ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಓದೂರು POST

Mainashree
Updated On : 29 Mar 2014, 12:59 pm

ನಕ್ಕು ನಕ್ಕು ಲಿಮೆರಿಕ್ಕು
ಲಿಮೆರಿಕ್ಕು ಎಂಬುದೊಂದು ಕಾವ್ಯ ಪ್ರಕಾರ. ಇದನ್ನು ಅರ್ಥಹೀನ ಪದ್ಯಗಳೆಂದೂ ಕರೆಯಬಹುದು. ಅರ್ಥವಿಲ್ಲದಿರುವುದೇ ಇದರ ಪ್ರಧಾನ ಗುಣ. ತಮಾಷೆಯಾಗಿರಬೇಕಾದ್ದು ಇನ್ನೊಂದು ಪ್ರಮುಖ ಗುಣ. ಇಂಗ್ಲಿಷ್‌ನಲ್ಲಿ ಎಡ್ವರ್ಡ್ ಲಿಯರ್, ಆಗ್ಡೆನ್ ನ್ಯಾಶ್ ಇದನ್ನು ಜನಪ್ರಿಯಗೊಳಿಸಿದವರು. ಸಾಮಾನ್ಯವಾಗಿ ಇವುಗಳಿಗೆ ಐದು ಸಾಲು. ಪಾರಂಪರಿಕ ಲಿಮೆರಿಕ್ಕುಗಳ ಮೊದಲ, ಎರಡನೆ ಹಾಗೂ ಐದನೇ ಸಾಲಿನಲ್ಲಿ ಒಂದು ಅಂತ್ಯಪ್ರಾಸ, ಮೂರು ಮತ್ತು ನಾಲ್ಕನೇ ಸಾಲುಗಳಿಗೊಂದು ಅಂತ್ಯಪ್ರಾಸವಿರುತ್ತದೆ.
ನಮ್ಮಲ್ಲಿರುವ ಕೆಲ ಶಿಶುಪ್ರಾಸಗಳನ್ನು ಲಿಮೆರಿಕ್ ಎನ್ನಬಹುದು. ಅರ್ಥವಿಲ್ಲದ ಪದ್ಯಗಳು ನಗೆ ಹೇಗೆ ಉಕ್ಕಿಸುತ್ತವೆ? ಇವುಗಳ ಅರ್ಥಹೀನತೆಯಲ್ಲಿಯೇ ಏನಾದರೊಂದು ಅರ್ಥವಿರುತ್ತದೆಯೇ ಎಂಬಿತ್ಯಾದಿ ಜಿಜ್ಞಾಸೆಗಳೂ ಸಾಕಷ್ಟು ನಡೆದಿವೆ. ಅದನ್ನೀಗ ಪಕ್ಕಕ್ಕಿಟ್ಟು, ಕೆಲ ಲಿಮೆರಿಕ್‌ಗಳನ್ನು ಎಂಜಾಯಿಸೋಣ. ಮೊದಲಿಗೆ ಇರುವುದು ವೈಎನ್ಕೆಯವರ ಜನಪ್ರಿಯ ಪದ್ಯ.

ವಿಶ್ವಾಮಿತ್ರ ಮೇನಕೆ
ಕುಣೀತಿರೋದು ಏನಕೆ?
ಏನಕೆ?
ಏನಕೆ?
ಆಸ್ಕ್ ಮಿ.ವೈಎನ್ಕೆ
-
ಕಿರಣ ಎಂಬ ಹೆಸರಿನವಳು ಒಮ್ಮೆ ಇದ್ದಳು
ಬೆಳಕಿಗಿಂತ ವೇಗವಾಗಿ ಚಲಿಸುತಿದ್ದಳು
ಒಮ್ಮೆ ಆಕೆ ನಾಳೆ ಹೊರಟು
ನಿನ್ನೆ ಬಂದುಬಿಟ್ಟಳು
-
ಉದ್ದ ಗಡ್ಡ ಬಿಟ್ಟ ಮುದುಕನೊಬ್ಬನಿದ್ದ
ಬಾಚಿಕೊಂಡ ಒಮ್ಮೆ ಉದ್ದ ಗಡ್ಡ
ಕಂಡ ಅಲ್ಲಿ ಎರಡು ಗೂಬೆ
ನಾಕು ಗುಬ್ಬಿ ಒಂದು ಕೋಳಿ
ಗೂಡು ಕಟ್ಟಿಕೊಂಡು ಹೆಂಟೆಗೊದ್ದ!
-
ವಿಜಯ್ ಮಲ್ಯ
ಧರಿಸಿಕೊಂಡು ಶಲ್ಯ
ತಿನ್ನುತ್ತಾರೆ ನೋಡಿ ಅಲ್ಲಿ
ಪಲ್ಯ, ಕೋಳಿ ಪಲ್ಯ!
-
ಮನಮೋಹನ ಸಿಂಗರು
ಅತ್ಯುತ್ತಮ ಸಿಂಗರು
ಕೇಳದಂತೆ ಹಾಡುತ್ತಾರೆ
ಹೇಳಿದರೆ ಯಾರೂ ನಂಬರು

ಹರೀಶ್ ಕೇರ
harishkera@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments