ಪೇಂಟರ್ ಪಾಪು, ಸಂತೇಮರಹಳ್ಳಿ
ಪ್ರಶ್ನೆಗೆ ಪ್ರಶ್ನೆನೇ ಉತ್ತರನಾ?
ಹಾಗಿದ್ದರೆ ನಿಮಗೆ ನೀವೇ ಪ್ರಶ್ನೆ ಹಾಕ್ಕೋತಾ ಕೂರಬಹುದಿತ್ತು!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ
ಬೆಕ್ಕಿಗೆ ಜ್ವರ ಬರುವುದೇ ಇಲ್ಲವೇ?
ಸ್ವಲ್ಪ ಬಿಸಿ ಹಾಲು ಕುಡಿಯುವ ಬೆಕ್ಕಿಗೆ ಜ್ವರ ಇರುತ್ತೆ!
ಓಂ ಚನ್ನೇಶ್ ಅರಬಿಳಚಿಕ್ಯಾಂಪ್, ಭದ್ರಾವತಿ
ಮೊಸಳೆ ಕಣ್ಣೀರಿಗೂ, ಆನಂದಬಾಷ್ಪಕ್ಕೂ ವ್ಯತ್ಯಾಸವೇನು?
ಬೇರೆಯವರ ಕಷ್ಟ ನೋಡಿದ್ರೆ ಮೊಸಳೆ ಕಣ್ಣೀರು ಬರುತ್ತೆ, ಸ್ವಂತ 'ಆನಂದ'ಕ್ಕೆ ಬಾಷ್ಪ ಬರುತ್ತೆ.
ಶ್ರೀಕಾಂತ ಮುದಗಲ್ಲ, ಇಳಕಲ್ಲ
'ಮಾತು ಬೆಳ್ಳಿ, ಮೌನ ಬಂಗಾರ' ಇದು ಹಳೇ ಮಾತಾಯಿತು. ಈಗ ಹೊಸತು?
'ಬಂಗಾರದಂಥ ಮೊಬೈಲು ಇಟ್ಕೊಂಡ್ ಮಾತಾಡದವನು ದಡ್ಡ'.
ರಾಮಣ್ಣ ವಡ್ಡರ, ಮುದ್ದೇಬಿಹಾಳ
ಎರಡು ಬಣ್ಣ ಕೂಡಿದ್ರೆ ಒಂದೇ ಬಣ್ಣ, ಎರಡು ಮನಸ್ಸು ಕೂಡಿದ್ರೆ?
ಕೆಲವೊಮ್ಮೆ ಏಳು ಬಣ್ಣಗಳ ಕಾಮನಬಿಲ್ಲು!
ಎ.ಕೆ. ಪಟ್ಟಾಭಿ, ಬೆಂಗಳೂರು.
ಸ್ತ್ರೀ ಬುದ್ಧಿ ಪ್ರಳಯಾಂತಕ ಎನ್ನುವವರು ಪುರುಷ ಬುದ್ಧಿಯ ಬಗ್ಗೆ ಅಂಬೋಣವೇನು?
ಪ್ರಣಯಾಂತಕ
ಆರ್.ಸಿ. ಪರಶುರಾಮ್, ಶಿಕಾರಿಪುರ.
ಕೆಲವರ ಮೈ ಮೇಲೆ ಚೌಡಮ್ಮ, ಮಾರಮ್ಮ ದೇವರು ಬರುವಂತೆ ಲಕ್ಷ್ಮಿ, ಸರಸ್ವತಿ ದೇವರೇಕೆ ಬರುವುದಿಲ್ಲ?
ಅವರೆಲ್ಲ ಬಂದರೂ 'ಸೈಲೆಂಟ್ ಮೋಡ್'ನಲ್ಲಿರುತ್ತವೆ!
ಪಿ.ಜೆ. ರಾಘವೇಂದ್ರ, ಮೈಸೂರು.
ಉತ್ತರಾಧಿಕಾರಿಯ ಪೂರ್ವಾಧಿಕಾರಿ ಯಾರು?
ಪಶ್ಚಿಮ ದಿಕ್ಕಿನಲ್ಲಿ ಯೋಚಿಸ್ತಾ ಕೂತಿರೋನು!
- ಎಸ್.ವಿ. ಪದ್ಮನಾಭ