ಖುಷಿ

ಮೋಸಗಾರ ವೀರೂ

ಒಂದು ಊರಿನಲ್ಲಿ ಬಲಶಾಲಿ ಯುವಕನಿದ್ದ. ಅವನ ಹೆಸರು ನಂದೀಶ. ಆದರೆ ಅವನು ಕೆಲಸವಿಲ್ಲದೆ ಅಡ್ಡಾಡುತ್ತಿದ್ದ. ಅದೇ ಸಂದರ್ಭದಲ್ಲಿ ಆ ಊರಿನ ಶ್ರೀಮಂತ ವೀರೂ ನಂದೀಶನನ್ನು ನೋಡಿ ಕರೆದು, 'ಅರೆ ಯಾಕೋ, ಹೀಗೆ ಊರಿನಿಂದ ಊರೂರು ಅಡ್ಡಾಡುತ್ತಿರುವೆ?' ಎಂದು ಕೇಳಿದ. ಆಗ ನಂದೀಶ 'ನಾನು ಕೆಲಸಕ್ಕಾಗಿ ಹುಡುಕಾಟ ಮಾಡುತ್ತಿರುವೆ' ಎಂದಾಗ ವೀರೂ 'ನಾನು ನಿನಗೆ ಕೆಲಸ ಕೊಡುವೆ. ಆದರೆ ಅದಕ್ಕೊಂದು ಷರತ್ತು ಇದೆ' ಎಂದ. 'ಅದ್ಯಾವ ಷರತ್ತು? ಏನಿಲ್ಲ ಇವತ್ತು ರಾತ್ರಿ ನಮ್ಮ ಹೊಲದಲ್ಲಿ ಬರುವ ಹುಲಿಯನ್ನು ಕೊಲ್ಲಬೇಕು. ಅದು ದಿನವೂ ಬಂದು ನನ್ನ ಹೊಲವನ್ನು ತುಳಿದು ಹಾಳು ಮಾಡುತ್ತಿದೆ' ಎಂದಾಗ ನಂದೀಶ ಒಪ್ಪಿದ.
ಮರುದಿನ ರಾತ್ರಿ ನಂದೀಶ ವೀರೂನ ಮಾತಿನಂತೆ ಅವನ ಹೊಲದಲ್ಲಿ ಕುಳಿತ. ಶ್ರೀಮಂತನಾದ ವೀರೂ ಇವನನ್ನು ಪರೀಕ್ಷಿಸಲು ಇಬ್ಬರು ಗೂಢಚಾರಿಗಳನ್ನು ನೇಮಿಸಿದ್ದ. ರಾತ್ರಿ ಒಂದರ ಸಮಯವಾಗಿರಬಹುದು. ಹುಲಿ ಬಂದಿತು. ತಕ್ಷಣವೇ ನಂದೀಶ ಹುಲಿಯ ಜೊತೆ ಹೋರಾಟಕ್ಕೆ ಇಳಿದ. ಮಾತಿನಂತೆ ನಂದೀಶ ಹುಲಿಯನ್ನು ಕೊಂದ. ಆ ಇಬ್ಬರು ಗೂಢಚಾರಿಗಳು ನಂದೀಶನ ಸಾಹಸ ಮೆಚ್ಚಿದರು.
ಬೆಳಗಾಯಿತು. ನಂದೀಶ ವೀರೂನ ಹತ್ತಿರ ಉದ್ಯೋಗ ಕೇಳಿದ. ವೀರೂನಿಗೆ ಆಶ್ವರ್ಯವಾಯಿತು. 'ಅದು ಹೇಗೆ ಈತ ಹುಲಿಯನ್ನು ಕೊಂದ' ಎಂದು. ವೀರೂ ನಂದೀಶನಿಗೆ ಕೆಲಸ ಕೊಡಲು ಮನಸ್ಸು ಮಾಡಲಿಲ್ಲ. 'ಇಂದು ಬೇಡ, ನಾಳೆ ಬಾ... ನಾಡಿದ್ದು ಬಾ...' ಹೀಗೆ ಹೇಳಿ ದಿನ ದೂಡುತ್ತಿದ್ದ. ಇದರಿಂದ ಬೇಸತ್ತ ನಂದೀಶ ಆ ಊರಿನ ಮಹಾರಾಜನ ಬಳಿ ನ್ಯಾಯಕ್ಕಾಗಿ ಹೋದ.
ಮಹಾರಾಜ ವೀರೂನನ್ನು ಕರೆಯಿಸಿ ಹೇಳಿದ, 'ನಾನು ನಿನಗೆ ಮಂತ್ರಿ ಪದವಿ ಕೊಡುವೆ. ಆದರೆ ನೀನು ಅದಕ್ಕೆ ಒಂದು ಷರತ್ತು ಒಪ್ಪಬೇಕು'. ವೀರೂ ಸಂತಸದಿಂದ 'ಹೇಳಿ' ಎಂದ. 'ನೀನು ಅಲ್ಲಿ ಕಾಣಿಸುತ್ತಿರುವ ನದಿಯಲ್ಲಿ ರಾತ್ರಿಯಿಂದ ಬೆಳಗ್ಗಿನ ತನಕ ಈಜುತ್ತಾ ಬೆಳಗಾಗುವವರೆಗೂ ಇರಬೇಕು'. ಒಪ್ಪಿದ ವೀರೂ ಆ ರಾತ್ರಿ ಕೊರೆಯುವ ಚಳಿಯಲ್ಲಿ ಈಜುತ್ತಾ ಬೆಳಗಾಯಿಸಿದ.
ವೀರೂ ರಾಜನ ಬಳಿ ಹೋಗಿ 'ನೀವು ಹೇಳಿದಂತೆ ಮಾಡಿದೆ. ಮಂತ್ರಿ ಪದವಿ ಕೊಡಿ' ಎಂದ. ರಾಜ 'ಇಂದು ಬೇಡ, ನಾಳೆ ಬಾ' ಎಂದ. ಮರುದಿನ ಹೋದಾಗಲೂ ಹೀಗೆಯೇ ಹೇಳಿದ. ಇದರಿಂದ ವೀರೂನಿಗೆ ಅಸಮಾಧಾನವಾಯಿತು. ಇದು ಯಾವ ನ್ಯಾಯವೆಂದು ರಾಜನನ್ನು ಕೇಳಿದ. ಆಗ ನಂದೀಶನನ್ನು ಕರೆಯಿಸಿದ ರಾಜ, 'ಈತನಿಗೆ ನೀನು ಕೆಲಸ ಕೊಡುವೆ ಎಂದು ಅಡ್ಡಾಡಿಸಲಿಲ್ಲವೆ?' ಎಂದು ಕೇಳಿದ. ಆಗ ವೀರೂನಿಗೆ ತನ್ನ ತಪ್ಪಿನ ಅರಿವಾಯಿತು. ಕೂಡಲೇ ನಂದೀಶನಿಗೆ ಕೆಲಸ ಕೊಟ್ಟ.
- ಮಾನಸ ಹೆಗಡೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

