ಯಡ್ಡಿ ಸಿದ್ದು ಜಗಳದಿಂದ ದೇವೇಗೌಡರಿಗೆ ಲಾಭ ಆಗುತ್ತಾ?
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ.
ಗೊತ್ತಿಲ್ಲದೆ ಮಾಡಿದ ತಪ್ಪಿಗೆ ಕ್ಷಮೆ ಉಂಟಂತೆ, ಗೊತ್ತಿದ್ದೂ ಮಾಡಿದ ತಪ್ಪಿಗೆ?
- ಕೆಲವರು ಅದಕ್ಕೂ ಕ್ಷಮೆ ಕೇಳಿ ಕ್ಷೇಮವಾಗಿರ್ತಾರೆ!
ಬರ್ಕ್‌ಲಿ ರಾಮ್ ಕಿರಗಂದೂರು, ಮಂಡ್ಯ
ಪೂಜಾರಿ ಯಾಕೆ ಗಂಟೆ ಅಲ್ಲಾಡಿಸಿಯೇ ಪೂಜೆ ಮಾಡೋದು?
- ಇಲ್ಲದಿದ್ರೆ ಭಕ್ತರು ಅವರನ್ನೇ ಅಲ್ಲಾಡಿಸ್ತಾರೆ!
ವಿ. ಹೇಮಂತಕುಮಾರ್, ಬೆಂಗಳೂರು.
ಇಷ್ಟಪಟ್ಟು ಖರೀದಿಸಿದ ಪೊರಕೆ ಬಾಳಿಕೆಯೇ ಬರಲಿಲ್ಲವಲ್ಲ?
- ಅದರಲ್ಲಿ ಗುಡಿಸಲಾರದು, ಕೈಯಲ್ಲಿ ಹಿಡಿದು ಪ್ರತಿಭಟಿಸಬೇಕು ಅಷ್ಟೆ!
ಮಹಾಲಿಂಗ ಎಂ. ಗೊರಬಾಳ, ಗೋಕಾಕ್ ಫಾಲ್ಸ್
ಕೆಲವರು ದೇವರಿಗ್ಯಾಕೆ ಹೆದರುತ್ತಾರೆ?
- ತಮ್ಮಲ್ಲಿರುವ ರಾಕ್ಷಸ ಗುಣದಿಂದ!
ಎಸ್. ರವಿ, ಮೈಸೂರು
ಕೇಜ್ರಿಗೆ ಅಧಿಕಾರ ಕುರ್ಚಿಗಿಂತ ರಸ್ತೆ ಮೇಲೆ ವ್ಯಾಮೋಹ ಏಕೆ?
- ಪೊರಕೆಗೆ ರಸ್ತೆಯಲ್ಲೇ ಹೆಚ್ಚು ಕೆಲಸ ತಾನೆ!
ಕೆ.ಎಂ. ಲಿಂಗರಾಜು, ನಂಜನಗೂಡು
ಭ್ರಷ್ಟರನ್ನು ಮುಗ್ಧಜೀವಿ ತಿಮಿಂಗಲಕ್ಕೆ ಏಕೆ ಹೋಲಿಸುತ್ತಾರೆ?
- ತಿಮಿಂಗಿಲ ಮುಗ್ಧಜೀವಿಯಾದ್ರೂ ಇಡೀ ಹಡಗನ್ನೇ 'ಮುಳುಗಿಸುವ' ಶಕ್ತಿ ಇರುತ್ತಲ್ಲ!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಜಗತ್ತನ್ನೇ ಸರಿಪಡಿಸಲು ಸಾಧ್ಯವೇ?
- ಮೊದಲು ನಮ್ಮ ನಮ್ಮ ಮನೆ ಸರಿಪಡಿಸಿಕೊಂಡರೆ ಸಾಕು!
ನೇರಲಗುಡ್ಡ ಶಿವಕುಮಾರ್, ಶಿರಾ.
ಪ್ರೇಮಪತ್ರಕ್ಕೂ ಲಗ್ನಪತ್ರಕ್ಕೂ ವ್ಯತ್ಯಾಸವೇನು?
ಪ್ರೇಮಪತ್ರ ನೀವೇ ಬರೆಯಬೇಕು. ಲಗ್ನಪತ್ರನ ಪುರೋಹಿತರು ಬರೆಯುತ್ತಾರೆ!
ಸ್ವಾಮಿ ನಿರ್ಮಲಾ, ಉಡಿಗಾಲ
ಯಡ್ಡಿ ಸಿದ್ದು ಜಗಳದಿಂದ ದೇವೇಗೌಡರಿಗೆ ಲಾಭ ಆಗುತ್ತಾ?
- ಅವರೀಗ ತಮ್ಮ ಕುಟುಂಬದ ಜಗಳದಿಂದ ನಷ್ಟವಾಗದಿದ್ರೆ ಸಾಕು ಅಂತಿದ್ದಾರೆ!
-ಎಸ್.ವಿ. ಪದ್ಮನಾಭ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.