ಖುಷಿ

ಥಾಮಸ್ ಕೂಪರ್‌ರ ತಾಳ್ಮೆ

ಎಲಿಜಬೆತ್ ರಾಣಿಯ ಆಳ್ವಿಕೆಯಲ್ಲಿದ್ದ ಡಾ. ಥಾಮಸ್ ಕೂಪರ್ ಸಹ ಪದಕೋಶ(ಡಿಕ್ಷನರಿ)ಕ್ಕಾಗಿ ಅವಿರತವಾಗಿ...

ಎಲಿಜಬೆತ್ ರಾಣಿಯ ಆಳ್ವಿಕೆಯಲ್ಲಿದ್ದ ಡಾ. ಥಾಮಸ್ ಕೂಪರ್ ಸಹ ಪದಕೋಶ(ಡಿಕ್ಷನರಿ)ಕ್ಕಾಗಿ ಅವಿರತವಾಗಿ ದುಡಿದವನೇ. ವಿಶಿಷ್ಟವಾದ ಪದಕೋಶವನ್ನು ಸಂಪಾದಿಸುವುದರ ಜೊತೆಗೆ, 33000 ಪದಗಳನ್ನು ಸೇರ್ಪಡೆ ಮಾಡಿದ್ದರು. ಎಲ್ಲಿಲ್ಲಿಂದಲೋ ತರಿಸಿಕೊಂಡ ಟಿಪ್ಪಣಿಗಳನ್ನು ತಮಗೆ ಬೇಕಾದಂತೆ ಜೋಡಿಸಿಟ್ಟುಕೊಳ್ಳಲು ಸುಮಾರು ಎಂಟು ವರ್ಷಗಳನ್ನೇ ಕಳೆದಿದ್ದರು! ಇದನ್ನೆಲ್ಲಾ ಸಹಿಸಿಕೊಂಡಿದ್ದ ಅವರ ಹೆಂಡತಿಗೆ ಒಂದು ದಿನ ತಡೆದುಕೊಳ್ಳಲಾರದಷ್ಟು ಸಿಟ್ಟುಬಂತು. ನೇರವಾಗಿ ಗಂಡನ ಕೋಣೆಗೆ ಹೋದಳು. ಅಷ್ಟೇನೂ ವಿದ್ಯಾವಂತಳಾಗಿರದ ಆಕೆಯ ಕಣ್ಣಿಗೆ ಕಾಣಿಸಿದ್ದು ಹಳೆಯ ಕಾಗದಗಳ ಕಟ್ಟುಗಳು. 'ಈ ಹಳೆಯ ಕಾಗದಗಳನ್ನು ನೋಡಿ ನೋಡಿ ನನ್ನ ಗಂಡನ ಕಣ್ಣುಗಳು ಇಂಗಿಹೋಗುತ್ತವೆ, ಹಾಗೆಯೇ ಅವರು ಸತ್ತು ಹೋಗುತ್ತಾರೆ' ಅನ್ನಿಸಿತು. ಇವು ಇಲ್ಲಿದ್ದರೆ ತಾನೇ ಇವರು ಕೆಲಸ ಮಾಡುವುದು ಅಂದುಕೊಂಡು ಎಲ್ಲವನ್ನೂ ಸುಟ್ಟುಹಾಕಿದಳು.  ಕಾಗದದ ಬೂದಿ ಗಾಳಿಗೆ ಹಾರಿಹೋದ ಮೇಲೆ ಡಾ.ಕೂಪರ್ ತಮ್ಮ ಲೈಬ್ರೆರಿಗೆ ಬಂದರು. ದಾಖಲೆಗಳಿದ್ದ ಕಪಾಟುಗಳು ಕಪ್ಪು ಬಣ್ಣಕ್ಕೆ ತಿರುಗಿ ಖಾಲಿಯಾಗಿದ್ದವು. ಶೂನ್ಯ ದೃಷ್ಟಿ ಬೀರುತ್ತಾ ಕೇಳಿದಳು, 'ಯಾರು ಇದಕ್ಕೆ ಬೆಂಕಿ ತಗುಲಿಸಿದ್ದು?!'
'ನಾನೇ, ಇವು ಇದ್ದರೆ ನಿಮ್ಮ ತಲೆ ಕೆಡತ್ತೆ, ಹುಚ್ಚು ಹಿಡಿಯತ್ತೆ ಅಥವಾ ಪ್ರಾಣವೇ ಹೋದರೂ ಆಶ್ಚರ್ಯವಿಲ್ಲ!' ಅಂತ ಗುಡುಗಿದಳು ಹೆಂಡತಿ. ಡಾ. ಕೂಪರ್‌ಗೆ ಒಂದು ಕ್ಷಣ ಸೊಕ್ರೆಟೀಸ್‌ರ ಹೆಂಡತಿ ಕ್ಸಾಂತಿಪ್ಪೆಯ ನೆನಪಾಯಿತು.  ಸಹನಾ ಮೂರ್ತಿಯಾಗಿದ್ದ ಕೂಪರ್ 'ಡೀನಾ, ಎಂಥಾ ಕೆಲಸ ಮಾಡಿಬಿಟ್ಟೆ! ನನ್ನ ಎಂಟು ವರ್ಷದ ಶ್ರಮವನ್ನು ಸುಟ್ಟು ಬೂದಿ ಮಾಡಲು ನೀನು ಎಂಟು ನಿಮಿಷ ಕೂಡ ತೆಗೆದುಕೊಳ್ಳಲಿಲ್ಲವಲ್ಲಾ' ಅಂದರೇ ಹೊರತು ಸಾಮಾನ್ಯರಂತೆ ರೇಗಾಡಲಿಲ್ಲ, ಕೂಗಾಡಲಿಲ್ಲ.
ಸುಟ್ಟುಹೋದ ಕಾಗದಗಳನ್ನೆಲ್ಲಾ ಮತ್ತೆ ಹುಡುಕಿ, ತರಿಸಿ, ಜೋಡಿಸಿದರು. ಇಂತಹ ಭಾಷಾಭಿಮಾನಿಗಳು ಸಿಗಲು ಸಾಧ್ಯವೇ?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್