ಖುಷಿ

ನಿಮಗೆ ಹಕ್ಕಿದ್ದರೆ ಮಾತ್ರ

ನಮ್ಮ ತಂದೆ ಹಾಗೂ ದೊಡ್ಡಪ್ಪನವರು ತಮ್ಮ ಪಿತ್ರಾರ್ಜಿತವಾದ ಸ್ವಲ್ಪ ಜಮೀನನ್ನು ಎರಡು ವರ್ಷಗಳ ಹಿಂದೆ ಮಾರಾಟ ಮಾಡಿದ್ದಾರೆ...

ಕವಿತಾ ವಿ. ಮಲಕಸಮುದ್ರ
ನಮ್ಮ ತಂದೆ ಹಾಗೂ ದೊಡ್ಡಪ್ಪನವರು ತಮ್ಮ ಪಿತ್ರಾರ್ಜಿತವಾದ ಸ್ವಲ್ಪ ಜಮೀನನ್ನು ಎರಡು ವರ್ಷಗಳ ಹಿಂದೆ ಮಾರಾಟ ಮಾಡಿದ್ದಾರೆ. ಕೆಲವು ಕಾರಣಗಳಿಂದ ಅದಿನ್ನೂ ಖಾತೆ ಬದಲಾವಣೆಯಾಗಿಲ್ಲ. ಈಗ ನಾನು ಮಾರಾಟ ರದ್ದುಪಡಿಸಲು ದಾವಾ ಹಾಕಬಹುದೇ?
- ಆ ಮಾರಾಟವಾದ ಜಮೀನಿನಲ್ಲಿ ನಿಮಗೆ ಹಕ್ಕಿದ್ದರೆ ಮಾತ್ರ ನೀವು ಆ ಮಾರಾಟ ರದ್ದುಮಾಡಲು ದಾವಾ ಹಾಕಬಹುದು. ಆದರೆ ಖಾತೆ ಬದಲಾವಣೆಯಾಗಿಲ್ಲ ಅನ್ನುವ ಕಾರಣದಿಂದಲ್ಲ. (ಆರ್ಟಿಕಲ್ 109 ಲಿಮಿಟೇಷನ್ ಕಾಯ್ದೆ)
ನಿಮಗ್ಯಾರಿಗೂ ಹಕ್ಕಿಲ್ಲ
ಜಯಶ್ರೀ ಬಿರಾದಾರ, ವಿಜಾಪುರ
ನಮ್ಮ ತಂದೆಯ ತಂದೆಯವರ ಸ್ವಯಾರ್ಜಿತ ಮನೆಯಲ್ಲಿ ಅವರ ಮಕ್ಕಳಿಗೆ ಮೊಮ್ಮಕ್ಕಳಿಗೆ ಹಕ್ಕಿದೆಯೇ?
- ಇಲ್ಲ. ಅವರು ಅದನ್ನು ಯಾರಿಗೆ ಬೇಕಾದರೂ ಕೊಡಬಹುದು. ನಿಮಗ್ಯಾರಿಗೂ ಅದರ ಮೇಲೆ ಹಕ್ಕಿಲ್ಲ. (ಕಲಂ 30 ಹಿಂದೂ ಉತ್ತರಾಧಿಕಾರ ಕಾಯ್ದೆ, 1956)

ಮಾರಾಟ ಮಾಡಲು ಅವರು ಸ್ವತಂತ್ರರು
ಅರ್ಜುನ್ ಅ. ಪಾಟೀಲ
ತಂದೆಯ ದೊಡ್ಡಮ್ಮನವರು ಮಕ್ಕಳಿಲ್ಲದ ಕಾರಣ ನಮ್ಮ ತಂದೆಯವರನ್ನು ಸಾಕಿಕೊಂಡಿದ್ದರು. ಆದರೆ ತಮ್ಮೆಲ್ಲ ಆಸ್ತಿಯನ್ನೂ ನನ್ನ ಹೆಸರಿಗೆ ವಿಲ್ ಮಾಡಿದ್ದು ನೋಂದಣಿಯಾಗಿದೆ (ಮೂರು ವರ್ಷದ ಹಿಂದೆ). ಹೀಗಿರುವಾಗ 2011ರಲ್ಲಿ ಆಕೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ನನ್ನ ತಂದೆ ಬಂದು ಮೋಸದಿಂದ ಫ್ಲಾಟನ್ನು ಮಾರಿಸಿರುತ್ತಾರೆ. ನಂತರ ಅವರು ನಾಲ್ಕು ದಿನಗಳಲ್ಲಿ ನಿಧನರಾದರು. ಅವರಿಗೆ ಮಾರಾಟದ ವಿಷಯವೇ ಗೊತ್ತಿಲ್ಲ. ಕಾರಣ ಅವರು ಪ್ರಜ್ಞಾವಸ್ಥೆಯಲ್ಲಿ ಇರಲಿಲ್ಲ. ಈಗ ಅದನ್ನು ನಾನು ಮರಳಿ ಪಡೆಯಬಹುದೇ?
- ತಂದೆಯ ದೊಡ್ಡಮ್ಮ ತಮ್ಮ ಎಲ್ಲ ಆಸ್ತಿಗೆ ಸಂಪೂರ್ಣ ಹಕ್ಕುದಾರಳಾಗಿದ್ದು, ಅದರ ಮೇಲೆ ಬೇರೆ ಯಾರಿಗೂ ಹಕ್ಕಿಲ್ಲ (ಕಲಂ 14 ಹಿಂದೂ ಉತ್ತರಾಧಿಕಾರ ಕಾಯ್ದೆ, 1958). ಆದ್ದರಿಂದ ಅವರು ಮಾಡಿದ ವಿಲ್ ಊರ್ಜಿತವಾಗುತ್ತದೆ. ಆದರೆ ಆಕೆ ಜಮೀನು ಮಾರಾಟ ಮಾಡಲು ಸ್ವತಂತ್ರಳು(ವಿಲ್ ಮಾಡಿದರೂ ಸಹ). ಆದ್ದರಿಂದ ಮಾರಾಟ ಮಾಡುವ ಕಾಲದಲ್ಲಿ ಪ್ರಜ್ಞಾವಸ್ಥೆಯಲ್ಲಿರಲಿಲ್ಲ ಎಂದು ನೀವು ಕೋರ್ಟಿನಲ್ಲಿ ಸಾಬೀತು ಮಾಡಿದರೆ ಆ ಮಾರಾಟ ರದ್ದು ಮಾಡಬಹುದು.

