ಖುಷಿ

ಜೋಕ್ಸ್‌ಪಿಯರ್

ಟೈಮ್‌ಸೆನ್ಸು ನಾನ್‌ಸೆನ್ಸು
ಇಬ್ರು ಕುಡುಕರು ತಡರಾತ್ರಿ ರಸ್ತೇಲಿ ನಡ್ಕೊಂಡ್ ಬರ್ತಾ ಇರ್ತಾರೆ.
ಒಬ್ಬ: ಗುರೂ ಟೈಮೆಷ್ಟು ?
ಇನ್ನೊಬ್ಬ: ನನ್ ಹತ್ರ ವಾಚೆಲ್ಲಿದೆ? ಇರು ಈ ಏರಿಯಾದ ಪುಣ್ಯಾತ್ಮರ ಬಳಿ ಟೈಮ್ ಕೇಳೋಣ. ಹೇಳೇ ಹೇಳ್ತಾರೆ.
ಒಬ್ಬ: ಕುಡಿದಿದೀವಿ. ಲೇಟ್ ಆಗಿದೆ. ಮನೆ ಬಾಗ್ಲು ತಟ್ಟಿ ಟೈಮ್ ಕೇಳಿದ್ರೆ ಬಯ್ದು ಕಳಿಸಲ್ವಾ? ಪೋಲೀಸರನ್ನ ಕರೆಯಲ್ವಾ?
ಇನ್ನೊಬ್ಬ: ಅದಕ್ಕೆ ನನ್ನ ಹತ್ರ ಐಡಿಯಾ ಇದೆ ಗುರೂ. (ರಸ್ತೇಲಿ ಬಿದ್ದ ಒಂದು ಕಲ್ಲೆತ್ಕೊಂಡು ದೊಡ್ಡ ಮನೆಯೊಂದರ ಕಿಟಕಿಗೆ ಬೀಸ್ತಾನೆ.)
ಮನೆ ಯಜಮಾನನ ದನಿ: ಯಾವನೋ ಅವ್ನು ಕುಡುಕ್ ನನ್ಮಗ? ರಾತ್ರಿ ಮೂರು ಗಂಟೆ ಆದರೂ ಇನ್ನೂ ಮನೆ ಸೇರದೆ ಪುಂಡಾಟಿಕೆ ಮಾಡ್ತಾ ಇರೋವ್ನು?
ಟೈಮ್ ಗೊತ್ತಾಯ್ತಾ ಗುರು? ಮನೆಗೆ ಹೋಗೋಣ್ವಾ?

ನೀನ್ಯಾರೋ ನಾನ್ಯಾರೋ...
ಪರೀಕ್ಷೆಗೆ ಮೊದಲು
ಅಪ್ಪ: ಈ ಸಲಾನೂ  ನೀನು ಪರೀಕ್ಷೇಲಿ ಫೇಲ್ ಆದ್ರೆ ನನ್ನನ್ನ ಅಪ್ಪಾ ಅಂತ ಕರೀಬೇಡ. ನಂಗೆ ಅವಮಾನ ಆಗತ್ತೆ.
ರಿಸಲ್ಟ್ ನಂತರ: ಏನಾಯ್ತೋ ರಿಸಲ್ಟು ?
ಮಗ: ರಿಸಲ್ಟ್ ಕಥೆ ಹಾಳಾಗ್ಲಿ. ನಂಗೇನ್ ಬೇಜಾರು ಗೊತ್ತಾ ಪುಟ್‌ನರಸಾ? ನೀನು ಅಪ್ಪ ಅನಿಸ್ಕೊಳೋ ಹಕ್ಕು ಕಳ್ಕೊಂಡ್‌ಬಿಟ್ಟೆ ಕಣ್ಲಾ.  
ಅ'ಗಣಿತ' ಸಮಸ್ಯೆ
ಗಣಿತದ ಲೆಕ್ಕಗಳಿಂದ ಬೇಸತ್ತ ಸ್ಕೂಲ್ ಹುಡುಗ ಎಕ್ಸಾಮ್ ದಿನ ಉತ್ತರಪತ್ರಿಕೆಯಲ್ಲಿ ಬರೆದ:
ಗಣಿತ ಮಹಾಶಯ...
ಇಷ್ಟು ವರ್ಷದಿಂದ ಎಲ್ಲರ ಪಾಲಿಗೂ ನೀನೊಂದು ಸಮಸ್ಯೆ ಆಗಿ ಉಳಿದುಬಿಟ್ಟೆಯಲ್ಲ. ಇನ್ಮುಂದೆ ಆದರೂ ನಿನ್ನ ಸಮಸ್ಯೆಗಳನ್ನ ನೀನೆ ಪರಿಹರಿಸ್ಕೋ. ನಾವಿನ್ನೂ ಚಿಕ್ಕವರು, ನಮಗೆ ನಮ್ಮದೇ ಆದ ಸಮಸ್ಯೆ ಇದೆ. ಪ್ಲೀಸ್ ಅರ್ಥ ಮಾಡ್ಕೋ.

ಗೂಂಡಾಗಿರಿ ವೃತ್ತಾಂತ
ಅಪ್ಪ ಮಗನಿಗೆ ಯಾವಾಗಲೂ ಯದ್ವಾತದ್ವಾ ಹೊಡೀತಾ ಇದ್ದ. ಒಂದು ದಿನ ಅಪ್ಪನನ್ನು ಮಗ ಕೇಳಿದ:
ಅಪ್ಪಾ... ನೀನು ನನಗೆ ಹೊಡೆಯೋ ಥರ ನಿಮ್ಮ ಅಪ್ಪನೂ ನಿಂಗೆ ಹೊಡೀತಾ ಇದ್ರಾ?
ಅಪ್ಪ: ಹೌದು ಹೊಡೀತಾ ಇದ್ರು. ಯಾಕೆ?
ಮಗ: ತಾತನಿಗೂ ಅವರಪ್ಪ ಹೀಗೆಯೇ ಹೊಡೀತಾ ಇದ್ರಾ?
ಅಪ್ಪ: ಹೌದು. ಯಾಕೆ ಹೇಳು?
ಮಗ: ಸರಿ ಬಿಡು. ಈ ಗೂಂಡಾಗಿರಿ ವಂಶಪಾರಂಪರ್ಯವಾಗಿ ಬಂದಿದ್ದು ಅಂತಾಯ್ತು. ನೀನು ಹೊಡೆಯೋದನ್ನ ಮುಂದುವರೆಸು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