ಖುಷಿ

ದೃಶ್ಯ ಮಾಧ್ಯಮದಲ್ಲಿ ಬಸವಣ್ಣ

ಬಸವಣ್ಣನವರನ್ನು ಕುರಿತಂತೆ ರಚಿಸಿರುವ ಚಿತ್ರಗಳು ಎರಡು. ವಚನ ಬರೆಯುತ್ತಿರುವಂತೆ ರಚಿಸಿದುದು, ಮತ್ತೊಂದು ಇಲ್ಲಿ ಸಲ್ಲುವವರು, ಅಲ್ಲಿಯೂ ಸಲ್ಲುವರಯ್ಯ ಎಂಬ ಸಂದೇಶ ತಿಳಿಸುವ ದೈಹಿಕ ಪೂರ್ಣ ಪ್ರಮಾಣದ ಚಿತ್ರ.
ಇವೆರಡು ಕುಳಿತಿರುವಂತೆಯೇ ರಚಿಸಿದ್ದು ಈ ಎರಡು ಚಿತ್ರಗಳನ್ನು ವೀರಪ್ಪನವರೇ ರಚಿಸಿದ್ದಾಗಿದ್ದರೂ ಮುಖದ ಹೋಲಿಕೆ ವ್ಯತ್ಯಯಗೊಂಡಿದೆ. ವಚನ ರಚನಾ ಚಿತ್ರದಲ್ಲಿ ದೈಹಿಕವಾಗಿ ದಷ್ಟಪುಷ್ಟವಾಗಿರುವಂತಿದ್ದರೇ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು ಎಂಬ ಚಿತ್ರದಲ್ಲಿನ ದೈಹಿಕ ಸಪ್ರಮಾಣವು ಯುವಕನ ವರ್ಚಸ್ಸು ಹೊಂದಿದೆ. ್ಡಹಾಗೂ ಶಿವದಾರದಿಂದ ಕರಡಿಗೆ ಕಟ್ಟಿದಂತೆಯೂ ಕಂಠದ ಭಾಗದಲ್ಲಿ ಮೂರು ರುದ್ರಾಕ್ಷಿಗಳನ್ನು ದಾರಕ್ಕೆ ಪೋಣಿಸಿ ಕಟ್ಟಿಕೊಂಡಂತೆಯೂ ಚಿತ್ರಿಸಿದ್ದಾರೆ. ಕುಳಿತ ಆಸನವನ್ನೂ ಸರಳತೆಯಿಂದಿರುವಂತೆ ವಿನ್ಯಾಸಗೊಳಿಸಿದ್ದಾರೆ. ಮಕ್ಕಳು ಮತ್ತು ಬಾಲಕರಿಗೆ ಇಂದಿಗೂ ಕೊರಳಿಗೊಂದು ರುದ್ರಾಕ್ಷಿ ಕಟ್ಟುವುದನ್ನು ಎಲ್ಲೆಡೆ ಕಾಣುತ್ತೇವೆ. ಹಳೇ ಮೈಸೂರಿನ ಭಾಗದಲ್ಲಿ ಶಿವನನ್ನು ಆರಾಧಿಸುವ ಸಂಸ್ಕಾರವಂತ ಮನೆತನದವರು ಮಕ್ಕಳು ದೊಡ್ಡವರಾಗುವವರೆಗೂ ಕಡ್ಡಾಯವಾಗಿ ರುದ್ರಾಕ್ಷಿ ಕಟ್ಟಿರುತ್ತಾರೆ. ಈ ಕ್ರಮವನ್ನೇ ಅನುಸರಿಸಿ ವೀರಪ್ಪನವರೂ ಯುವಕ ಬಸವಣ್ಣನ ಚಿತ್ರ ರಚಿಸಿದ್ದಾರೆನ್ನಬಹುದಾಗಿದೆ. ವಚನ ರಚನಾ ಬಸವಣ್ಣನ ಚಿತ್ರವು ಚಿತ್ರಪಟವಾಗಿ ಕೆಲವು ಕಾಲ ವಿಜೃಂಬಿಸಿತ್ತು. ಹಾಗೆಯೇ ಕದಳಿವನದಲ್ಲಿ ಪೂಜಾನಿರತ ಅಕ್ಕಮಹಾದೇವಿ ಚಿತ್ರವೂ ಕ್ಯಾಲೆಂಡರ ರೂಪತಾಳಿ ರಾಜ್ಯಾದ್ಯಂತ ಆಶಕ್ತರ ಮನೆಯ ಪೂಜಾಮಂದಿರ ಸೇರಿದ್ದವು. ಮೈಸೂರು ಟಾಯ್ಸವೀರಪ್ಪನವರು ಚಾಮರಾಜೇಂದ್ರ ವೃತ್ತಿ ಶಿಕ್ಷಣ ಶಾಲೆಯ (ಕಾವಾ) ಕಲಾವಿಭಾಗದ ಮುಖ್ಯಸ್ಥರಾಗಿಯೂ ಕೆಲ ಕಾಲ ಇದ್ದರು. ಇವರು ಸ್ವಇಚ್ಛೆಯಿಂದ ಚಿತ್ರಿಸಿ ಬಸವಾಭಿಮಾನದಿಂದ ಕ್ಯಾಲೆಂಡರ್ ಆಗಿ ಮುದ್ರಿಸಿ ಉಚಿತವಾಗಿ ಹಂಚಿದುದು ತಿಳಿದು ಬರುತ್ತದೆ.  ಪ್ರಸ್ತುತದಲ್ಲಿ ರಾಜ್ಯ- ರಾಷ್ಟ್ರದೆಲ್ಲೆಡೆ ಅತ್ಯಂತ ಪ್ರಚಾರದಲ್ಲಿರುವ ಕುರ್ಚಿ ಅನ್ನುವುದಕ್ಕಿಂತ ಉನ್ನತಾಸನದಲ್ಲಿ ಕಿರೀಟಧಾರಿ ಬಸವಣ್ಣ ಕುಳಿತಿರುವ ಚಿತ್ರದ ಹಿಂದೆ ಒಂದು ರೋಚಕ ಕತೆಯೇ ಅಡಗಿದೆ. ಅದೆಂದರೆ, ಬಸವಣ್ಣನವರ ನೆನಪಿನಲ್ಲಿ ಅಷ್ಟಶತಮಾನೋತ್ಸವ ಮಾಡಬೇಕೆಂದು ರಾಜ್ಯ ಸರ್ಕಾರ ನಿರ್ಧರಿಸಿತ್ತು. ಆ ವೇಳೆಗೆ ಬಸವಣ್ಣನವರ ರೂಪ ಚಿತ್ರವೊಂದನ್ನು ರಚಿಸಿ ಬಿಡುಗಡೆ ಮಾಡಬೇಕು, ಆ ಚಿತ್ರವೇ ಅಧಿಕೃತವಾಗಿ ಎಲ್ಲೆಡೆ ಪ್ರಚಾರಕ್ಕೆ ಬರಬೇಕೆಂದು ಶತಮಾನೋತ್ಸವ ಸಮಿತಿಯವರ ಆಶಯವಾಗಿತ್ತು.
ಕೃತಿ: ದೃಶ್ಯ ಮಾಧ್ಯಮದಲ್ಲಿ ಬಸವಣ್ಣ
ಲೇಖಕ: ಎಲ್. ಶಿವಲಿಂಗಪ್ಪ, ಪ್ರಕಾಶನ: ಶ್ರೀ ಗಾಯತ್ರಿ ಪ್ರಿಂಟರ್ಸ್
ಪುಟ: 96, ಬೆಲೆ: 200 ರುಪಾಯಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!