರಂಗಮಂದಿರದಲ್ಲಿ ಆಚರಿಸಿತು. ಇದೇ ಸಂದರ್ಭ 19ನೇ ಶತಮಾನದ ಕವಿ ಹಳೆಮಕ್ಕಿ ರಾಮ ವಿರಚಿತ ಕೃಷ್ಣಾರ್ಜುನ ಕಾಳಗ ಮತ್ತು ದೇವಿದಾಸ ವಿರಚಿತ ಪ್ರಮೀಳಾರ್ಜುನ- ಬಬ್ರುವಾಹನ ಎಂಬ ಅಪರೂಪದ ಪ್ರಸಂಗಗಳನ್ನು ಸೊಗಸಾಗಿ ಪ್ರದರ್ಶಿಸಲಾಯಿತು. ಯಕ್ಷಗುರು ಕೃಷ್ಣಮೂರ್ತಿ ತುಂಗರ ಸಾರಥ್ಯದ ಯಕ್ಷಕಲಾ ಅಕಾಡೆಮಿಯ ಬಾಲ ಕಲಾವಿದರು ಕೃಷ್ಣಾರ್ಜುನ ಕಾಳಗವನ್ನು ನಡೆಸಿಕೊಟ್ಟರು. ಯಕ್ಷಸಿಂಚನ ತಂಡ ಪ್ರಮೀಳಾರ್ಜುನ- ಬಬ್ರುವಾಹನ ಪ್ರಸಂಗವನ್ನು ಪ್ರದರ್ಶಿಸಿತು. ಕಲಾವಿದರು ತೂಕದ ಅಭಿನಯ, ಮಾತುಗಾರಿಕೆ, ಅತ್ಯುತ್ತಮ ಹೆಜ್ಜೆಗಾರಿಕೆ, ಅಭಿನಯ ಪ್ರೌಢಿಮೆಯಿಂದ ಮನ ಸೂರೆಗೊಂಡರು. ಸಭಾ ಕಾರ್ಯಕ್ರಮದಲ್ಲಿ ಬಡಗುತಿಟ್ಟಿನ ಖ್ಯಾತ ಭಾಗವತ ಕಪ್ಪೆಕೆರೆ ಸುಬ್ರಾಯ ಹೆಗಡೆ ಅವರನ್ನು ಯಕ್ಷಸಿಂಚನ 2014ನೇ ಸಾಲಿನ ಸಾರ್ಥಕ ಸಾಧಕ ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ಯಕ್ಷಗಾನ ವಿಮರ್ಶಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ವೇಷಧಾರಿ ಮಂಟಪ ಪ್ರಭಾಕರ ಉಪಾಧ್ಯಾಯ ಮೆಚ್ಚುಗೆಯ ಮಾತಾಡಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.