ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ಜೀವನಶೈಲಿ

ಬ್ಯೂಟಿಗಾಗಿ ಫೇರ್​ನೆಸ್​ ಕ್ರೀಮ್ ಬಳಸ್ತೀರಾ? ಹೆಚ್ಚುತ್ತಿದೆಯಂತೆ ಕಿಡ್ನಿ ಫೇಲ್ಯೂರ್, ಬಳಕೆಗೂ ಮುನ್ನ ಚಿಂತಿಸಿ!

Manjula VN

ಫೇರ್ ಸ್ಕಿನ್‌ ಸಮಾಜದ ಗೀಳಿನಿಂದ ಪ್ರೇರಿತವಾಗಿ ಸ್ಕಿನ್ ಫೇರ್‌ನೆಸ್ ಕ್ರೀಮ್‌ಗಳು ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ. ಸುಂದರವಾಗಿ ಕಾಣಬೇಕು ಎಂದು ಸಾಕಷ್ಟು ಮಂದಿ ಮಾರುಕಟ್ಟೆಯಲ್ಲಿ ಸಿಗುವ ವಿಧ ವಿಧದ ಕ್ರೀಮ್‌ಗಳನ್ನು ಬಳಕೆ ಮಾಡುತ್ತಾರೆ. ಕೆಲವು ಕ್ರೀಮ್‌ಗಳು ಕಡಿಮೆ ಬೆಲೆಗೆ ಸಿಕ್ಕದರೆ ಇನ್ನು ಕೆಲವು ಕ್ರೀಮ್‌ಗಳಿಗೆ ಸಾವಿರಾರು ರೂಪಾಯಿ ನೀಡಬೇಕಾಗಿದೆ.

ಆದರೆ, ಇದೇ ಫೇಸ್‌ನೆಸ್‌ ಕ್ರೀಮ್‌ಗಳು ಈಗ ಗಂಭೀರ ಸ್ವರೂಪದ ಅನಾರೋಗ್ಯ ಸಮಸ್ಯೆಗೆ ಕಾರಣವಾಗುತ್ತಿವೆ ಎಂದು ಅಧ್ಯಯವ ವರದಿಯೊಂದು ತಿಳಿಸಿದೆ. ಅದರಲ್ಲೂ ಈ ಕ್ರೀಮ್‌ಗಳ ಬಳಕೆಯಿಂದ ಕಿಡ್ನಿ ಸಮಸ್ಯೆಗಳು ಎದುರಾಗುತ್ತಿವೆ ಎಂದು ಹೇಳಿರುವುದು ಅಚ್ಚರಿ ಹಾಗೂ ಆಘಾತವನ್ನು ತಂದಿದೆ.

ಮುಖಕ್ಕೆ ಹಚ್ಚುವ ಕ್ರೀಮ್‌ಗೂ ಕಿಡ್ನಿಗೂ ಎತ್ತಿಂದತ್ತ ಸಂಬಂಧ ಎಂಬ ಪ್ರಶ್ನೆ ಮೂಡಬಹುದು. ಆದರೆ, ಇಲ್ಲೊಂದು ಸಂಬಂಧವಿದೆ.

ವೈದ್ಯಕೀಯ ಜರ್ನಲ್ ಕಿಡ್ನಿ ಇಂಟರ್‌ನ್ಯಾಶನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೆಚ್ಚಿನ ಮಟ್ಟದ ಪಾದರಸವನ್ನು ಹೊಂದಿರುವ ಸ್ಕಿನ್ ಫೇರ್‌ನೆಸ್ ಕ್ರೀಮ್‌ಗಳ ಬಳಕೆಯ ಹೆಚ್ಚಳವು ಮೆಂಬ್ರಾನಸ್ ನೆಫ್ರೋಪತಿ (ಎಂಎನ್) ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದು ಪತ್ತೆ ಮಾಡಿದೆ.

ಮೆಂಬ್ರಾನಸ್ ನೆಫ್ರೋಪತಿ (MN) ಒಂದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ನೆಫ್ರೋಟಿಕ್ ಸಿಂಡ್ರೋಮ್ ಅನ್ನು ಉಂಟುಮಾಡುತ್ತದೆ, ಇದು ಮೂತ್ರಪಿಂಡದ ಅಸ್ವಸ್ಥತೆಯಾಗಿದ್ದು, ಮೂತ್ರದಲ್ಲಿ ಹೆಚ್ಚಿನ ಪ್ರೋಟೀನ್ ವಿಸರ್ಜನೆಗೆ ಕಾರಣವಾಗುತ್ತದೆ. ಜುಲೈ 2021 ಮತ್ತು ಸೆಪ್ಟೆಂಬರ್ 2023 ರ ನಡುವೆ ವರದಿಯಾದ ಈ ಕಾಯಿಲೆಯ 22 ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ.

ಸಂಶೋಧಕರಲ್ಲಿ ಒಬ್ಬರಾದ ಡಾ.ಸಜೀಶ್ ಶಿವದಾಸ್, ನೆಫ್ರಾಲಜಿ ವಿಭಾಗ, ಆಸ್ಟರ್ ಮಿಮ್ಸ್ ಆಸ್ಪತ್ರೆ, ಕೊಟ್ಟಕ್ಕಲ್, ಕೇರಳ, ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ,

"ಪಾದರಸವು (ಮರ್ಕ್ಯುರಿ) ಚರ್ಮದ ಮೂಲಕ ಹೀರಲ್ಪಡುತ್ತದೆ ಮತ್ತು ಮೂತ್ರಪಿಂಡದ ಫಿಲ್ಟರ್‌ಗಳ ಮೇಲೆ ಹಾನಿಯನ್ನುಂಟುಮಾಡುತ್ತದೆ, ಇದು ನೆಫ್ರೋಟಿಕ್ ಸಿಂಡ್ರೋಮ್ ಪ್ರಕರಣಗಳ ಉಲ್ಬಣಕ್ಕೆ ಕಾರಣವಾಗುತ್ತದೆ'' ಎಂದು ಹೇಳಿದ್ದಾರೆ.

22 ರೋಗಿಗಳಲ್ಲಿ ಸುಮಾರು ಶೇ.68 ರಷ್ಟು ಅಥವಾ 15 ರೋಗಿಗಳು ನ್ಯೂರಲ್ ಎಪಿಡರ್ಮಲ್ ಬೆಳವಣಿಗೆಯ ಅಂಶದಂತಹ 1 ಪ್ರೊಟೀನ್ (NELL-1) ಪಾಸಿಟಿವ್ ಹೊಂದಿದ್ದರು. ಇದು ಕ್ಯಾನ್ಸರ್‌ನೊಂದಿಗೆ ಸಂಬಂಧ ಹೊಂದಿರುವ ಅಪರೂಪದ ರೀತಿಯ ನೆಫ್ರೋಟಿಕ್ ಸಿಂಡ್ರೋಮ್ ಆಗಿದೆ. ಆದರೆ ಇದು ಅಪರೂಪದಲ್ಲಿ ಅಪರೂಪಕ್ಕೆ ಸಂಭವಿಸಬಹುದಾದ ಕಾರಕವಾಗಿದೆ.

ಇದು ಕೇವಲ ತ್ವಚೆ/ಮೂತ್ರಪಿಂಡದ ಆರೋಗ್ಯ ಸಮಸ್ಯೆಯಲ್ಲ; ಇದು ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟು. ಮತ್ತು ಚರ್ಮಕ್ಕೆ ಪಾದರಸವನ್ನು ಅನ್ವಯಿಸಿದರೆ ಅಂತಹ ಹಾನಿಯನ್ನು ಉಂಟುಮಾಡಬಹುದು. ಒಂದು ವೇಳೆ ಅದನ್ನು ಸೇವಿಸಿದರೆ ಪರಿಣಾಮಗಳನ್ನು ಊಹಿಸಿ. ಈ ಹಾನಿಕಾರಕ ಉತ್ಪನ್ನಗಳನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರನ್ನು ರಕ್ಷಿಸಲು ಇದು ಕ್ರಮ ತೆಗೆದುಕೊಳ್ಳಬೇಕಾದ ಸಮಯವಾಗಿದೆ ಎಂದು ತಿಳಿಸಿದ್ದಾರೆ.

ಭಾರತದ ಅನಿಯಂತ್ರಿತ ಮಾರುಕಟ್ಟೆಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಈ ಕ್ರೀಮ್‌ಗಳು ತ್ವರಿತ ಫಲಿತಾಂಶಗಳನ್ನು ನೀಡುತ್ತದೆ, ಆದರೆ ಯಾವ ವೆಚ್ಚದಲ್ಲಿ? ಬಳಕೆದಾರರು ಈ ಕ್ರೀಮ್‌ಗಳ ಒಮ್ಮೆ ಬಳಸಿದರೆ ಅದರಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ಭಾರತದಲ್ಲಿದೆ. ಹೇಗೆಂದರೆ ಇಲ್ಲಿ ಕ್ರೀಮ್‌ಗಳಲ್ಲಿ ಬಳಸಲಾಗುತ್ತಿರುವ ರಾಸಾಯನಿಕಗಳು ಚರ್ಮಗಳಲ್ಲಿ ತ್ವರಿತ ಹೊಳಪು ನೀಡುತ್ತದೆ. ಆದರೆ ಒಮ್ಮೆ ಆ ಕ್ರೀಮ್ ಬಳಕೆ ನಿಲ್ಲಿಸಿದರೆ ಮತ್ತೆ ಚರ್ಮದ ಆರೋಗ್ಯದಲ್ಲಿ ಏರುಪೇರಾಗುವುದು, ಕಪ್ಪಾಗುವ ಪ್ರಕ್ರಿಯೆ ಆರಂಭವಾಗುತ್ತದೆ. ಹೀಗಾಗಿ ಜನ ಈ ಕ್ರೀಮ್‌ಗಳನ್ನು ನಿರಂತರವಾಗಿ ಬಳಕೆ ಮಾಡುತ್ತಾರೆ. ಆದರೆ, ಇದು ಆರೋಗ್ಯದ ಮೇಲೆ ನೇರವಾಗಿಯೇ ಪರಿಣಾಮ ಉಂಟುಮಾಡುತ್ತಿದೆ ಎಂದು ಹೇಳಿದ್ದಾರೆ.

ಆಸ್ಟರ್ ಸಿಎಂಐ ಆಸ್ಪತ್ರೆಯ ನೆಫ್ರಾಲಜಿಯ ಲೀಡ್ ಕನ್ಸಲ್ಟೆಂಟ್ ಡಾ.ವಿದ್ಯಾಶಂಕರ್ ಪಿ ಮಾತನಾಡಿ, ಪಾದರಸದ ಮಟ್ಟವನ್ನು ಹೊಂದಿರುವ ಕೆಲವು ಫೇರ್‌ನೆಸ್ ಕ್ರೀಮ್‌ಗಳ ನಿಯಮಿತ ಬಳಕೆಯು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು. ಪಾದರಸವು ಚರ್ಮವನ್ನು ಸೇರಿ ಮೂತ್ರಪಿಂಡ ಕಾರ್ಯದ ಮೇಲೆ ಪರಿಣಾಮ ಬೀರಬಹುದು. ಇದು ಎಂಎನ್‌ (ಮೆಂಬ್ರಾನಸ್ ನೆಫ್ರೋಪತಿ)ಗೆ ಕಾರಣವಾಗುತ್ತದೆ, ಕಾಲುಗಳಲ್ಲಿ ಊತ, ಮೂತ್ರದಲ್ಲಿ ಪ್ರೋಟೀನ್ ಸೋರಿಕೆ ಮತ್ತು ಕ್ರಿಯೇಟಿನೈನ್ ಮಟ್ಟವನ್ನು ಹೆಚ್ಚಿಸುವುದು ಸೇರಿದಂತೆ ಇತರೆ ಸಮಸ್ಯೆಗಳು ಹೆಚ್ಚಾಗಬಹುದು. ದೀರ್ಘಕಾಲದ ಮೂತ್ರಪಿಂಡ ಕಾಯಿಲೆಗೂ ಕಾರಣವಾಗಬಹುದು ಎಂದು ಹೇಳಿದ್ದಾರೆ.

ಜನರು ಪಾದರಸ-ಮುಕ್ತ ಕ್ರೀಮ್ ಗಳನ್ನು ಆರಿಸಿಕೊಳ್ಳುವುದು ಸೂಕ್ತ. ಪಾದರಸದ ಉಪಸ್ಥಿತಿಯನ್ನು ಸೂಚಿಸುವ "ಮರ್ಕ್ಯುರಸ್ ಕ್ಲೋರೈಡ್" ಮತ್ತು "ಕ್ಯಾಲೋಮೆಲ್" ನಂತಹ ಪದಗಳ ಪರಿಶೀಲಿಸಿ ಕ್ರೀಮ್ ಗಳನ್ನು ಖರೀದಿ ಮಾಡಬೇಕು ಎಂದು ಡಾ ಮಂಜುನಾಥ್ ಅವಕು ಸಲಹೆ ನೀಡಿದ್ದಾರೆ.

SCROLL FOR NEXT