Jantar Mantar ಬಳಿ ಭಾರೀ ಹೈಡ್ರಾಮಾ: ಬ್ಯಾರಿಕೇಡ್ ದಾಟಿದ CJP ನಾಯಕರು ಪೊಲೀಸ್ ವಶಕ್ಕೆ; ಪ್ರತಿರೋಧ ನಿಷೇಧ ಸಾಧ್ಯವಿಲ್ಲ-ಕೇಂದ್ರದ ವಿರುದ್ಧ ದೀಪ್ಕೆ ಆಕ್ರೋಶ

Batman masks, offline maps: ನಟಿ ರಿಚಾ ಚಡ್ಡಾ ಐಡಿಯಾ ಫಾಲೋ ಮಾಡ್ತಿರುವ ಯುವಕರು; Facial recognition camera ಫುಲ್ ಕನ್‌ಫ್ಯೂಸ್, ದೆಹಲಿ ಪೊಲೀಸರು ತಬ್ಬಿಬ್ಬು..!

ಪಂಜಾಬ್: ಫೇಸ್‌ಬುಕ್ ಲೈವ್‌ನಲ್ಲಿರುವಾಗಲೇ ಮಾದಕವಸ್ತು ವಿರೋಧಿ ಹೋರಾಟಗಾರ ಪರ್ವಿಂದರ್ ಸಿಂಗ್ ಜೋತಾ ಗುಂಡೇಟಿಗೆ ಬಲಿ!

‘ಪ್ರತಿಭಟನೆ ನಮ್ಮ ಹಕ್ಕು, ಬಂಧನಗಳಿಂದ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ’: ದೇಶಾದ್ಯಂತ ಚಳವಳಿ ವಿಸ್ತರಿಸಲು Cockroach Janta Party ಪಣ (INTERVIEW)