ಜೀವನಶೈಲಿ

ಮಹಿಳೆಯರಲ್ಲಿನ ಘ್ರಾಣ ಶಕ್ತಿ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಲಿದೆ!

Srinivas Rao BV
ನ್ಯೂಯಾರ್ಕ್: ಮಹಿಳೆಯರಲ್ಲಿರುವ ವಾಸನೆಯ ಗ್ರಹಿಕೆ ಸಾಮರ್ಥ್ಯ ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂಬ ಅಂಶ ಅಧ್ಯಯನ ವರದಿಯ ಮೂಲಕ ತಿಳಿದುಬಂದಿದೆ. 
ಸೈಂಟಿಫಿಕ್ ರಿಪೋರ್ಟ್ಸ್ ಜರ್ನಲ್ ನಲ್ಲಿ ಪ್ರಕಟವಾಗಿರುವ ವರದಿಯ ಪ್ರಕಾರ, ಘ್ರಾಣ ಸಂಬಂಧಿ ಸಾಮರ್ಥ್ಯದಲ್ಲಿ ಕುಸಿತ ಉಂಟಾಗುತ್ತಿದ್ದು, ವಯಸ್ಸಾದ ಮಹಿಳೆಯರಿಗೆ ಅವರ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರಲಿದ್ದು, ಸಾಮಾಜಿಕ ಸಂಪರ್ಕ ಕಡಿಮೆಯಾಗುವಂತೆ ಮಾಡುತ್ತದೆ ಎಂದು ಅಧ್ಯಯನ ವರದಿ ಹೇಳಿದೆ. 
ವಯಸ್ಸಾಗುತ್ತಿರುವವರಲ್ಲಿ ವಾಸನೆ ಗ್ರಹಿಕೆಯ ಸಾಮರ್ಥ್ಯ ಆರೋಗ್ಯದ ಪ್ರಮುಖ ಭಾಗವಾಗಿದೆ ಎಂದು ಅಮೆರಿಕಾದ ನರವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದು, ದೀರ್ಘಾವಧಿಯಲ್ಲಿ ಇದು ಸಾಮಾಜಿಕ ಜೀವನದ ಮೇಲೂ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಶೋಧನೆಗಾಗಿ 57-85 ವರ್ಷದವರೆಗಿನ ಸುಮಾರು 3,005 ಜನರನ್ನು ಸಮೀಕ್ಷೆಗೊಳಪಡಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 
SCROLL FOR NEXT