ಖುಲ್ಲಂ ಖುಲ್ಲಾ -ಬೇವು ಬೆಲ್ಲ
ರಾಖಿ ಕಟ್ಟತಾಳೋ... ಕಟ್ಟಿಸಿಗೋತಾಳೋ...!
ತಮ್ಮಾ: ಕಲೆಕ್ಷನ್ನ ಬಂತಪ್ಪೋ ಕಲೆಕ್ಷನ್ನು...
ತಿಮ್ಮಾ: ಕಲೆಕ್ಷನ್ನ ಅಲ್ಲಲೇ ಇಲೆಕ್ಷನ್ನ ಇರಬೇಕು...
ತಮ್ಮಾ: ಹಾಂ... ಹೌದು ಇಲೆಕ್ಷನ್ನ್ಖ... ಬಂದದ! ಅಂದ್ರ, ಕಲೆಕ್ಷನ್ ಸುರು ಆಗೇದ.
ತಿಮ್ಮಾ: ಕಲೆಕ್ಷನ್ನ ಯಾರ ಮಾಡಾಕತ್ತಾರಪಾ?
ತಮ್ಮಾ: ಪಾರ್ಟಿದವರು ಫಂಡ್ ಕಲೆಕ್ಷನ್ ನಡಸ್ಯಾರ. ಮಿಡಿಯಾದವರು ಅಭಿಪ್ರಾಯ ಕಲೆಕ್ಷನ್ನ ನಡಸ್ಯಾರು...
ತಿಮ್ಮಾ: ಹಂಗಖ ನೋಡಿದರ ಅಭ್ಯರ್ಥಿಗಳು ವೋಟ್ಬ್ಯಾಂಕ್ ಕಲೆಕ್ಷನ್ ನಡೆಸ್ಯಾರ... ಮತದಾರ ನೋಡಪಾಖ ಎನ್ ಕೊಟ್ಟರೂ ಕಲೆಕ್ಟ ಮಾಡಾಕತ್ತಾನ...
ತಮ್ಮಾ: ಹೌದು, ಸೀರಿ, ಅಕ್ಕಿ, ರೊಕ್ಕ, ಟಿವಿ ಎನ್ ಕೊಟ್ಟರೂ ಬ್ಯಾಡ ಅನ್ನುದಿಲ್ಲ ಮತದಾರ!!
ತಿಮ್ಮಾ: ಈ ಕಲೆಕ್ಷನ್ ಗದ್ದಲದಾಗ ಬ್ರೇಕಿಂಗ್ ನ್ಯೂಸ್ ಯಾವುದು ಗೊತ್ತೇನು?
ತಮ್ಮಾ: ಯಾವುದು?
ತಿಮ್ಮಾ: ರಾಖಿ ಅಕ್ಕೋರು ರಾಹುಲ್ ಬಾಬಾನ್ನ ಮದುವಿ ಆಗ್ತೇನಿ ಅಂದದ್ದು...
ತಮ್ಮಾ: ಹೌದು... ಭಾರಿ ರಾ.ರಾ... ಆತಲಾ... ಇದು.!! ರಾ... ರಾ... ಸರಸಕ್ಕೂ ರಾ.ರಾ
ತಿಮ್ಮಾ: ಆದರ 'ರಾ'ಬಾಬಾ ರಡಿ ಇದ್ದಾರೋ ಇಲ್ಲೋ ಅಂತ ಗೊತ್ತಿಲ್ಲ...
ತಮ್ಮಾ: ಹಿಂದ 'ರಾ'ಅಕ್ಕೋರದು ಟಿವ್ಯಾಗ ಸ್ವಯಂವರ ನಡದಿತ್ತು...
ತಿಮ್ಮಾ: ಆ ಸ್ವಯಂವರದಾಗ ಬಂದಿದ್ದ ಎಲ್ಲಾ 'ವರಾ'ನ ಈಗ ವರಾವರಾ ಅಂತ ಒದ್ದ್ಯಾಡಾಕತ್ತಾರಂತ.
