ಖುಲ್ಲಂ ಖುಲ್ಲಾ- ಬೇವು ಬೆಲ್ಲ
ಬೇಕಾಗಿದ್ದು ಸಿಗಂಗಿಲ್ಲ, ಬ್ಯಾಡಾಗಿದ್ದು ಕಳೆಯಂಗಿಲ್ಲ...
ತಮ್ಮಾ: ಇದೇನೋ ತಿಮ್ಮಾ? ಸಣ್ಣ ಹುಡುಗರು ಆಟಕಿ ಹರವಿಕೊಂಡ ಹಂಗಡಡ ಎನೇನೋ ಹರವಿಕೊಂಡಿಯಲಾಡಡ...
ತಿಮ್ಮಾ: ಇದು ಫೋನು... ಇದು ಐಪ್ಯಾಡ್... ಇದು ಲ್ಯಾಪಟಾಪ್... ಮತ್ತಿದು ಡೆಸ್ಕಟಾಪ್... ಇವು ಒಂದ ನಮೂನಿ ಆಟಕೀನ ಅನ್ನು... ಆದರ ಇವು ಮಕ್ಕಳ ಆಟಕಿ ಅಲ್ಲ... ಮಾಜಿ ಮಕ್ಕಳವು.
ತಮ್ಮಾ: ಅಂದರ ದೊಡ್ಡವರ ಆಟಕಿ ಇವು... ಮಕ್ಕಳ ಆಡಂಗಿಲ್ಲ ಇವಗಳಿಂದ..?
ತಿಮ್ಮಾ: ಮಕ್ಕಳ ಯಾಕ ಆಡಂಗಿಲ್ಲೋ... ದೊಡ್ಡವರಿಗಿಂತ ಮಕ್ಕಳ ಇದರಾಗ ಎಕ್ಸಪರ್ಟ...
ತಮ್ಮಾ: ಹೌದ ಬಿಡು, ಮೊನ್ನೆ ಟಿವಿಯೊಳಗ ಬಂದ ಅಡ್ವರ್ಟೈಸ್ಮೆಂಟ್ ನೋಡಿದೆ, ಅದರಾಗ ಹುಟ್ಟಿದ ಕೂಸೊಂದು ತಾಯಿಯ ಗರ್ಭದಿಂದ ಹೊರಬಂದದ್ದಡಡ, ಡಾಕ್ಟರನ್ನ ಒದ್ದು, ನರ್ಸಮ್ಮನ ಮೊಬೈಲ್ ಫೋನ್ನ್ಯಾಗ ಫೇಸ್ಬುಕ್ ಓಪನ್ ಮಾಡಿ ಸ್ಟೇಟಸ್ ಅಪ್ಡೇಟ್ ಮಾಡತದಪಾಡಡ...
ತಿಮ್ಮಾ: ಹೌದು ಹೌದು ನಾನು ನೋಡಿದೆ ಆ ಎಡ್ವರ್ಟೈಸ್ಮೆಂಟ್... ಮತ್ತ ಈಗಿನ ಹುಡುಗರು ಖರೇನ ಚಾಲು ಅವ ಬಿಡು, ಮೊನ್ನೆ ಯಾವುದೋ ಒಬ್ಬ ಎರಡೂವರಿ ವರ್ಷದ ಹುಡುಗಗ ಕ್ಯಾಲ್ಕ್ಯೂಲೆಟರ್ ಕೊಟ್ಟರ, ಹ್ಯಾಂಗೋ ಮಾಡಿ ಅವರಪ್ಪನ ಮೊಬೈಲ್ಗೆ ಫೋನ್ ಹಚ್ಚಿದನಂತ...
ತಮ್ಮಾ: ಯಾಕೋ ಅತಿ ಆತು ಬಿಡಪಾ ಇದು.
ತಿಮ್ಮಾ: ಅದಕ್ಕ ನಾನು ಈ ಫೋನು ವಾಟ್ಸಪ್ಗೆ, ಪ್ಯಾಡು ಫೇಸ್ಬುಕ್ಗೆ, ಲ್ಯಾಪಟಾಪ್ ನೆಟ್ಗೆ, ಡೆಸ್ಕ್ಟಾಪ್ ಡೌನ್ಲೋಡ್ಗೆ ಅಂತ ಇಟಗೊಂಡೇನಿ.
ತಮ್ಮಾ: ಮತ್ತ ಆಗಾಗ ಸೈಬರ್ ಕೆಫೆಕ್ಕ ಎಡತಾಕತಿರತೀಯಲಾ ಯಾಕ್?
ತಿಮ್ಮಾ: ಅದು ಕೆಲವೊಂದು ತಿಳಿಯುವುದೇ ಇಲ್ಲಪಾ, ಅದಕ್ಕ ಸೈಬರ್ ಕೆಫೆ ಮೆಂಟೇನ್ ಮಾಡವ್ನ ಗುರು ಅಂತ ಒಪಿಗೊಂಡು, ಪ್ರಾಬ್ಲಮ್ ಸಾಲ್ವ ಮಾಡಕೊಳ್ಳಾಕ ಹೋಗ್ತೇನಿ.
