ನಿಮ್ಮ ಪುಸ್ತಕವನ್ನು ಕೈಗೆತ್ತಿಕೊಂಡಾಗಿನಿಂದ ಕೆಳಗಿಡುವವರೆಗೂ ನಕ್ಕೂ ನಕ್ಕೂ ಸುಸ್ತಾಯಿತು. ಸಮಯ ಸಿಕ್ಕಾಗ ಓದಬೇಕಂತಿದ್ದೀನಿ.
-ಗ್ರೋಶೋ ಮಾರ್ಕ್ಸ್
ಈ ಪುಸ್ತಕ ಪಕ್ಕಕ್ಕೆ ತೆಗೆದಿಡುವಂಥದ್ದಲ್ಲ. ಬಲ ಪ್ರಯೋಗಿಸಿ ದೂರಕ್ಕೆ ಎಸೆಯಬೇಕು.
-ಡೋರೊತಿ ಪಾರ್ಕರ್
ಹಣವನ್ನು ಬಿಟ್ಟು ಉಳಿದ ಯಾವುದೇ ಕಾರಣಕ್ಕೆ ಬರೆಯುವವನು ದಡ್ಡ.
-ಸಾಮ್ಯುಯಲ್ ಜಾನ್ಸನ್
ವೈಯಕ್ತಿಕ ವಿಮರ್ಶೆಗಳು
ಬೇರೆಯವರನ್ನು ಬೊಟ್ಟು ಮಾಡಿ ತೋರಿಸಿ ನಗುವುದಕ್ಕಿಂತ ತಮ್ಮ ಓರೆಕೋರೆಗಳನ್ನೇ ನೋಡಿ ನಗುವುದು ಮೇಲ್ಮಟ್ಟದ ಹಾಸ್ಯ.
-ಅನಾಮಿಕ
ಇಂಗ್ಲೆಂಡ್, ಸಿಂಹದ ದೇಹದಲ್ಲಿರುವ, ಮೊದಲ ಹೃದಯ; ಗಿಣಿಗಳ ಮನೆಯಲ್ಲಿ ವಿಷದ ಹಾವಿನ ದವಡೆ.
-ಯುಜೀನ್ ಡೆಶಾಮ್
ಇವರು ಸಹಜವಾಗಿ ಸೋಮಾರಿಗಳು ಅರ್ಧ ಸಮಯವನ್ನು ತಂಬಾಕು ಸೇವನೆಯಲ್ಲಿ ಕಳೆಯುತ್ತಾರೆ.
-ಸಾಮ್ಯುಯಲ್ ಡಿಸೋರ್‌ಬಿಯೊ
ಮೌನ: ಇಂಗ್ಲಿಷ್‌ನವನೊಂದಿಗೆ ಸಂಭಾಷಣೆ
-ಹೆಂಡ್ರಿಕ್ ಹೈನ್
ಇಂಗ್ಲೆಂಡಿನಲ್ಲಿ ಸರಿಯಾದ ಮನರಂಜನೆ ಇಲ್ಲವೆನ್ನುವುದೇ ಬೇಸರದ ಸಂಗತಿ. ಕೆಟ್ಟದ್ದನ್ನು ಮಾಡುವುದು ಮತ್ತು ಮತಧರ್ಮ ಎರಡು ಮನರಂಜನೆ ಎನಿಸಿಕೊಳ್ಳುತ್ತದೆ.
-ಸಿಡ್ನಿಸ್ಮಿತ್
ಆತ್ಯಹತ್ಯೆ ಹೇಡಿಗಳ ಲಕ್ಷಣ. ಇಂಗ್ಲಿಷ್‌ನೋರು ಆಗಾಗ್ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಲ್ಲಿನ ತೇವ ತುಂಬಿದ ಹವಾಮಾನವೇ ಕಾರಣ
-ನೆಪೋಲಿಯನ್ ಬೋನೋಪಾರ್ಟೆ
- ಸಂಪಟೂರು ವಿಶ್ವನಾಥ್