ಬೆಳಕಬಳ್ಳಿ
ಕತ್ತಲೆಯ ಒಳಗೊಂದು ಬೆಳಕಬಳ್ಳಿ
ಈಗಷ್ಟೆ ಅರಳಿದಂತೆ ಹೊಳೆಯುತಿದೆ
ಉನ್ಮಾದದ ಸುಳಿಯೊಳಗೆ ಹಣಕಿರಬೇಕು
ಅಲ್ಲಲ್ಲಿ ಬೆವರ ಗಂಧ ಕುಡಿಯೊಡೆದ ಪೋಲಿತನ
ಚಂದ್ರನ ಸಾವಾಗಬಹುದು;
ಕದ್ದು ಮುಚ್ಚಿ ಮೈಮಾಟಕ್ಕೊಮ್ಮೆ ಮುದ್ದಿಸಿ!
ಮಿಂಚುಹುಳುಗಳಿಗೆ ರಾತ್ರಿಪಾಳಿಯ ನೆನಪಿಲ್ಲ
ಅವುಗಳಿಗೋ ಮಂಪರು!
ಕೊಳದ ನೀಲಿಯಲೆಲ್ಲ ವಿರಹದ ಹರಿವು!
ಗೆಜ್ಜೆಕಟ್ಟಿದೆ ಏಕಾಂತ ಹೆಜ್ಜೆ ಹೆಜ್ಜೆಗು
ಉಬ್ಬು ತಗ್ಗಿಗೂ ಏದುಸಿರಿಲ್ಲ ನಿಶ್ಚಲ ನಡಿಗೆ
ದೂರ ತಿರುವಿನಲ್ಲೆಲ್ಲೋ ಹೊಂಡಬಿದ್ದ ಹಾದಿ
ಎಲ್ಲೆಲ್ಲೂ ಕತ್ತಲೆ; ಬೆಳಕ ಬಳ್ಳಿಯ ಅವಸಾನ!
-ಮಹಾಂತೇಶ ದೊಡ್ಡಮನಿ
mahantesh.d89@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.