ತಮ್ಮಾ: ಆತು ಬಿಡು, ಅಂತೂ ಬಿಸಿ ಅದಿ ಅಂತ ಆತು... ನನಗಂತೂ ಎನೂ ತಿಳಿಯುವುದಿಲ್ಲ ಬಿಡ ಇವು... ಒಂದ ಹಳೇ ಮೊಡಕ ಫೋನ್ ಇಟಗೊಂಡೇನಿ, ರಿಂಗ್ ಆದರ ಎತ್ತಿ ಹಲೋ ಅಂತೇನಿ ಇಲ್ಲಂದ್ರ ಶಿವಾಯ ನಮಃ.
ತಿಮ್ಮಾ: ಕಾಲ ಮಾನ ಬದಲಾದಹಂಗ ನಾವು ಬದಲಾಗಬೇಕಲೇ ತಮ್ಮಾ! ನೋಡ ವಾಟ್ಸಪನ್ಯಾಗ ಎಷ್ಟ ಫಾಸ್ಟಾಗಿ ಸುದ್ದಿ ತಿಳಿತಾವು... ಹಂಗ.... ಸಾವಿರಾರು ಮಂದಿಗೆ ನಮ್ಮ ಮನಸ್ಸಿನ ವಿಚಾರಾನ ಒಂದ ಸೆಕೆಂಡ್ನ್ಯಾಗ ಫೇಸ್ಬುಕ್ನ್ಯಾಗ ಹೇಳಬಹುದಪಾ... ಕ್ಷಣಾರ್ಧದಾಗ ನಾವು ಬರದದ್ದು ಪತ್ರ ಸಾವಿರಾರು ಮೈಲು ದೂರ ನೆಟ್ನಾಗ ತಲಪತದಪಾ... ಇದರಿಂದ ಜಗತ್ತು ಸಣ್ಣದಾಗೇತಿ.
ತಮ್ಮಾ: ಹೌದಡ... ಭಾರಿ ಅದ ಬಿಡು ಇದು...
ತಿಮ್ಮಾ: ಏಯ್ ಗೂಗಲ್ ಅಂತ ಒಂದೈತಿ, ಅದರಾಗ ಏನ್ ಹುಡುಕಿದರು ಸಿಗತೈತಿ...
ತಮ್ಮಾ: ಹೌದ? ಹಂಗಾದ್ರ ಹುಡುಕ ನೋಡೋಣಡ... ನಮ್ಮ ದೇಶದಾಗಿನ ಕಪ್ಪು ಹಣ ಎಲ್ಲಿಟ್ಟಾರ್ ಅಂತ??
ತಿಮ್ಮಾ: ಅದನ್ನ ಹುಡುಕೋದು ಭಾರಿ ಕಷ್ಟಪಾಡಡ...
ತಮ್ಮಾ: ಯಾಕಪಾ ನಿಮ್ಮ ಗೂಗಲ್ದವರಿಗೆ ಏನ್ ಕಷ್ಟ? ಹೋಗಲಿ ನನ್ನ ಹಳೇ ಗೆಳ್ಯಾ ಒಬ್ಬಾವ ನನ್ನ ಲವರ್ ಜೊತಿ ಓಡ್ಯಾಡತಾನ, ನನ್ನ ಒಪ್ಪಿಗೊಂಡಿದ್ದ ಆ ಮಿಟಕಲಾಡಿ ಅವನ ಜೊತಿ ಯಾಕ ಅದಾಳ? ಮತ್ತ ಅವನ ಗೆಳತನಕ್ಕ ಏನಾತು ಕೇಳಲಾಡ..?
ತಿಮ್ಮಾ: ಏಯ್ ಇದು ಭಾರಿ ಪರ್ಸನಲ್ ವಿಚಾರ ಆತಪಾಡಡ... ಆದರ ಎಲ್ಲಾರಿಗೂ ಇಂಥ ಅನುಭವ ಆಗಿರತೇತಿ... ಗೂಗಲ್ನ್ಯಾಗೂ ಇದಕ್ಕ ಉತ್ತರ ಸಿಗೋದು ನಾ ಕಾಣೆ...
ತಮ್ಮಾ: ಹೋಗಲಿ ಪಬ್ಲಿಕ್ ಹೀರೋ ಸಲ್ಮಾನ್ ಮದುವಿ ಯಾಕ್ ಆಗಿಲ್ಲ? ರಾಹುಲ್ ಬಾಬಾ ಪ್ರಧಾನಿಯಾಗಿ ಮುಂದೇನು ಮಾಡ್ತಾನು?.. ಇಲ್ಲ ಆ ಮಲೇಶಿಯಾದ ವಿಮಾನ ಏನಾತು.?? ಕೇಳು...
ತಿಮ್ಮಾ: ಹೋಗಲಿ ಬಿಡೋ, ಯಾಕೋ ಎಲ್ಲಾದ್ರಾಗೂ ಚಾರ್ಜ ಕಡಿಮೆ ಆಗಿ ಬಂದ ಬಿಳಾಕತ್ತಾವ...
= ಯಶವಂತ ಸರದೇಶಪಾಂಡೆ
khullamkhullabevubella@gmail.com