ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಒಂದು ವೆಜಿಟೇರಿಯನ್ ಜೋಕು

Vishwanath S
Updated On : 10 May 2014, 2:48 am

ಒಂದ್ಸಲ ಆಲೂಗಡ್ಡೆಗೆ ಬೆಂಡೆಕಾಯಿ ಮೇಲೆ ತುಂಬಾ ಲವ್ವಾಗಿ ಬಿಡುತ್ತೆ. ಆಲೂಗಡ್ಡೆ ಬೆಂಡೆಕಾಯಿಗೆ 'ಐ ಲವ್ ಯೂ' ಅಂತ ಎಸ್ಸೆಮ್ಮೆಸ್ ಮಾಡುತ್ತೆ. ಆಗ ಬೆಂಡೆಕಾಯಿ ಫೋನ್ ಮಾಡಿ 'ನೀನು ತುಂಬಾ ದಪ್ಪ ಇದೀಯ, ರೇಟ್ ಕೂಡ ಕಮ್ಮಿ. ನಿನ್ನ ಲವ್ ಮಾಡೋಲ್ಲ ಹೋಗ್ ಹೋಗ್‌' ಅನ್ನುತ್ತೆ.
ಆಲೂಗೆ ಹೃದಯ ಬಿರಿದು ಹೋಗುತ್ತೆ. 'ನೀ ಬೀಳದೆ ಹೋದ್ರೆ ಏನಂತೆ. ನಿನ್ನಂಥ ನೂರ್ ತರಕಾರೀನ ಬೀಳಿಸ್ಕೊಳ್ತೀನಿ' ಅನ್ನುತ್ತೆ. ಅದೇ ಕೋಪದಲ್ಲಿ ಇರೋಬರೋ ತರಕಾರಿಗಳ ಜೊತೆಯೆಲ್ಲಾ ಫ್ಲರ್ಟ್ ಮಾಡುತ್ತೆ. ನಂಬಲ್ವಾ? ನೀವೇ ನೋಡಿ... ಆಲೂ ಜೊತೆ ಎಷ್ಟ್ ತರಕಾರಿ ಜೊತೆ ಮಿಕ್ಸ್ ಆಗುತ್ತೆ ಅಂತ. ಆಲೂ- ಗೋಬಿ, ಆಲೂ- ಪಾಲಕ್, ಆಲೂ- ಮಿರ್ಚಿ, ಆಲೂ- ಮೇತಿ, ಆಲೂ- ಗಾಜರ್... ಅಬ್ಬಬ್ಬಾ!
ಬೆಂಡೆಕಾಯಿ ಇವತ್ತಿಗೂ ಏಕಾಂಗಿ. ಬೆಂಡೆ ಫ್ರೈ ಅಂತ ಒಬ್ಳೆ ಫ್ರೈ ಆಗ್ತಿರ್ತಾಳೆ. ಅದಕ್ಕೆ ಹೇಳೋದು. ಪ್ರೀತಿ ಹತ್ರ ಬಂದಾಗ ಕೊಬ್ಬು ತೋರಿಸಬಾರದು ಅಂತ!

ಚುನಾವಣಾ ಫಲಶ್ರುತಿ
    ಎನ್.ಡಿ. ತಿವಾರಿಗೆ ಮಗ ಸಿಕ್ಕಿದ್ದು.
    ಮೋದಿಗೆ ಪತ್ನಿ ಸಿಕ್ಕಿದ್ದು.
    ದಿಗ್ವಿಜಯ್‌ಗೆ ಇಬ್ಬರೂ ಸಿಕ್ಕಿದ್ದು!
    ಮಗಳ ವಯಸ್ಸಿನ ಪತ್ನಿ!
ಸಿಂಪಲ್ ಸ್ಟೋರಿ
ಗಂಡಂದಿರೇ ಸಿಂಪಲ್ಲು! ಹೆಂಡ್ತಿ ನೂರು ರೂಪಾಯಿ ಹವಾಯಿ ಚಪ್ಪಲಿ ತಗೊಂಡ್ ಬಂದರೂ ತಾನು ಶಾಪಿಂಗ್ ಮಾಡಿ ಬಂದಿರೋದು ಇಡೀ ಮನೆಮಂದಿಗೆಲ್ಲ ಹೇಳ್ತಾಳೆ. ಅದೇ ಗಂಡ ಸಾವಿರ ರುಪಾಯಿ ಖರ್ಚು ಮಾಡಿ ಎಣ್ಣೆ ಹೊಡ್ಕಂಡ್ ಮನೆಗೆ ಬಂದರೂ ಒಬ್ರ ಹತ್ರನೂ ಹೇಳ್ಕೊಳಲ್ಲ. ಎಷ್ಟ್ ಸಿಂಪಲ್ ಅಲ್ವೇ!?

