ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಪ್ರಸಾಧನ ಪಾಠ

Lingaraj Badiger
Updated On : 28 Jun 2014, 4:35 am

ಮೇಕ್‌ಅಪ್ ನಾಣಿ ಅವರ ಶಿಷ್ಯರಾದ ರಾಮಕೃಷ್ಣ ಕನ್ನರ್ಪಾಡಿ ಹಾಗೂ ವಸಂತ ಕುಮಾರ್ ಶೆಣೈ ಅವರು 'ಪ್ರಸಾಧನ- ನೀವೂ ಕಲಿಯಿರಿ' ಎಂಬ ಕೃತಿಯನ್ನು ರಚಿಸಿದ್ದಾರೆ. ಪ್ರಸಾಧನದಲ್ಲಿ ಯಾವ ಯಾವ ವರ್ಣಗಳನ್ನು, ಪರಿಕರಗಳನ್ನು ಉಪಯೋಗಿಸುತ್ತಾರೆ, ಅವುಗಳನ್ನು ಹೇಗೆ ಬಳಸಬೇಕು, ಯಾವ ಬಣ್ಣಗಳನ್ನು ಬಳಸುವುದರಿಂದ ನಟನ ಮುಖದಲ್ಲಿ ಯಾವ ಯಾವ ಭಾವನೆಗಳನ್ನು ಮೂಡಿಸಬಹುದು, ಯಾವ ಯಾವ ಬಣ್ಣದ ದೀಪಗಳು ನಟನ ಮುಖದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತವೆ ಎಂಬ ಮಾಹಿತಿಗಳು ಇದರಲ್ಲಿವೆ. ಸಾಂದರ್ಭಿಕವಾದ ವರ್ಣಚಿತ್ರಗಳು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ರಂಗ ಶಿಕ್ಷಣದ ವಿದ್ಯಾರ್ಥಿಗಳು ಮತ್ತು ಪಾತ್ರವರ್ಗದವರು ಆರ್ಟ್ ಪೇಪರಿನಲ್ಲಿ ಮದ್ರಿಸಿರುವ ಈ ಕೃತಿಯನ್ನು ಓದಲೇಬೆಕು.
ಪ್ರ: ನಾಕುತಂತಿ ಪ್ರಕಾಶನ, ಬೆಂಗಳೂರು, ಪುಟಗಳು 132, ಬೆಲೆ ರು. 300

ಕವಿತೆಯ ಓದು
ಪ್ರಭಾಕರ ಆಚಾರ್ಯ ಅವರ 'ಕವಿತೆ ಓದು' ಕೃತಿಯು ಕಾವ್ಯವನ್ನು ಯಾವ ನೆಲೆಯಿಂದ ಓದಬೇಕು ಎಂಬುದನ್ನು ವಿವರಿಸುವುದಕ್ಕೆ ಪ್ರಯತ್ನಿಸುತ್ತದೆ. ಮುಂಬಯಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಯನ್ನು ಕಳೆದಿರುವ ಆಚಾರ್ಯರು ಇಂಗ್ಲಿಷಿನಲ್ಲಿ ಹಲವು ಕೃತಿಗಳನ್ನು ರಚಿಸಿ ವಿಮರ್ಶಕರ ಮನ್ನಣೆಯನ್ನು ಗಳಿಸಿಕೊಂಡವರು. ಕಾವ್ಯವನ್ನು ಅರ್ಥಮಾಡಿಕೊಳ್ಳುವ ಬಗೆಯನ್ನು ಅವರು ವಿವರಿಸುವಾಗ ಇಂಗ್ಲಿಷ್ ವಿಮರ್ಶಕರ ಮಾತುಗಳನ್ನು ಉದಾಹರಣೆಯಾಗಿ ನೀಡುತ್ತಾರೆ. ಅವರೇ ಹೇಳಿರುವಂತೆ ಈ ಪುಸ್ತಕದ ಗುರಿ 'ನನ್ನ ಕವಿತೆಯ ಓದಿನ ಅನುಭವವನ್ನು ಓದುಗರೊಂದಿಗೆ ಹಂಚಿಕೊಳ್ಳುವುದು.' ಈ ಕೃತಿಯಿಂದ ನಿಮ್ಮ ಕವಿತೆಯ ಓದು ಇನ್ನಷ್ಟು ಸೂಕ್ಷ್ಮ ಸಂವೇದನೆಯ ಓದಾಗುವುದರಲ್ಲಿ ಸಂದೇಹವಿಲ್ಲ.
ಪ್ರ: ದೇಸಿ ಪುಸ್ತಕ, ಬೆಂಗಳೂರು, ಪುಟಗಳು 202, ಬೆಲೆ ರು. 150

ನಿರ್ಣಯ ಸಿಂಧು
ಹಿಂದೂ ಧಾರ್ಮಿಕ ವಿಚಾರಗಳ ವಿಷಯದಲ್ಲಿ ಇದು ಹೀಗೇ ಸರಿ ಎಂದು ಹೇಳುವ ಮಾರ್ಗದರ್ಶಿ ಗ್ರಂಥ ಕಮಲಾಕರ ಭಟ್ಟ ರಚಿಸಿರುವ 'ನಿರ್ಣಯ ಸಿಂಧು'. ಇದನ್ನು ಸಂಸ್ಕೃತ ಮೂಲ ಸಹಿತ ಸಮಗ್ರ ಕನ್ನಡ ಅನುವಾದವನ್ನು ಶೇಷ ನವರತ್ನ ನೀಡಿದ್ದಾರೆ. ಸಂಸ್ಕಾರದಿಂದ ಸಾಕ್ಷಾತ್ಕಾರದ ವರೆಗೆ ಮುನ್ನಡೆಸುವ ಅಪರೂಪದ ಸದಾಚಾರ ಸಂಹಿತೆ. ಸಹಸ್ರಾರು ವರ್ಷಗಳ ಭಾರತೀಯ ಪರಂಪರೆಯ ಸನಾತನ ಘನತೆಯನ್ನು ಸಾರುವ ಸರ್ವೋತ್ತಮ ಪ್ರಾತಿನಿಧಿಕ ಗ್ರಂಥ ಎಂದು ಮುಖಪುಟದಲ್ಲೇ ಪ್ರಕಟಿಸಲಾಗಿದೆ. ಇದೊಂದು ಆಚಾರ ಗ್ರಂಥವೆಂದೇ ಪ್ರಸಿದ್ಧ. ಎಲ್ಲ ಅನುಮಾನಗಳಿಗೂ ಇದರಲ್ಲಿ ಶಾಸ್ತ್ರ ಸಮ್ಮತವಾದ ಪರಿಹಾರವಿದೆ. ಪ್ರತಿಯೊಬ್ಬ ಧಾರ್ಮಿಕ ಶ್ರದ್ಧಾಳುವಿನ ಮನೆಯಲ್ಲಿ ಇರಬೇಕಾದ ಗ್ರಂಥ ಇದು.
ಪ್ರ: ಸಮಾಜ ಪುಸ್ತಕಾಲಯ, ಧಾರವಾಡ, ಪುಟಗಳು 1500, ಬೆಲೆ ರು. 1200

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments