ರಾಜಕಾರಣಿಗಳೇಕೆ ಸರಿಯಾದ ಸಮಯಕ್ಕೆ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ?
ಅಣಜಿ ಮಂಜುನಾಥ್, ಮಾಧನಬಾವಿ.
ರಾಜಕಾರಣಿಗಳೇಕೆ ಸರಿಯಾದ ಸಮಯಕ್ಕೆ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ?
- ಹಾಗೆ ಹಾಜರಾದರೆ ಸಮಯ 'ಸಾಧಕ'ರು ಅಂತಾರೆ ಎನ್ನುವ ಭಯ!
ಕೆ.ಜೆ. ರಾಮಪ್ರಸಾದ್, ಕಡೂರು.
ಕಲಿಯುಗ ಅಂತ್ಯವಾದ ಮೇಲೆ ಮುಂದೆ ಯಾವ ಯುಗ ಬರುತ್ತದೆ?
- ಈ ಪ್ರಶ್ನೆಯನ್ನು 'ಟಿಆರ್ಪಿ ಜ್ಯೋತಿಷಿ'ಗಳಿಗೆ ಕೇಳಿ!
ಪಿ.ಜೆ. ರಾಘವೇಂದ್ರ, ಮೈಸೂರು.
ಚುನಾವಣೆ ಹತ್ತಿರವಾದಂತೆ ರಾಜಕಾರಣಿಗಳ ಅನಧಿಕೃತ ಪತ್ನಿಯರು ಪ್ರತ್ಯಕ್ಷರಾಗುವುದೇಕೆ?
- ಆ ರಾಜಕಾರಣಿಗೆ ಎಷ್ಟೆಷ್ಟು 'ಕ್ಷೇತ್ರ'ಗಳಿತ್ತು ಅಂತ ತೋರಿಸೋಕೆ!
ಸ್ವಾಮಿ ನಿರ್ಮಲಾ, ಉಡಿಗಾಲ.
ಕನ್ನಡಿಯಲ್ಲಿ ನಮ್ಮ ಹಣೆಬರಹ ಕಾಣುವಂತಿದ್ದರೆ ಹೇಗಿರುತ್ತಿತ್ತು?
- ನಿಮಗಾಗದವರು ಅದನ್ನು ಸಿಡಿ ರೈಟ್ ಮಾಡಿಟ್ಕೋತಿದ್ರು!
ಬಿ.ಎಸ್. ನಾರಾಯಣಸ್ವಾಮಿ, ಬೋಧನಹೊಸಹಳ್ಳಿ.
ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಕೋಟಿ ರುಪಾಯಿ, ಪ್ರೇಯಸಿಯೊಬ್ಬಳು ಮನದೊಳಗಿದ್ದರೆ?
- ಕೋಟಿ ರುಪಾಯಿ ಖರ್ಚಾಗಬಹುದು!
ಪೇಂಟರ್ ಪಾಪು, ಸಂತೇಮರಹಳ್ಳಿ.
ಕುಂಬಳಕಾಯಿ ಕಳ್ಳ ಅಂದ್ರೆ ಕೆಲವರು ಏಕೆ ಹೆಗಲು ಮುಟ್ಕೋತಾರೆ?
-ಕೆಲವರು ಹೊಟ್ಟೆ ಹಿಡ್ಕೊಂಡು ಟಾಯ್ಲೆಟ್ಗೂ ಹೋಗ್ತಾರೆ!
ವಿ. ಹೇಮಂತ್ಕುಮಾರ್, ಬೆಂಗಳೂರು.
ಗೆಳೆಯನೊಬ್ಬ ರಮ್ ಕುಡಿದಾಗ ರಮ್ಯಳನ್ನು ಪ್ರೀತಿಸುವೆ ಅಂತಾನಲ್ಲ?
-ಮುಂದಿನ ಚುನಾವಣೇಲಿ 'ಡ್ರಮ್' ಸ್ಪರ್ಧೆ ಮಾಡ್ತಾಳೆ ಅಂತ ಹೇಳಿ!
ಚಿಕ್ಕೋಬಹಳ್ಳಿ ಚಾಂದ್ಪಾಷ, ತಳಕು.
ಪೊರಕೆ ಮತ್ತು ಕೈ ಮಧ್ಯೆ 'ಕಸ' ಹಾಗೇಒದ್ದಾಡ್ತಿದೆಯಲ್ಲ?
-ಕಸವನ್ನು ರಸ ಮಾಡೋದು ಹೇಗೆ ಅಂತ ಕಮಲದವರು ಯೋಚಿಸ್ತಿದ್ದಾರೆ!
-ಎಸ್.ವಿ. ಪದ್ಮನಾಭ