ಡ್ಯಾನ್ಸ್ ಎಂದರೆ ಮಕ್ಕಳಿಗೆ ಬಹಳ ಇಷ್ಟ. ಅದರಲ್ಲೂ ನಿರ್ಜೀವ ವಸ್ತುವನ್ನು ಕುಣಿಸುವಾಗ ಅವುಗಳಿಗೆ ಸಿಗುವ ಮಜಾನೇ ಬೇರೆ. ಇನ್ನು ಸುಮ್ಮನೆ ಇರುವ ಒಂದು ನಾಣ್ಯ ತಕಧಿಮಿತ ಎಂದರೆ ಎಷ್ಟು ಖುಷಿಯಾಗಬೇಡ! ನಾಣ್ಯವನ್ನು ಹಾಗೆ ಕುಣಿವಂತೆ ಮಾಡೋದು ಬಹಳ ಸುಲಭ.
ಏನೇನು ಬೇಕು?
ಬೌಲ್
ತಣ್ಣನೆ ನೀರು
ನಾಣ್ಯ
ಗಾಜಿನ ಬಾಟಲ್
ಏನು ಮಾಡಬೇಕು?
ಬೌಲ್ ಒಳಗೆ ತಣ್ಣನೆ ನೀರು ಹಾಕಿ.
ಈಗ ಬಾಟಲಿಯನ್ನು ತೆಗೆದುಕೊಂಡು, ಬೌಲ್ ಒಳಗೆ ಕುತ್ತಿಗೆ ಮುಳುಗುವ ಹಾಗೆ ಅದ್ದಿ. ಯಾವುದೇ ಕಾರಣಕ್ಕೂ ನೀರು ಬಾಟಲಿಯ ಒಳ ಹೋಗುವ ಹಾಗಿಲ್ಲ.
ನಂತರ ಬಾಟಲಿಯನ್ನ ನೇರ ನಿಲ್ಲಿಸಿ, ಅದರ ಮುಚ್ಚುಳದ ತುದಿಯಲ್ಲಿ ನಾಣ್ಯವನ್ನು ಇಡಿ.
ಬಾಟಲಿಯನ್ನು ಎರಡೂ ಕೈಯಿಂದ ಬಿಗಿ ಮಾಡಿ ಹಾಗೆಯೇ ಇಟ್ಟುಕೊಳ್ಳಿ. ನಾಣ್ಯ ಕುಣಿಯುವುದನ್ನು ಗಮನಿಸಿ.
(ಬಾಟಲಿಯೊಳಗೆ ಆವರಿಸಿರುವ ತಣ್ಣನೆಯ ವಾತಾವರಣದ ಮೇಲೆ ನಿಮ್ಮ ಮೈಶಾಖ ಆಕ್ರಮಣ ಮಾಡಲು ಶುರುಮಾಡುತ್ತದೆ. ಆಗ ಮೇಲ್ಮುಖ ಒತ್ತಡ ಉಂಟಾಗಿ, ನಾಣ್ಯ ಕುಣಿಯುತ್ತದೆ)