- ಅಟಲ್‌ಜಿ ಅವರ ಅಧಿಕಾರದ ಅವಧಿಯಲ್ಲಿ ಆರಂಭಿಸಿ, ತದ ನಂತರ ನಿಂತ ಯೋಜನೆಗಳ ಆರಂಭ.
- ಬ್ರಿಕ್ಸ್‌ನಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಅಗತ್ಯತೆ.
- ಈಗಿನದ್ದು ಕೇವಲ ವಿತ್ತೀಯ ಕೊರತೆಯಲ್ಲ. ಆಡಳಿತಾತ್ಮಕ ಕೊರತೆ, ನಂಬಿಕೆಯ ಕೊರತೆ, ವಾಣಿಜ್ಯ ಸರಳೀಕರಣದ ಕೊರತೆ, ಪ್ರಜಾಪ್ರಭುತ್ವ ಅಂಶಗಳ ಕೊರತೆ, ನೈತಿಕ ಕೊರತೆ. ಅದನ್ನು ಸರಿಪಡಿಸುವುದು.
- ನೀತಿ ನಿಯಮಗಳಿಗಿಂತ ಆಡಳಿತ ಪ್ರಮುಖವಾದದ್ದು.
- ನಮಗೆ ಬೇಕಿರುವುದು ಸಮಗ್ರ ದೃಷ್ಟಿಕೋನ, ದೊಡ್ಡ ಕನಸುಗಳು ಮತ್ತು ಅವುಗಳ ಈಡೇರಿಕೆಯತ್ತ ಹೆಜ್ಜೆ ಹಾಗೂ ಕೇವಲ ಮೂಲ ಸೌಕರ್ಯ ಅಭಿವೃದ್ಧಿಗೆ ಸೀಮಿತವಾಗುವುದು ಆಗಬಾರದು.
- ಬಡತನದ ಸಂಪೂರ್ಣ ನಿವಾರಣೆ.
- ಜೀವನದ ಶೈಲಿ ಉತ್ಕೃಷ್ಟತೆಯತ್ತ ಹೋಗಬೇಕು, ನಮ್ಮ ಉತ್ಕೃಷ್ಟ ಜೀವನವನ್ನು ಒಂದು ಹಂತದಲ್ಲಿ ನಿಲ್ಲಿಸುವ ಕನಸನ್ನು ಕಾಣಬಾರದು.
- ಬಡವ- ಶ್ರೀಮಂತರ ನಡುವಿನ ಮತ್ತು ನಗರ- ಗ್ರಾಮೀಣ ಪ್ರದೇಶಗಳ ಅಂತರ ಕಡಿಮೆ ಮಾಡುವಿಕೆ.
- ಸಂಶೋಧನೆ ಮತ್ತು ಹೊಸತನ.
- ಒಬ್ಬ ಟೈಲರ್‌ನ ಅಳತೆ ಎಲ್ಲರಿಗೂ ಸರಿಯಾಗಬೇಕು ಎಂದೇನಿಲ್ಲ, ಅಂದರೆ... ರಾಜ್ಯಗಳ ಅಭಿವೃದ್ಧಿ ಹೇಗೆ ಆಗಬೇಕು ಎಂಬ ಬಗ್ಗೆ ಅವರ ಕಡೆಯಿಂದಲೇ ಸಲಹೆ ಸೂಚನೆಗಳ ಸ್ವೀಕಾರ ಪಡೆಯುವುದು.
- ಪ್ರಧಾನಿ, ಆತನ ತಂಡವೇ ಅಂತಿಮವಲ್ಲ. ಎಲ್ಲ ರಾಜ್ಯಗಳ ಸಿಎಂಗಳದ್ದೂ ಒಂದು ತಂಡ ಎಂದು ಪರಿಗಣಿಸಬೇಕು.