ಸಂಗ್ರಹ ಚಿತ್ರ 
ವರಮಹಾಲಕ್ಷ್ಮಿ ವ್ರತ

ವರಮಹಾಲಕ್ಷ್ಮೀ ವ್ರತಕ್ಕೆ ಬೇಕಾಗಿರುವ ಪೂಜಾ ಸಾಮಾಗ್ರಿಗಳು

ಕೆಲವರಿಗೆ ಪೂಜಾ ಸಾಮಾಗ್ರಿಗಳು ಹೆಚ್ಚಾಗಿ ತಿಳಿದಿರುವುದಿಲ್ಲ ಅಂತಹವರಿಗೆ ಒಂದಿಷ್ಟು ಪೂಜೆಗೆ ಬೇಕಾದ...

ವರಮಹಾಲಕ್ಷ್ಮೀ ಪೂಜೆ ಮಾಡೋ ಸಡಗರದಲ್ಲಿ ಕೆಲವೊಮ್ಮೆ ಒಂದೆರಡು ಸಾಮಾನು ಮರೆಯುವ ಸಾಧ್ಯತೆಗಳು ಇದೆ ಇರುತ್ತದೆ. ಅಲ್ಲದೇ ಕೆಲವರಿಗೆ ಪೂಜಾ ಸಾಮಾಗ್ರಿಗಳು ಹೆಚ್ಚಾಗಿ ತಿಳಿದಿರುವುದಿಲ್ಲ ಅಂತಹವರಿಗೆ ಒಂದಿಷ್ಟು ಪೂಜೆಗೆ ಬೇಕಾದ ಸಾಮಾಗ್ರಿಗಳ ಪಟ್ಟಿ ಇಂತಿದೆ...

ತೆಂಗಿನ ಕಾಯಿ, ಕಳಶ, ಮಣೆ / ಮಂಟಪ, ಆರತಿ ತಟ್ಟೆ, ಸೀರೆ, ರವಿಕೆ ಬಟ್ಟೆ,
ನಂದಾ ದೀಪ, ದೀಪದ ಕಂಭ, ತುಪ್ಪ, ಎಣ್ಣೆ, ದೀಪಕ್ಕೆ ಹಾಕುವ ಬತ್ತಿ
ಅಲಂಕಾರ ಮಾಡಲು ಬೇಕಾಗುವ ಚಿನ್ನ ಬೆಳ್ಳಿಯ ಆಭರಣಗಳು, ಹಸಿರು ಮತ್ತು ಕೆಂಪು ಗಾಜಿನ ಬಳೆಗಳು
ದೇವರ ವಿಗ್ರಹ, ದೇವರ ಪಟ, ಪಂಚಪಾತ್ರೆ, ಅರ್ಘ್ಯ ಪಾತ್ರೆ, ನೀರು, ಘಂಟೆ
ಉದ್ದರಣೆ, ಪೂಜಾ ವಿಧಾನ ಇರುವ ಪುಸ್ತಕ, ಅರಿಶಿನ, ಕುಂಕುಮ, ಮಂತ್ರಾಕ್ಷತೆ
ಶ್ರೀಗಂಧ, ಊದಿನ ಕಡ್ಡಿ, ಕರ್ಪೂರ, ಹೂವು, ಕಮಲದ ಹೂವು, ಗೆಜ್ಜೆ, ವಸ್ತ್ರ, ಮಂಗಳಾರತಿ ಬತ್ತಿ, ಧೂಪ
ಪಂಚಾಮೃತ - ಹಾಲು, ಮೊಸರು, ಸಕ್ಕರೆ, ತುಪ್ಪ, ಜೇನುತುಪ್ಪ, ಪಚ್ಚ ಕರ್ಪೂರ
ಹೂ- ಸಂಪಿಗೆ, ಮಲ್ಲಿಗೆ, ಕಮಲ, ಸೇವಂತಿಗೆ
ವೀಳ್ಯದ ಎಲೆ, ಅಡಿಕೆ, ಬಾಳೆಹಣ್ಣು
ಸೇಬು, ಸೀತಾಫಲ, ದ್ರಾಕ್ಷಿ, ಸಪೋಟ, ಮೂಸಂಬಿ, ಕಿತ್ತಳೆ, ಇತ್ಯಾದಿ.
ನೈವೇದ್ಯ - ಪಾಯಸ, ಸಿಹಿ ಅನ್ನ, ಕೋಸಂಬರಿ , ಇತ್ಯಾದಿ
ಅವಶ್ಯವಿದ್ದರೆ ಬಳಸುವ ಸಾಮಾಗ್ರಿ
ಕಳಶ, ಅರಿಶಿನದ ಕೊನೆ, ಅರಿಶಿನ ದಾರ, ಮರದ ಜೊತೆ / ಬಾಗಿನ ಬಳೆ, ಬಿಚ್ಚೋಲೆ, ಕನ್ನಡಿ, ಕಪ್ಪು, ರವಿಕೆ ಬಟ್ಟೆ, ಸೋಬಲಕ್ಕಿ...ಇತ್ಯಾದಿ
ಮಾರುಕಟ್ಟೆಯಲ್ಲಿ ಅನೇಕ ವಿಧವಾದ ಅಲಂಕಾರಿಕ ಸಾಮಾನು ದೊರೆಯುತ್ತದೆ ಅದನ್ನು ಕೂಡ ಬಳಸಿ ಮಹಾಲಕ್ಷ್ಮೀ ದೇವಿಗೆ ಅಲಂಕಾರ ಮಾಡಬಹುದು.

-ಮೈನಾಶ್ರೀ.ಸಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

'ರಾಹುಲ್ ಗಾಂಧಿ' ಕಾರಣಕ್ಕೆ ₹40 ಲಕ್ಷ ಪ್ಯಾಕೇಜ್, ಹ್ಯಾಂಡ್‌ಸಮ್ ಹುಡುಗನನ್ನೇ ರಿಜೆಕ್ಟ್ ಮಾಡಿದ ಹುಡುಗಿ!

ಬಿಡದಿ ಬಳಿಯ ಫಾರ್ಮ್‌ಹೌಸ್‌ನಲ್ಲಿ ಅಕ್ರಮ ಪತ್ತೆ; ₹4.91 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ವಶಪಡಿಸಿಕೊಂಡ FDA!

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್