ತಮ್ಮಾ: ಆಮ್ಯಾಲ 'ರಾ'ಅಕ್ಕೋರು ರಾಮದೇವರಿಗೆ ಮೊರೆ ಹೊಕ್ಕಿದ್ದರಂತ...
ತಿಮ್ಮಾ: ಮುಂದಖಖ...
ತಮ್ಮಾ: ಮುಂದೇನು? 'ರಾ'ಬಾಬಾ ಕೃಪಾ ಮಾಡಬೇಕಷ್ಟಖಖ...
ತಿಮ್ಮಾ: ಹಂಗ 'ರಾ'ಬಾಬಾರ ಮನಿ ಮುಂದಖ ಕನ್ಯಾಗಳದು ದೊಡ್ಡ ಕ್ಯೂ ಐತಂತ... ಕನ್ಯಾಗಳೆಲ್ಲ 'ರಾ'ಕೃಪಾಕ್ಕ ಒಂದಖ ಕಾಲ ಮ್ಯಾಲ ನಿಂತಾರಂತ!
ತಮ್ಮಾ: ಹೌದ ತಿಮ್ಮಾ, ಆ ದೃಶ್ಯ ಅತ್ಯಂತ 'ರಮ್ಯ'ವಾಗ್ಯದ.
ತಿಮ್ಮಾ: 'ರಮ್ಯ' ಅದ ಅಂದರ ನಂಬೋದು ಕಷ್ಟಪಾ...
ತಮ್ಮಾ: ಅದಕ್ಯಾಕ ಕಷ್ಟ ಅಂತಿಯಪಾ ಭಾರತದಾಗ ಏನ್ ಬೇಕಾದರೂ ಆಗಬಹುದು ಮತ್ತ ಎಲ್ಲಾ ಈಗ 'ರ'ದ ಸುತ್ತ ಸುತ್ತಾಡಾಕತ್ತಾವ.
ತಿಮ್ಮಾ: ಹೌದು ರಾ- ರಾಹುಲ್, ರಾ- ರಾಖಿ, ರಾ- ರಾಮದೇವ, ರ- ರಮ್ಯ, ಆ್ಯಂಡ್ ಫೈನಲಿ ರಾ- ರಾಜಕಿಯ!!
ತಮ್ಮಾ: ರಾ ರಾ ರಾಜಕಿಯ ಬೋರದ ಬಿಡು.
ತಿಮ್ಮಾ: ಇಷ್ಟೆಲ್ಲದರ ನಡುವ 'ರಾ'ಅಕ್ಕೋರು ಬಿಜೆಪಿ ಸೇರತಾರಂತ...
ತಮ್ಮಾ: ಹೌದು ಅದು ಅವರ ತವರಮನಿ ಇದ್ದಹಂಗ ಅಂತ...
ತಿಮ್ಮಾ: ಅಂದ್ರ ಅತ್ತಿಮನಿ ಕೈ ಛಾಪು!!
ತಮ್ಮಾ: ಇರಬೇಕು... ಅದು ಒಂಥರಾ ರಾ-ಡೀಲ್!!
ತಿಮ್ಮಾ: ಒಟ್ಟಿನ್ಯಾಗ ಈ ರಾಖಿಬಾಯಿ, ರಾಖಿ ಕಟ್ಟಬೇಕು, ಇಲ್ಲ ಮಾಂಗಲ್ಯ ಕಟ್ಟಿಸಿಗೋಬೇಕು ಇಲ್ಲಂದರ ಟಿವ್ಯಾಗ ನಾವು ಇನ್ನೋಂದು ಸ್ವಯಂವರ ನೋಡಬೇಕಾಗಬಹುದು!ಟಿ
- ಯಶವಂತ ಸರದೇಶಪಾಂಡೆ
ækhullamkhullabevubella@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.