ನಮ್ಮೂರೇ ಚೆಂದ...
ನಮ್ಮೂರೇ ಚೆಂದ
ನಮ್ಮೂರಲ್ಲಿ ಹಗಲು ಅಂದ್ರೆ
ಅದೇ ಬೇರೆ ರೀತಿ
ಬಸ್ಸು, ಕಾರು ಸದ್ದೇ ಇಲ್ಲ
ಎಲ್ಲಾ ಹಕ್ಕಿ ಹಾಡು ಪ್ರೀತಿ,
ಗೋಡೆಗೊಂದು, ಕೈಯಲ್ಲೊಂದು
ಗಡಿಯಾರ ಏನೂ ಇಲ್ಲ
ಬೆಳಗಿನ ಜಾವ ಐದಾದ್ರೆ ಸಾಕು
ಅಜ್ಜ ಹಾಸಿಗೇಲಿ ಇರೊಲ್ಲ
ಕಾಫಿ, ಟೀ ಏನೂ ಬೇಡ
ಅಜ್ಜ ಹೊರಟ ತೋಟಕ್ಕೆ
ಮನೆ ಸುತ್ತ ಬರೀ ಮರ
ಸೂರ್ಯನೇ ಕಾಣೊಲ್ಲ ನೋಡೋಕೆ
ಸಿಮೆಂಟು, ಬಿಳಿಕಲ್ಲು
ಯಾವುದೂ ಇಲ್ಲ ನೆಲಕ್ಕೆ
ಸಾರಿಸಿದ ಸಗಣಿ ನೆಲ
ಬಲು ಸುಂದರ ಕಾಣೋಕೆ
ಅದೇ ಬೆಳಕು, ಅದೇ ಕತ್ತಲು
ನಮಗೆ ಬೇಜಾರೇ ಇಲ್ಲ
ಏನೇ ಮಾಡ್ಲಿ, ಏನೇ ಆಗ್ಲಿ
ನಾ ಬಿಡಲಾರೆ ನಮ್ಮೂರ!
- ಶಿವನಾಪುರ ನರಸಿಂಹಮೂರ್ತಿ