ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಬೆಂಗಳೂರಿನ ಕಸ ಎತ್ತಲು ದೂರದ ಕೊರಿಯಾದವರೇ ಬೇಕೆ?

Lingaraj Badiger
Updated On : 28 Jun 2014, 4:26 am

= ಜೆ.ಆರ್.ಆದಿನಾರಾಯಣಮುನಿ, ಕೋಡಿಹಳ್ಳಿಮಠ
ಬೆಂಗಳೂರಿನ ಕಸ ಎತ್ತಲು ದೂರದ ಕೊರಿಯಾದವರೇ ಬೇಕೆ?
ಪಕ್ಕದ ದೇಶಕ್ಕೆ ಹೇಳಿದ್ದರೆ ಇನ್ನೊಬ್ಬ 'ಕಸ'ಬ್‌ನನ್ನೇ ಕಳಿಸ್ತಿದ್ರೋ ಏನೋ!

= ಕಾಳೀಹುಂಡಿ ಶಿವಕುಮಾರ್, ಮೈಸೂರು
ಅಡ್ಡದಾರಿ ಬಿಟ್ಟು ಒಳ್ಳೆಯ ಹಾದಿಯಲ್ಲಿ ಪಯಣಿಸಬೇಕು ಎಂದು ಮಾರ್ಗದರ್ಶನ ಮಾಡುವವರು ಕಡಿಮೆಯಾಗಿದ್ದಾರಲ್ಲ?
ಒಳ್ಳೆಯ ಹಾದಿಯಲ್ಲಿ ನಡೆದೂ ನಡೆದೂ ಅವರಿಗೂ ಬೋರಾಗಿದೆ ಬಿಡು.

= ಸ್ವಾಮಿ ನಿರ್ಮಲ, ಉಡಿಗಾಲ
ಡಿಕ್ಕಿ ಹೊಡೆದ ತಕ್ಷಣ ಥ್ಯಾಂಕ್ಸ್ ಅಂತಾಳಲ್ಲ?
- ನೀವು 'ಒನ್ಸ್ ಮೋರ್‌' ಅಂತೀರೇನೋ ಅನ್ನುವ ವಿಶ್ವಾಸ.

= ಬಿ.ಎಂ.ಪರಶಿವಮೂರ್ತಿ, ಬೆಂಗಳೂರು
ಹೆಂಡತಿಯ ಮಾತನ್ನು ಕೇಳದ ಗಂಡ ಇದ್ದಾನಾ?
- ಇದ್ದರೆ ಆತ ಗಂಡಸು ಕುಲಕ್ಕೇ ಅವಮಾನ!

= ಎಂ.ಬಿ.ಕೃಷ್ಣಮೂರ್ತಿ, ಚಾಮರಾಜನಗರ
ಅರ್ಧ ಸತ್ಯಕ್ಕೂ, ನಗ್ನ ಸತ್ಯಕ್ಕೂ ವ್ಯತ್ಯಾಸ?
- ಅರ್ಧ ಸತ್ಯವನ್ನು ಟಿವಿಯಲ್ಲಿ ಹಾಡುಹಗಲೇ ಎಲ್ಲರ ಮುಂದೆ ನೋಡಬಹುದು.

ಶ್ರೀಧರ್ ಡಿ.ರಾಮಚಂದ್ರಪ್ಪ, ಚಿತ್ರದುರ್ಗ
ಪ್ರೀತಿಯಲ್ಲಿ ಕಾಯಿಸುವ ಹುಡುಗ- ಹುಡುಗಿಯರನ್ನು ನಂಬಬಾರದಂತೆ ನಿಜವೇ?
- ಆದರೂ ನಂಬ್ತಾರೆ, ಶಾಕ್ ಹೊಡೆಯುತ್ತೋ ಇಲ್ವೋ ಅಂತ ವೈರ್ ಮುಟ್ಟಿ ಪರೀಕ್ಷೆ ಮಾಡಿದ ಹಾಗೆ.

= ನೆಲಮಂಗಲ ಮಹೇಶ್
ಪ್ರತಿದಿನ ದಿನಪತ್ರಿಕೆಯ 'ಭವಿಷ್ಯ' ನೋಡಿ ಕೆಲಸಕ್ಕೆ ಹೋಗುವವರಿಗೆ ನಿಮ್ಮ ಕಿವಿಮಾತು ಏನು?
- ಅದಕ್ಕಿಂತ ಹೆಂಡತಿಯ ಮುಖ ನೋಡುವುದು ವಾಸಿ, ಭವಿಷ್ಯ ತಟ್ಟನೆ ಗೊತ್ತಾಗಿಬಿಡುತ್ತದೆ.

= ಓಂ ಚೆನ್ನೇಶ್ ಅರಳಬಿಳಚಿ ಕ್ಯಾಂಪ್, ಭದ್ರಾವತಿ
ಸ್ವಮೂತ್ರಪಾನ ಮಾಡಿದರೆ ದೀರ್ಘಾಯುಷಿಗಳಾಗ್ತಾರ?
- ಮೂತ್ರ ಕುಡಿಯುವಾಗ ಮಾತ್ರ ತಾನು ಅಲ್ಪಾಯುಷಿಯಾಗಿದ್ದರೇ ಚೆನ್ನಿತ್ತು ಅನಿಸುವುದಂತೆ!

ಶ್ರೀಕಾಂತ ಮುದಗಲ್ಲ, ಇಳಕಲ್ಲ
ಇತ್ತಿತ್ತಲಾಗಿ ವಿಚಾರವಾದಿಗಳು ವಿಕಾರವಾದಿಗಳಾಗುತ್ತಿದ್ದಾರಲ್ಲ?
- ಪ್ರಯೋಜನವಿಲ್ಲ, ಕಾ-ಚಾ ಬದಲಾಯಿಸಬೇಡಿ.
= ಪಿ.ಜೆ.ರಾಘವೇಂದ್ರ, ಮೈಸೂರು
ಬಿಗ್ ಬಾಸ್ ಆಗಬೇಕಾದರೆ ಹೆಂಡ್ತಿ ಮಕ್ಕಳನ್ನು ಬಿಟ್ಟಿರಬೇಕಾ?
- ಬಿಗ್ ಬಾಸ್ ಮನೇಲಿ ಅದನ್ನೆಲ್ಲ ಹುಡುಕ್ಕೊಳ್ಳೋ ಕೆಪಾಸಿಟಿ ಇರಬೇಕು!

-ಎಸ್.ವಿ. ಪದ್ಮನಾಭ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement