ವ್ಹಾಟ್ಸ್ ಆ್ಯಪ್ ಎಂದರೆ 'ನತ್ತಿಂಗ್' ಎನ್ನುವವರಿಲ್ಲ. ಎಲ್ಲರಿಗೂ ಅದೊಂದು ಅಪ್ಲಿಕೇಷನ್ ಎಂಬುದು ಗೊತ್ತು. ಎಲ್ಲ ಕೇಳುವ ಪ್ರಶ್ನೆ 'ನೀನು ವ್ಹಾಟ್ಸ್ ಆ್ಯಪ್ನಲ್ಲಿದ್ದೀಯಾ?' ವ್ಹಾಟ್ಸ್ ಆ್ಯಪ್ ಬಳಸುತ್ತಿರುವವರ ಸಂಖ್ಯೆ ಶೇ.70. ಮೊನ್ನೆ ತಾನೆ ಫೇಸ್ಬುಕ್ ಸಂಸ್ಥೆ ವ್ಹಾಟ್ಸ್ ಆ್ಯಪ್ ಅನ್ನು 19 ಶತಕೋಟಿ ಡಾಲರ್ ಕೊಟ್ಟು ಖರೀದಿಸಿದೆ.
ಹೀಗೆ ಎಲ್ಲರ ಬಾಯಲ್ಲೂ ವ್ಹಾಟ್ಸ್ ಆ್ಯಪ್ ಗುನುಗುನಿಸುತ್ತಿರುವಾಗ ಸದ್ದಿಲ್ಲದೆ ಸುದ್ದಿ ಮಾಡುತ್ತಿರುವುದು ಮಾತ್ರ ವ್ಹಾಟ್ಸ್ ಆ್ಯಪ್ ಪ್ಲಸ್. ಅದೆಷ್ಟೋ ಮಂದಿ ವ್ಹಾಟ್ಸ್ಆ್ಯಪ್ ಪ್ಲಸ್ ಬಗ್ಗೆ ಕಂಡೂ ಕೇಳರಿಯದವರಿದ್ದಾರೆ. ಅವರಲ್ಲಿ ನೀವೂ ಒಬ್ಬರಿರಬಹುದು. ಹಾಗಾದರೆ ನೀವು ಕೇಳಬಹುದು 'ಏನಿದು ವ್ಹಾಟ್ಸ್ ಆ್ಯಪ್ ಪ್ಲಸ್? ವ್ಹಾಟ್ಸ್ ಆ್ಯಪ್ಗೂ ವ್ಹಾಟ್ಸ್ ಆ್ಯಪ್ ಪ್ಲಸ್ಗೂ ಏನು ವ್ಯತ್ಯಾಸ? ವ್ಹಾಟ್ಸ್ ಆ್ಯಪ್ನಂತೆ ವ್ಹಾಟ್ಸ್ ಆ್ಯಪ್ ಪ್ಲಸ್ ಏಕೆ ಜನಪ್ರಿಯಗೊಂಡಿಲ್ಲ?'
ವ್ಹಾಟ್ಸ್ ಆ್ಯಪ್ ಪ್ಲಸ್, ವ್ಹಾಟ್ಸ್ ಆ್ಯಪ್ನಂತೆಯೇ ಕಾರ್ಯನಿರ್ವಹಿಸುತ್ತದೆ. ವ್ಹಾಟ್ಸ್ ಆ್ಯಪ್ಅನ್ನು ಈ ರೀತಿ ಬಣ್ಣಿಸಬಹುದು. "customizable whatsapp is called whatsapp plus' ವ್ಹಾಟ್ಸ್ ಆ್ಯಪ್ನಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಕಸ್ಟಮೈಸ್ ಮಾಡುವುದಕ್ಕೆ ಸಾಧ್ಯವಿಲ್ಲ. ಆದರೆ, ವ್ಹಾಟ್ಸ್ ಆ್ಯಪ್ ಪ್ಲಸ್ನಲ್ಲಿ ಪ್ರತಿಯೊಂದನ್ನೂ ನಿಮ್ಮ ಇಷ್ಟಕ್ಕೆ ತಕ್ಕಂತೆ ನೀವು ಕಸ್ಟಮೈಸ್ ಮಾಡಿಕೊಳ್ಳಬಹುದು. ವ್ಹಾಟ್ಸ್ ಆ್ಯಪ್ ಬಣ್ಣವು ಯಾವಾಗಲೂ ಹಚ್ಚ ಹಸಿರಾಗಿಯೇ ಇರುತ್ತದೆ. ಇದನ್ನೇ ನೀವು ನೋಡಿ ನೋಡಿ ಬಹುಶಃ ಬೇಜಾರಾಗಿರಬಹುದು. ಆದರೆ, ವ್ಹಾಟ್ಸ್ ಆ್ಯಪ್ ಪ್ಲಸ್ನಲ್ಲಿ ಹಂಗಲ್ಲ, ನೀವು ಊಸರವಳ್ಳಿಯ ಹಾಗೆ ಇಷ್ಟ ಬಂದಂತೆ ಬಣ್ಣ ಬದಲಿಸಬಹುದು. ನಿಮ್ಮ ವ್ಹಾಟ್ಸ್ ಆ್ಯಪ್ಗೆ ಹೊಸ ಲುಕ್ ಕೊಡಬಹುದು. ನಿಮ್ಮ ಮನಕ್ಕೆ ಮುದ ನೀಡುವಂಥ, ಕಣ್ಣು ತಂಪಾಗಿಸುವಂಥ ಬಣ್ಣ ಕೊಡಬಹುದು. ಬರೀ ಬಣ್ಣವಷ್ಟೇ ಬದಲಿಸುವುದಾಗಿದ್ದರೆ ನಾನು ಈ ಪರಿ ಹೇಳುತ್ತಿರಲಿಲ್ಲ ಬಿಡಿ. ಅದೆಷ್ಟೋ ನಿಮಗೆ ತಿಳಿಯದ ವಿಷಯಗಳನ್ನು ನೀವು ವ್ಹಾಟ್ಸ್ ಆ್ಯಪ್ ಪ್ಲಸ್ನಲ್ಲಿ ಕಸ್ಟಮೈಸ್ ಮಾಡಿಕೊಳ್ಳಬಹುದು. ಚಾಟ್ ಹೆಡ್ಡರ್, ಚಾಟ್ಸ್ ರೊ, ಫೋಟೋ ಸೈಜರ್, ಹೆಡ್ಡರ್ ಬ್ಯಾಕ್ಗ್ರೌಂಡ್, ಹೆಡ್ಡರ್ ಟೈಟಲ್ ಹೀಗೆ ಸರಿ ಸುಮಾರು 108 ರೀತಿ ನಿಮ್ಮ ಸೆಟ್ಟಿಂಗ್ಸ್ ಅನ್ನು ಬದಲಿಸಬಹುದು. ವ್ಹಾಟ್ಸ್ ಆ್ಯಪ್ ಪ್ಲಸ್, ವ್ಹಾಟ್ಸ್ ಆ್ಯಪ್ ಅನ್ನು ಅದೆಷ್ಟೋ ಥರದಲ್ಲಿ ಮೀರಿಸುತ್ತದೆ. ಹೀಗೆ ಹೇಳುತ್ತ ಹೋದರೆ ಇದಕ್ಕೆ ಪಾರವೇ ಇಲ್ಲವೆಂದೆನಿಸುತ್ತದೆ. ಅಂದಹಾಗೆ, ವ್ಹಾಟ್ಸ್ ಆ್ಯಪ್ ಪ್ಲಸ್ನ ಜನಕ ರಾಫೆಲೆನ್ಸ್. ಈತ ತನಗೆ ಬಿಡುವಾಗಿದ್ದಾಗ ವ್ಹಾಟ್ಸ್ ಆ್ಯಪ್ ಪ್ಲಸ್ ಅನ್ನು ಅಪ್ಡೇಟ್ ಮಾಡುತ್ತಿರುತ್ತಾನೆ. ನಿಮಗೆ ಇಷ್ಟವಾದರೆ ನೀವು ರಾಫೆಲೆನ್ಸ್ಗೆ ದಾನ ಮಾಡಬಹುದು. ಪ್ರಪಂಚದಾದ್ಯಂತ ಇದುವರೆಗೆ ಸುಮಾರು 52,000 ಜನರು ವ್ಹಾಟ್ಸ್ ಆ್ಯಪ್ ಪ್ಲಸ್ ಬದಲಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ.
ಯಾರು ಬಳಸಬಹುದು?
ಈಗಾಗಲೇ ವ್ಹಾಟ್ಸ್ ಆ್ಯಪ್ ಅಕೌಂಟ್ ಹೊಂದಿರುವವರು ಇದನ್ನು ಬಳಸಬಹುದು. ಮೊದಲು ನಿಮ್ಮ ವ್ಹಾಟ್ಸ್ ಆ್ಯಪ್ನ ಎಲ್ಲ ಸಂದೇಶಗಳನ್ನು ಬ್ಯಾಕಪ್ ಮಾಡಿಕೊಳ್ಳಬೇಕು. ಇದಕ್ಕೆ ನೀವು "settings > chat settings > backup conversations ಮಾಡಬೇಕು. ಇದರಿಂದ ನಿಮ್ಮ ಎಲ್ಲ ಸಂದೇಶಗಳು ನಿಮ್ಮ ಫೋನ್ ಮೆಮೊರಿಯಲ್ಲಿ ಉಳಿದಿರುತ್ತದೆ. ನಂತರ ನಿಮ್ಮ ವ್ಹಾಟ್ಸ್ ಆ್ಯಪ್ ಅಪ್ಲಿಕೇಶನ್ ಅನ್ನು ಅನ್ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ ನೀವು ನಿಮ್ಮ ಮೊಬೈಲ್ ಬ್ರೌಸರ್ನಲ್ಲಿ ವ್ಹಾಟ್ಸ್ ಆ್ಯಪ್ ಪ್ಲಸ್ ಡೌನ್ಲೋಡ್ ಮಾಡಿಕೊಳ್ಳಿ. ಇದಕ್ಕೆ ನೀವು "www.whatsapp-plus.net'ಗೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬೇಕು. ಇದು ಸುಮಾರು 10 ಟಛಿ ಇರುತ್ತದೆ .
ಈ ವ್ಹಾಟ್ಸ್ ಆ್ಯಪ್ ಪ್ಲಸ್ ಡೌನ್ಲೋಡ್ ಆಗುತ್ತಿರುವಾಗ/ ಆಗುವ ಮುನ್ನ ನೀವು ಈ ಕೆಲಸ ಮಾಡಿ- "goto settings> security >device administration >unknown sources'ಗೆ ಹೋಗಿ ಆ ಅಪ್ಷನ್ ಅನ್ನು ಟಿಕ್ ಮಾಡಿ ok ಅಂತ ಕ್ಲಿಕ್ ಮಾಡಿ. ನಂತರ ನಿಮ್ಮ ವ್ಹಾಟ್ಸಾಪ್ ಪ್ಲಸ್ ಡೌನ್ಲೋಡ್ ಆದಮೇಲೆ ಆ ಫೈಲ್ ಒಪನ್ ಮಾಡಿ ಇನ್ಸ್ಟಾಲ್ ಮಾಡಿಕೊಳ್ಳಿ. ವ್ಹಾಟ್ಸ್ ಆ್ಯಪ್ ಪ್ಲಸ್ ಇನ್ಸ್ಟಾಲ್ ಮಾಡುವಾಗ ಅದು ನಿಮಗೆ ಒಂದು ಪ್ರಶ್ನೆ ಕೇಳುತ್ತದೆ. "backup found, do u want to restore it?'. ಇದಕ್ಕೆ ನೀವು 'ಯೆಸ್' ಎಂದು ಒತ್ತಬೇಕು. ಈಗ ನಿಮ್ಮ ವ್ಹಾಟ್ಸ್ ಆ್ಯಪ್ ಪ್ಲಸ್ ಬಳಕೆಗೆ ರೆಡಿಯಾಗಿದೆ.
'ಪ್ಲಸ್' ಮೈನಸ್ಗಳು
* ಆಂ್ಯಡ್ರಾಯ್ಡ್ನಲ್ಲಿ ಮಾತ್ರ ಲಭ್ಯ.
* ಗೂಗಲ್ ಸ್ಟೋರ್ನಲ್ಲಿ ಅಲಭ್ಯ.
"www.whatsapp-plus.net' ನಿಂದ ಮಾತ್ರ ಡೌನ್ಲೋಡ್ ಸಾಧ್ಯ.
* ಒಮ್ಮೆ ನೀವೂ ಇದನ್ನು ಡೌನ್ಲೋಡ್ ಮಾಡಿಕೊಂಡು, ಮಜಾ ಅನುಭವಿಸಿ... www.whatsapp-plus.net/faqs.phpಗೂ ಭೇಟಿ ನೀಡಬಹುದು.
- ಕೆ.ಆರ್. ಸಂದೀಪ್
sksandeepini@gmail.com