ಟ್ರಸ್ಟ್‌ನಲ್ಲಿ ಸೇರಿಸಲು ಅವರಿಗೆ ಅಧಿಕಾರವಿಲ್ಲ
ರಾಘವೇಂದ್ರ, ಮೈಸೂರು
ನಮ್ಮ ತಾತ ಹಾಗೂ ಅವರ ತಮ್ಮ ಒಟ್ಟು ಕುಟುಂಬದಲ್ಲಿದ್ದು, ಈಗ ಅವರ ಮಕ್ಕಳೂ ನಿಧನರಾಗಿರುತ್ತಾರೆ. ಈಗ ನಮ್ಮ ತಾತನಿಗೆ ನಾನೊಬ್ಬನೇ ಮೊಮ್ಮಗ. ಅವರ ತಮ್ಮ(ನಮ್ಮ ಚಿಕ್ಕ ತಾತ)ನಿಗೆ 14 ಜನ ಮೊಮ್ಮಕ್ಕಳು. ನಮ್ಮ ಪಾಲಿನ ಆಸ್ತಿ ಕೇಳಿದರೆ ಅವರು ಅದನ್ನು ಟ್ರಸ್ಟ್ ಮಾಡಿದ್ದೇವೆ, ನಿಮಗೆ ಕೊಡಲು ಬರುವುದಿಲ್ಲ ಎನ್ನುತ್ತಿದ್ದಾರೆ. ಪರಿಹಾರವೇನು?
- ನಿಮಗೆ ಸೇರಿದ ಆಸ್ತಿಯನ್ನು ಟ್ರಸ್ಟ್‌ನಲ್ಲಿ ಸೇರಿಸಲು ಅವರಿಗೆ ಯಾವ ಅಧಿಕಾರವೂ ಇಲ್ಲ. ನಿಮಗೆ ನಿಮ್ಮ ತಾತನ ಆಸ್ತಿ ಅಂದರೆ ಅವರ ಪಾಲಿನ ಆಸ್ತಿ ಬಂದೇಬರಬೇಕು. ನ್ಯಾಯಾಲಯದಲ್ಲಿ ದಾವಾ ಹಾಕಿ ನಿಮ್ಮ ಪಾಲನ್ನು ಪಡೆಯಬಹುದು.


-  ಎಚ್.ಆರ್. ಕಸ್ತೂರಿರಂಗನ್


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸ್ಟಿಂಗ್‌ ಆಪರೇಷನ್‌ ಪ್ರಕರಣ: ಮುಂದಿನ ನಿರ್ಧಾರ ಸಿಎಂ ಡಿ.ಕೆ ಶಿವಕುಮಾರ್`ಗೆ ಬಿಟ್ಟ ಸಂಪುಟ; ಸಾಕ್ಷ್ಯಾಧಾರ ಮೇಲೆ ಮುಂದಿನ ಕ್ರಮ!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

15 ವರ್ಷದ ಹಳೆ ವಿಡಿಯೋ ಅದಂತೆ.., ರಾಜಕೀಯ ತೆವಲಿಗೆ ಮಾಡುತ್ತಿದ್ದಾರೆ: ಬಿ.ಕೆ ಹರಿಪ್ರಸಾದ್ ಗರಂ

'ಕುಟುಂಬದ ಕನಸು ನನಸು': 'ಜೈಲರ್ 2' ಬಿಡುಗಡೆ ಬೆನ್ನಲ್ಲೇ ನಟಿ ಮೇಘನಾ ರಾಜ್ ಮಾತು!