ಗಂಡ ಹೆಂಡತಿಗೆ ಎಸ್ಸೆಮ್ಮೆಸ್ ಮಾಡಿದ: ನಾನು ನಿನ್ನ ಗಂಡ ಆಗೋಕೆ ಏಳೇಳು ಜನ್ಮ ಪುಣ್ಯ ಮಾಡಿದೀನಿ. ನನ್ನ ಜೀವನದಲ್ಲಿ ನೀ ಸಿಕ್ಕಿದ್ದಕ್ಕೆ ಆ ದೇವರಿಗೆ ನಾನು ಚಿರಋಣಿ. ನಿನ್ನಿಂದ ಬದುಕು ಅದ್ಭುತ. ನೀ ನನ್ನ ದೇವತೆ. ನೀನಿರೋದ್ರಿಂದ ನನ್ನ ಜೀವನ ಸಾರ್ಥಕ. ಚಿನ್ನಾ! ನೀನು ನಿಜಕ್ಕೂ ಗ್ರೇಟ್!
ಹೆಂಡತಿ ರಿಪ್ಲೈ ಮಾಡಿದಳು: ಗುಂಡು ಹಾಕಿ ಮುಗೀತಾ? ಈಗ ಮೆಸೇಜ್ ಮಾಡೋದು ಬೇಡ. ಬಾಯ್ಮುಚ್ಕೊಂಡು ಮನೆಗೆ ಬಂದು ಸೇರ್ಕೊಳ್ಳಿ. ಹೆದರೋ ಅಗತ್ಯ ಇಲ್ಲ. ನಾನೇನು ಬಯ್ಯೋಲ್ಲ. ಜಗಳ ಮಾಡೋಲ್ಲ. ಬೇಗ ಮನೆಗೆ ಬನ್ನಿ. ಹುಷಾರಾಗಿ ಬನ್ನಿ.
ಗಂಡ: ಥ್ಯಾಂಕ್‌ಯೂ ಚಿನ್ನ. ಸೋ ಸ್ವೀಟ್ ಆಫ್ ಯೂ. ನಾನು ಮನೆ ಮುಂದೇನೇ ನಿಂತಿದೀನಿ. ಬಾಗಿಲು ತೆಗೀತೀಯ?
ಸ್ವಲ್ಪ ನೋಡಿ ಹೇಳು
ಹುಡುಗ ತನ್ನ ಹುಡುಗಿ ಜೊತೆ ಫೋನಲ್ಲಿ ರೊಮ್ಯಾಂಟಿ ಕ್ಕಾಗಿ ಮಾತಾಡ್ತಾ ಹೇಳ್ತಾನೆ: ಚಿನ್ನಾ ನಿನ್ನ ಕಣ್ಣು ಅದೆಷ್ಟು ಸುಂದರ! ನಿನ್ನ ಕಣ್ಣಲ್ಲಿ ಇಡೀ ಜಗತ್ತೇ ಕಾಣುತ್ತೆಗೊತ್ತಾ!
ಗುಂಡು ಹೊಡೆದು ಫುಲ್‌ಟೈಟಾಗಿ ತ್ರಿಬಲ್ ರೈಡಿಂಗ್ ಹೋಗ್ತಾ ಇದ್ದ ಮೂವರು ಪಡ್ಡೆಗಳು ಈತನ ಡೈಲಾಗ್ ಕೇಳಿ ಗಾಡಿ ನಿಲ್ಲಿಸಿದರು.
ಗುರೂ ನಿಮ್ ಹುಡುಗಿ ಕಣ್ಣಲ್ಲಿ ನೋಡಿ ಹೇಳು, ದೇವೇಗೌಡ ಪೆಟ್ರೋಲ್ ಬಂಕ್ ಹತ್ರ ಪೊಲೀಸ್ರು ಇದಾರಾ? ಡ್ರಿಂಕ್ ಅಂಡ್ ಡ್ರೈವ್ ಚೆಕ್ ಮಾಡ್ತಾ ಇದಾರಾ ಅಂತ! ಫುಲ್ ಟೈಟಾಗ್ ಬಿಟ್ಟಿದೀವಿ!
ಈಗ್ಲೇ ಬರ್ತೀಯ?
ಹುಡುಗಿ ತನ್ನ ಪ್ರಿಯಕರನಿಗೆ: ನೀನಂದ್ರೆ ಪ್ರಾಣ ಕಣೋ. ನಿನಗೋಸ್ಕರ ನಾನೇನ್ ಬೇಕಾದ್ರೂ ಮಾಡ್ತೀನಿ ಡಿಯರ್. ಬೆಂಕಿ ಮೇಲೆ ನಡಿ ಅಂದ್ರೆ ನಡೀತೀನಿ. ನದಿಯಲ್ಲಿ ಧುಮುಕು ಅಂದ್ರೆ ಕಣ್ಮುಚ್ಕೊಂಡು ಹಾರಿಬಿಡ್ತೀನಿ.
ಹುಡುಗ: ಆಹಾ... ಎಷ್ಟು ಖುಷಿ ಆಗ್ತಿದೆ ಗೊತ್ತಾ! ಐ ಲವ್‌ಯೂ. ಈಗ್ಲೇ ನಿನ್ನನ್ನ ನೋಡ್ಬೇಕು ಅನಿಸ್ತಿದೆ ಬರ್ತೀಯ ಚಿನ್ನ?
ಹುಡುಗಿ: ಈಗ್ಲಾ? ನಿಂಗೇನಾದ್ರೂ ತಲೆ ಕೆಟ್ಟಿದ್ಯಾ? ಎಷ್ಟೊಂದ್ ಬಿಸಿಲಿದೆ ಹೊರಗಡೆ. ಹೋಗೋ ನಾನು ಬರಲ್ಲ. ಟ್ಯಾನ್ ಆಗತ್ತೆ ಸ್ಕಿನ್ನು!
ವಿಮಾನ ಸಿಗ್ತು
ರಜನೀಕಾಂತ್ ಅಮ್ಮ ಹೇಳಿದ್ದು: ಪುಟ್ಟಾ... ನೀನು ಆಟ ಆಡಿ ಮುಗೀತಾ? ಮುಗಿದರೆ ಪ್ಲೀಸ್ ಆ ಮಲೇಶಿಯಾ ಏರೋಪ್ಲೇನ್ ವಾಪಸ್ ಕೊಟ್ಟುಬಿಡು. ಪಾಪ ತುಂಬಾ ಜನ ಟೆನ್ಶನ್ ಮಾಡ್ಕೊಂಡಿದಾರೆ.
ಸಾಲ್ ಪನಿಕ
ಅದ್ಭುತ ಆಲೋಚನೆಗಳನ್ನು ಮಾತನ್ನಾಗಿ ಮಾರ್ಪಡಿಸೋ ಉಪಕರಣ- ವಿಸ್ಕಿ
ಅದ್ಭುತ ಮಾತುಗಳನ್ನು ಮೌನವನ್ನಾಗಿ ಮಾರ್ಪಡಿಸೋ ಉಪಕರಣ- ಹೆಂಡ್ತಿ
=
ಹೆಂಡ್ತಿಗೂ ಕಾಶ್ಮೀರಕ್ಕೂ ಇರೋ ಒಂದು ಸಾಮ್ಯ?
ಎರಡೂ ಕೂಡ ಸಮಸ್ಯೆಯೇ. ಆದರೆ ಅಕ್ಕಪಕ್ಕದವರು ಕಣ್ಣು ಹಾಕಿದ್ರೆ ಮಾತ್ರ ಸಹಿಸ್ಕೊಳೋಕ್ ಆಗಲ್ಲ ಅಷ್ಟೇ.
=
ವನ್ಯಮೃಗಾಲಯದಿಂದ ಯಾವುದಾದರೂ ಪ್ರಾಣಿ ಕಾಣೆಯಾದರೆ, ಆ ಪ್ರಾಣಿ ಎಲ್ಲಿ ಹೋಯ್ತು ಎಂದು ಜಿರಾಫೆಯಿಂದ ತಿಳಿದುಕೊಳ್ಳಬಹುದು!
=
ಒಮ್ಮೆ ಯೋಚಿಸಿ! ಕನ್ನಡಿಯನ್ನು ಇನ್ನೂ ಕಂಡುಹಿಡಿದಿರದ ಕಾಲದಲ್ಲಿ ಕ್ಷೌರಿಕ ನಿಮಗೆ ಕೆಟ್ಟದಾಗಿ ಕಟಿಂಗ್ ಮಾಡಿ ಕಳಿಸಿದ್ದಿದ್ದರೆ ನಿಮ್ಮ ಪರಿಸ್ಥಿತಿ ಹೇಗಿದ್ದೀತು ಅಂತ !
=
ವಿಷ್ಣು: ನಾರದರೇ, ಐಪಿಎಲ್‌ನಲ್ಲಿ ಅತ್ಯುತ್ತಮ ಸ್ಪಿನ್ ಬೌಲರ್ ಯಾರು?
ನಾರದ: ನಾರೈನ್ ನಾರೈನ್.
=
ಬಿಸ್ಕೆಟ್ ಪ್ಯಾಕೆಟ್ಟಿನ ಕವರ್ ಮೇಲೆ 'ಪ್ರತಿ ಬಿಸ್ಕೆಟ್ಟೂ ಹಾಲಿನಲ್ಲಿ ಎಷ್ಟು ಬಾರಿ ಅದ್ದಿದ ನಂತರ ಕಳಚಿ ಮುಳುಗುತ್ತದೆ' ಎಂಬುದನ್ನು ಯಾಕೆ ನಮೂದಿಸಿರೋಲ್ಲ?