ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಮಸಾಜಿಗೂ ಒಬ್ರು ಮೇಸ್ಟ್ರು ಇರ್ತಾರೆ!

Mainashree
Updated On : 29 Mar 2014, 12:53 pm

ಬೆಂಗಳೂರಿನಲ್ಲಿ 2012ರಲ್ಲಿ ನಡೆದ ಅಂಧರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಿದ್ದವು. ಆಗ ಭಾರತ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಗುಜರಾತ್‌ನ ರಾಜೇಶ್ ಪಟೇಲ್‌ರ ಕಾಲಿಗೆ ಚೆಂಡು ಬಡಿದು, ಕಾಲು ತೀವ್ರವಾಗಿ ಊದಿತ್ತು. ವೈದ್ಯರು ಬ್ಯಾಂಡೇಜ್ ಸುತ್ತಿದ್ದರಾದರೂ ಕಾಲು, ಮೂರು ಪಟ್ಟು ದಪ್ಪವಾಗಿತ್ತು. ದಪ್ಪನಾದ ಕಾಲಿನಿಂದ ಹೆಜ್ಜೆ ಇಡಲಾರದ ರಾಜೇಶ್ ಬೆಂಗಳೂರಿನ ಮೂನ್‌ಪಿಕ್ ಹೋಟೆಲ್‌ನಲ್ಲಿ ನರಳುತ್ತಾ ಮಲಗಿದ್ದರು. ಆಗ ಭಾರತಕ್ಕೆ ಪಾಕ್ ವಿರುದ್ಧ ಸೋಲುವ ಭೀತಿ ಕಾಡಿತ್ತು.
ಆದರೆ, ಅಚ್ಚರಿಯ ರೀತಿಯಲ್ಲಿ ರಾಜೇಶ್ ಫೈನಲ್ ಪಂದ್ಯಕ್ಕೆ ಎದ್ದು ಬಂದು ಶತಕ ಸಿಡಿಸಿದರು. ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ವಿರುದ್ಧ ಗೆದ್ದು ಬೀಗಿತ್ತು. ರಾಜೇಶ್ ಕೇವಲ ಎರಡೇ ದಿನದಲ್ಲಿ ನೋವು ಶಮನ ಮಾಡಿಕೊಂಡು ತಂಡವನ್ನು ಗೆಲ್ಲಿಸಿಕೊಡುವಂತೆ ಮಾಡಿದ್ದು ಮಸಾಜರ್ ಡಾ. ಗಣಪತಿ. ಆ ಮಸಾಜರ್‌ಗೆ ತಂಡದ ಜವಾಬ್ದಾರಿಯನ್ನು ಹೊತ್ತಿದ್ದ ಇಡೀ ವೈದ್ಯರ ತಂಡವೇ ಕೃತಜ್ಞತೆ ಸಲ್ಲಿಸಿತ್ತು.
ಭಾರತದ ಪ್ರಾಚೀನ ಚಿಕಿತ್ಸಾ ಕ್ರಮಗಳಲ್ಲೊಂದಾದ ಮಸಾಜ್ ಕ್ರೀಡಾಪಟುಗಳ ಜೀವನದಲ್ಲಿ ಅಷ್ಟೊಂದು ಬದಲಾವಣೆ ತರಬಲ್ಲದು. ಹೀಗಾಗಿಯೇ ಕ್ರೀಡಾಪಟುಗಳು ಉಪಯೋಗಿಸುವ ಆಧುನಿಕ ಪದ್ಧತಿಗಳಾದ ಸೋನಾ ಬಾತ್, ಸ್ಟೀಮ್ ಬಾತ್, ಎಲೆಕ್ಟ್ರೋ ಥೆರಪಿ, ರೆಸ್ಟ್ ಮಷಿನ್ ಹಾಗೂ ಐಸ್‌ಬಾತ್‌ಗಿಂತ ಮಸಾಜ್ ಭಿನ್ನವಾಗಿ ನಿಲ್ಲುತ್ತದೆ. ಇದರಿಂದ ರಕ್ತ ಸಂಚಲನ ಸುಗಮವಾಗುತ್ತದೆ. ನರಗಳಲ್ಲಿ ಚೈತನ್ಯ ಉಕ್ಕುತ್ತದೆ. ನೋವು ನಿವಾರಣೆಯಾಗುತ್ತದೆ. ಹೈ ಬಿಪಿ- ಲೋ ಬಿಪಿ ಸೇರಿದಂತೆ ಕೊಬ್ಬು ಸಹ ಕಡಿಮೆಯಾಗುತ್ತದೆ. ಯಾವುದೇ ರೀತಿಯ ಆಧುನಿಕ ಔಷಧಿ ಇಲ್ಲದೆ ನೋವು ಶಮನ ಮಾಡುವ ಮಾರ್ಗವೆಂದರೆ ಮಸಾಜ್. ಕಾರಣ, ಮಗು ಹುಟ್ಟಿದಾಗಿನಿಂದಲೇ ನಾವು ನೈಸರ್ಗಿಕ ಚಿಕಿತ್ಸೆಯಾಗಿ ಅದಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಲು ಆರಂಭಿಸಿರುತ್ತೇವೆ!
ಮಹತ್ವದ ಅಂಶ
'72,000 ನರಗಳು ಮತ್ತು 206 ಎಲುಬುಗಳನ್ನು ಹೊಂದಿರುವ ಮಾನವನ ದೇಹಕ್ಕೆ ಏಟು ಬಿದ್ದಾಗ ಅಲ್ಲಿ ರಕ್ತ ಸಂಚಾರಕ್ಕೆ ತೊಂದರೆಯಾಗುತ್ತದೆ. ಆಗ ಆತ ಒದ್ದಾಡತೊಡಗುತ್ತಾನೆ. ಹೀಗಾಗಿ, ಕ್ರೀಡಾಪಟುವೊಬ್ಬ ಗಾಯಗೊಂಡಾಗ ಆತನ ದೇಹದ ಯಾವ ಭಾಗದಲ್ಲಿ ಯಾವ ರೀತಿಯ ಏಟಾಗಿದೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮಸಾಜ್ ಮಾಡಬೇಕು. ಒಂದು ವೇಳೆ ಎಲುಬು ಮುರಿದಾಗ ಮಸಾಜ್ ಕ್ರಿಯೆಗೆ ಮುಂದಾದರೆ, ಅಥ್ಲೀಟ್‌ಗಳು ಇನ್ನಷ್ಟು ತೊಂದರೆ ಅನುಭವಿಸುತ್ತಾರೆ. ಅಂಥ ಸಂದರ್ಭದಲ್ಲಿ ಅವರನ್ನು ಆಸ್ಪತ್ರೆಗೆ ಕಳುಹಿಸುವುದೇ ಸೂಕ್ತ' ಎನ್ನುತ್ತಾರೆ ರಾಜ್ಯದ ಕ್ರೀಡಾಪಟುಗಳ ಮಸಾಜರ್ ಡಾ. ಗಣಪತಿ ಎಫ್.ಸಿ.
ಗಳಿಕೆ ಹೇಗೆ?
ಮಸಾಜರ್‌ಗಳನ್ನು ಆಯಾ ತಂಡಗಳು ಅಥವಾ ಆಯಾ ಕ್ರೀಡಾ ಸಂಸ್ಥೆಗಳು ಅವರ ಪಾಂಡಿತ್ಯಕ್ಕೆ ತಕ್ಕಂತೆ ಸಂಭಾವನೆ ನೀಡುತ್ತವೆ.


-  ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement