ಕಳೆದೆರಡು ತಿಂಗಳುಗಳಿಂದ ಎಲೆಕ್ಷನ್ ಹಾಗೂ ರಾಜಕೀಯ ಸುದ್ದಿಗಳನ್ನು ಪತ್ರಿಕೆಗಳಲ್ಲಿ ಓದಿ, ಟಿವಿಯಲ್ಲಿ ನೋಡೀ ನೋಡಿ ಅಪ್ಪ ಅಮ್ಮಂದಿರು ಮಕ್ಕಳನ್ನು ಬಯ್ಯೋ ರೀತಿಯಲ್ಲಿ ಕೂಡ ಭಾರೀ ಬದಲಾವಣೆ ಉಂಟಾಗಿದೆ. ಇಲ್ಲೊಂದು ಉದಾಹರಣೆ ಇದೆ ನೋಡಿ.
'ಏಯ್... ನಿಂಗೆ ನರೇಂದ್ರ ಮೋದಿ ಥರ ಆಗ್ಬೇಕು ಅಂತ ಆಸೆ ಇದ್ಯೋ ಇಲ್ವೋ? ಮತ್ಯಾಕೆ ರಾಹುಲ್ ಗಾಂಧಿ ಥರ ಲೂಟಿ ಮಾಡ್ತೀಯ? ಈಗ ಮನಮೋಹನ್ ಸಿಂಗ್ ಥರ ಬಾಯ್ಮುಚ್ಕೊಂಡ್ ಇದ್ರೆ ಸರಿ. ಇಲ್ಲಾಂದ್ರೆ ಕೇಜ್ರಿವಾಲಿಗೆ ಹೊಡೆದಿದ್ರಲ್ಲಾ... ಆ ಥರ ನನ್ ಕೈಲಿ ಕೆನ್ನೆಗೇಟು ತಿಂತೀಯ'!
ಅವಳ ಮನೆಯ ಗೇಟು ಕಾದ ಹುಡುಗ
ಅವನು ದಿನಾಲು ಅವಳ ಮನೆ ಮುಂದೆ ನಿಂತಿರುತ್ತಿದ್ದ. ಅವಳು ಕಾಲೇಜಿಗೆ ಹೋಗ್ತಾ ಬರ್ತಾ ಗಮನಿಸುತ್ತಿದ್ದಳು. ಈತ ಮಾತ್ರ ಅವಳ ಮನೆ ಮುಂದಿನಿಂದ ಕದಲುತ್ತಲೇ ಇರಲಿಲ್ಲ. ಅವಳನ್ನು ರೇಗಿಸ್ತಾ ಇರಲಿಲ್ಲ, ಮಾತಾಡಿಸೋಕೂ ಟ್ರೈ ಮಾಡ್ತಾ ಇರ್ಲಿಲ್ಲ. ಅವಳ ಮನೆ ಹತ್ರ ನಿಂತ್ಕೊಂಡು ಮೊಬೈಲಲ್ಲಿ ಏನೋ ನೋಡ್ಕೊಂಡ್ ಇರ್ತಿದ್ದ. ಹೆಚ್ಚೂ ಕಮ್ಮಿ ಒಂದ್ ವರ್ಷ ಹೀಗೆಯೇ ಕಳೀತು.
ಒಂದು ವರ್ಷದಿಂದ ಹೀಗೆ ಮನೆ ಮುಂದೆ ತನಗಾಗಿ ಕಾದಿರೋದನ್ನ ಕಂಡು ಇಂಪ್ರೆಸ್ ಆದ ಹುಡುಗಿ, ಮನೆಯಲ್ಲಿ ಅಪ್ಪ ಅಮ್ಮನಿಗೆ ಈ ಹುಡುಗನ ಬಗ್ಗೆ ತಿಳಿಸಿ, ತನಗೂ ಆತನ ಮೇಲೆ ಪ್ರೀತಿ ಇರೋದಾಗಿ ಹೇಳಿದಳು. ಅಪ್ಪ ಅಮ್ಮನಿಗೂ ಆತ ಮೊದಲ ನೋಟದಲ್ಲೇ ಇಷ್ಟ ಆದ. ಅವಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರು. ಆಕೆ ಹುಡುಗನ ಬಳಿ ಹೋದಳು. ಅವನು ಯಥಾಪ್ರಕಾರ ಅವಳ ಮನೆಯ ಮುಂದೆಯೇ ನಿಂತಿದ್ದ. ಕೈಲಿ ಮೊಬೈಲ್ ಎಂದಿನಂತೆ. ಆಕೆ ಅಂದಳು 'ಒಂದು ವರ್ಷದಿಂದ ನನಗಾಗಿ ಮನೆ ಮುಂದೆ ನಿಂತು ಕಾಯ್ತಿದೀಯ. ನಿನ್ನ ಪ್ರೀತಿ ನನಗೆ ಅರ್ಥ ಆಗಿದೆ. ನನಗೂ ನಿನ್ ಮೇಲೆ ತುಂಬಾ ಪ್ರೀತಿ ಇದೆ. ಐ ಲವ್ ಯೂ. ನಿನ್ ಹತ್ರ ತಾಳಿ ಕಟ್ಟಿಸ್ಕೊಳೋಕೆ ನಾನು ರೆಡಿ'.
ಹುಡುಗ ಒಮ್ಮೆಲೇ ಬೆಚ್ಚಿಬಿದ್ದು 'ಅಯ್ಯಯ್ಯೋ ಸಿಸ್ಟರ್... ನೀವ್ ಅಂದ್ಕೊಂಡಿರೋ ಥರ ಏನೂ ಇಲ್ಲ. ವಿಷ್ಯ ಏನಂದ್ರೆ ನಿಮ್ಮನೆ ಇಂಟರ್ನೆಟ್ ವೈಫೈಗೆ ಪಾಸ್ವರ್ಡ್ ಇಲ್ಲ. ಹಾಗಾಗಿ ದಿನಾ ನಾನು ಇಲ್ಲಿ ಬಂದು ಫ್ರೀ ಇಂಟರ್ನೆಟ್ ಯೂಸ್ ಮಾಡ್ತೀನಿ ಅಷ್ಟೇ. ಲವ್ವು ಗಿವ್ವು ಎಲ್ಲ ಇಲ್ಲ ಸಿಸ್ಟರ್' ಎಂದು ಹೇಳಿ ಅಲ್ಲಿಂದ ಮಾಯವಾದ!