ಹೆಂಡತಿಗೆ ಸೂಚನೆ
ವೇಗವಾಗಿ ಕಾರ್ ಓಡಿಸೋ ಹುಚ್ಚಿದ್ದ ಹೆಂಡತಿಗೆ ಹೊಸ ಕಾರಿನ ಕೀ ಕೊಡುವ ಮೊದಲು ಗಂಡ ಹೇಳಿದ್ದು, 'ಚಿನ್ನಾ.. ಹುಷಾರಾಗಿ ಡ್ರೈವ್‌ಮಾಡು. ಗಾಡಿ ಏನಾದ್ರೂ ಆ್ಯಕ್ಸಿಡೆಂಟ್ ಆದರೆ, ನಾಳೆ ಎಲ್ಲ ಪೇಪರಲ್ಲೂ ನಿನ್ನ ವಯಸ್ಸು ಪ್ರಿಂಟ್ ಆಗುತ್ತೆ.'


ಸಾಲ್‌ಪನಿಕ
    ಇಮಾಮಿಗೂ ಸುನಾಮಿಗೂ ಇರೋ ವ್ಯತ್ಯಾಸ: ಇಮಾಮಿ ಫೇಸ್‌ವಾಷ್. ಸುನಾಮಿ ಟೋಟಲ್‌ವಾಷ್.
    ಕನ್‌ಫ್ಯೂಸ್ ಮಾಡೋ ಆಟ: ಎರಡು ಎರೆಹುಳುಗಳು ನೂಡಲ್ಸ್ ಪ್ಲೇಟಿನಲ್ಲಿ ಆಡುವ ಕಣ್ಣಾಮುಚ್ಚಾಲೆ.
    ತದ್ರೂಪಿ ಅವಳಿಗಳಲ್ಲಿ ಒಬ್ಬಳನ್ನು ಮದುವೆಯಾದ ಹುಡುಗ, ಪೆದ್ದನಾದರೆ ತನ್ನಾಕೆಯನ್ನು ಗುರುತಿಸೋಕೆ ಕಷ್ಟ ಪಡ್ತಾನೆ. ಬುದ್ಧಿವಂತನಾದರೆ ಗುರುತಿಸೋ ರಿಸ್ಕ್ ತಗೋಳೋದಿಲ್ಲ.
    ಪ್ರೀತೀಲಿ ಬಿದ್ದಿರೋ ಹುಡುಗರ ಲಕ್ಷಣ: ಅಗ್ಗದ ಹಾಗೂ ಹೆಚ್ಚು ಟಾಕ್ ಟೈಮಿನ ಮೊಬೈಲ್ ಪ್ಲಾನ್ ಹುಡುಕೋದು.
    ಹೆಂಡತಿಯ ಮನಸಲ್ಲಿ ಡೈವೋರ್ಸ್ ಬಗ್ಗೆ ಯೋಚಿಸೋ ಲೆವೆಲ್ಲಿಗೆ ಹುಳ ಬಿಡೋದು ಹೇಗೆ? 'ಐ ಲವ್ ಯೂ ಟೂ' ಅಂತ ಒಂದು ಎಸ್ಸೆಮ್ಮೆಸ್ ಕಳಿಸಿ ನೋಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement