ಅಸಲಿ ಪ್ರಾಬ್ಲಮ್
ತಿಮ್ಮಾ: ತಮ್ಮಾ ಮನಿ ಕಟ್ಟಿ ಅಂತ ಹೇಳಲೇ ಇಲ್ಲ?
ತಮ್ಮಾ: ನಿನ್ನ ಕಡೇನಖ ಆರ ಲಕ್ಷ ಕೈಗಡ ತಗೋಂಡೇನಿ. ಫಿನಿಶಿಂಗ್ಗೆ ಅಂತ.
ತಿಮ್ಮಾ: ಹೌದಪಾ ಅದೇನೋ ಫಾಲ್ಸ ಸೀಲಿಂಗ್ ಅಂತ ಅಂತಿದ್ದೀ...
ತಮ್ಮಾ: ಹೌದ ಮಾರಾಯಾ... ಕಟ್ಟಿದ ಮನಿ ಜಂತಿಗೆಲ್ಲ ಫಾಲ್ಸ ಸೀಲಿಂಗ್ ಮಾಡಸೇನಿ ಛಂದ ಕಾಣಾಕತ್ತೇತಿ...
ತಿಮ್ಮಾ: ಅಂದ್ರ ಏನ್ ಮಾಡಸೇದಿಪಾ?
ತಮ್ಮಾ: ಅದ ಹಳೇ ಕಾಲದಾಗ ದೊಡ್ಡ ದೊಡ್ಡ ಮಹಲಗಳನ್ನ ಕಟ್ಟತಿದ್ರಲಾ, ಆಗಿನ ಕಾಲದ ರಾಜರು ಅವರ ಹ್ಯಾಂಗ ತಮ್ಮ ಮಹಲಗಳನ್ನ ಶೃಂಗಾರ ಮಾಡತಿದ್ದರೋ ನಾನೂ ಹಂಗ ಮಾಡಸೇನಿ...
ತಿಮ್ಮಾ: ಅಂದ್ರ ಈ ಫಾಲ್ಸ ಸೀಲಿಂಗ್ ಅನ್ನೋದು ಭಾಳ ಹಳೇದಂತಾತು.
ತಮ್ಮಾ: ಹಳೇದಲ್ಲೋ ಮಾರಾಯ, ಹೆಚ್ಚ ಹೊಸ ಐಡ್ಯಾ... ಆಗಿನ ಕಾಲದವರು ಕಲ್ಲಿನ್ಯಾಗ ಕೆತ್ತತಿದ್ರಲಾ... ಈಗ ಅದನ್ನ ಪ್ಲಾಸ್ಟರ್ ಆಫ್ ಪ್ಯಾರಿಸ್ನ್ಯಾಗ ಮಾಡ್ತಾರ...
ತಿಮ್ಮಾ: ಆದರ ಈ ಪ್ಲಾಸ್ಟರನ್ನ ಕಾಲು-ಕೈ ಮುರದಾಗ ಹಾಕ್ತಾರಲಾಖಖ...
ತಮ್ಮಾ: ಹೌದೋ... ಅಲ್ಲೂ ಹಾಕ್ತಾರ, ಇಲ್ಲೂ ಬಳಸ್ತಾರ.
ತಿಮ್ಮಾ: ಮತ್ತ ಅದು ತಿಂಗಳೊಪ್ಪತ್ತಿನ್ಯಾಗ ಉದರಿ ಹೋಗುದಿಲ್ಲ?
ತಮ್ಮಾ: ಇಲ್ಲಿಲ್ಲ... ಘಟ್ಟಮುಟ್ಟ ಇರತದ ಅಂತ ಹೇಳ್ಯಾನ ಮೆಸ್ತ್ರಿ.
ತಿಮ್ಮಾ: ಆದರೂ ಆ ನಕಲಿ ಮಾಳಗಿ ಯಾಕ ಮಾಡಿಸಬೇಕು ಅಂತ ನನ್ನ ಪ್ರಶ್ನೆ... ಅಷ್ಟ ರೊಕ್ಕ ಖರ್ಚು ಮಾಡಿ ನಕಲಿ ಐಡಿಯ್ಯಾ ಯಾಕ ಬಳಸಬೇಕು?
ತಮ್ಮಾ: ಛಂದ ಕಾಣಕ್ಕ!!
ತಿಮ್ಮಾ: ಅದೆಂಥ ಛಂದೋ ತಮ್ಮಾ, ಅಸಲಿ ಮಾರಿಗೆ ನಕಲಿ ಪೌಡರ್- ಕ್ರೀಮ ಬಳಸ್ಕೊಳೋದು, ಅಸಲಿ ಪೋಟೋಗಳಿಗೆ ನಕಲಿ ಎಫೆಕ್ಟ್ ಕೊಡೋದು, ಅಸಲಿ ವ್ಯಕ್ತಿತ್ವಕ್ಕ ನಕಲಿ ಫ್ಲೆಕ್ಸ ಹಾಕಸೋದು... ಅಸಲಿ ನಾಯಕತ್ವಕ್ಕ ನಕಲಿ ರಾಜಕೀಯ ಮಾಡೋದು...
ತಮ್ಮಾ: ಏಯ್... ಸ್ಟಾಪ್ ತಿಮ್ಮಾ... ಸ್ಟಾಪ್!! ಇದೇನು ನಿನ್ನ ಪಟ್ಟಿ?
ತಿಮ್ಮಾ: ಇನ್ನೂ ಮುಗದಿಲ್ಲ... ಅಸಲಿ ಫೇಸ್ಬುಕ್ನ್ಯಾಗ ನಕಲಿ ಸ್ಟೇಟಸ್ ಹಾಕೋದು, ಅಸಲಿ ಸಿನಿಮಾಗಳಿಗೆ ನಕಲಿ ರಿಮೇಕ್ ಮಾಡೋದು, ಅಸಲಿ ಹಾಲಗೆ ನಕಲಿ ಶಾಂಪೋದ ನೀರು ಹಾಕೋದು, ಒಟ್ಟಿನ್ಯಾಗ ಅಸಲಿ ನಕಲಿ ಸಮಸ್ಯಾ ಭಾಳ.. ಹಾಂಗ ನಕಲಿ ಡಾಕ್ಟರು, ನಕಲಿ ಜಾಹೀರಾತು, ನಕಲಿ ಹೀರೋಗಳು, ಸ್ಟಾರುಗಳು ಒಂದಖ.. ಎರಡಾಖಖ..
ತಮ್ಮಾ: ಹೌದು ಅಸಲಿ ಹಾಲ ಕುಡುದ ಮಕ್ಕಳ ಬದುಕುದಿಲ್ಲ, ಇನ್ನ ನಕಲಿ ನೀರ ಬೆರೆಸಿದ ಹಾಲಹಲ ಕುಡದವರ ಬದುಕತಾರ?
ತಿಮ್ಮಾ: ಆದರೂ ಅಸಲಿ ಜನಗಳಿಗೆ ಈ ನಕಲಿ ವ್ಯಾಮೋಹ ಯಾಕ ಅದ ಅಂತ ಗೊತ್ತಾಗವಲ್ಲದು.
ತಮ್ಮಾ: ಅದು ಗೊತ್ತಾಗಿದ್ದರ ಅಸಲಿ ಪ್ರಾಬ್ಲಮ್ ಇರತಿದಿಲ್ಲ ಏನಂತಿ?
- ಯಶವಂತ ಸರದೇಶಪಾಂಡೆ
khullamkhullabevubella@gmail.com