ಒಬ್ಬ ದಾರಿಯಲ್ಲಿ ಹೋಗುವಾಗ ಒಂದಿಷ್ಟು ಆನೆಗಳನ್ನು ಹಗ್ಗದಿಂದ ಮರಕ್ಕೆ ಕಟ್ಟಿದ್ದನ್ನು ನೋಡಿದ. ಆ ಆನೆಗಳು ಸ್ವಲ್ಪ ಶಕ್ತಿ ಬಳಸಿದರೂ ಹಗ್ಗ ಮುರಿದು ಸ್ವತಂತ್ರವಾಗುತ್ತಿದ್ದವು. ಆದರೂ ಅವು ಸುಮ್ಮನೆ ನಿಂತಿದ್ದನ್ನು ನೋಡಿದ ಅವನು ಮಾವುತನ ಬಳಿ ಹೋಗಿ ಕೇಳಿದ, 'ಏಕೆ ಈ ಆನೆಗಳೆಲ್ಲ ಅಷ್ಟು ದುರ್ಬಲವಾದ ಹಗ್ಗದಿಂದ ಕಟ್ಟಿದ್ದರೂ ಬಂಧನದಲ್ಲಿ ನಿಂತಂತೆ ನಿಂತಿವೆ? ಹಗ್ಗವನ್ನು ಹರಿಯುವ ಪ್ರಯತ್ನವನ್ನೇ ಮಾಡುತ್ತಿಲ್ಲವೇಕೆ?'
ಮಾವುತ ಉತ್ತರಿಸಿದ, 'ಈ ಆನೆಗಳು ಚಿಕ್ಕ ಮರಿಗಳಾಗಿದ್ದಾಗ ಕಟ್ಟುತ್ತಿದ್ದ ಹಗ್ಗಗಳೇ ಅವು. ಆಗ ಆ ಮರಿಗಳನ್ನು ಹಿಡಿದಿಡಲು ಹಗ್ಗಗಳ ಬಲ ಸಾಕಿತ್ತು. ಅವು ಪ್ರಯತ್ನಿಸಿದರೂ ಹಗ್ಗದಿಂದ ಕಳಚಿಕೊಳ್ಳಲಾಗಿರಲಿಲ್ಲ. ಅಂದಿನಿಂದ ಆನೆಗಳಿಗೆ ಅದೇ ಅಭ್ಯಾಸವಾಗಿಬಿಟ್ಟು ಅವು ಈ ಹಗ್ಗದಿಂದ ಬಿಡಿಸಿಕೊಳ್ಳಲು ತಮಗೆ ಸಾಧ್ಯವಿಲ್ಲ ಎಂದು ನಂಬಿವೆ'.
ನಾವೂ ಹಲವು ಬಾರಿ ಹೀಗೇ- ಎಂದೋ ಸೋತ ನೆನಪಿನಲ್ಲೇ ಇಂದಿಗೂ ಪ್ರಯತ್ನಿಸಲೇ ಹೋಗುವುದಿಲ್ಲ ಅಲ್ಲವೇ?!