ಗ್ಯಾಂಗ್ಟಕ್: ಬರೋಬ್ಬರಿ 20 ವರ್ಷಗಳ ಅಧಿಕಾರವಧಿ. ಹೌದು. ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರು ಶುಕ್ರವಾರ ತಮ್ಮ 20 ವರ್ಷಗಳ ಅಧಿಕಾರವಧಿಯನ್ನು ಪೂರ್ಣಗೊಳಿಸಲಿದ್ದಾರೆ.
ಚಾಮ್ಲಿಂಗ್ ಪ್ರಸ್ತುತ ಅತಿ ದೀರ್ಘಕಾಲ ಮುಖ್ಯಮಂತ್ರಿ ಹುದ್ದೆಯಲ್ಲಿರುವ ದೇಶದ ಏಕೈಕ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ಹಾಲಿ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ(2019) ಚಾಮ್ಲಿಂಗ್ ಪಶ್ಚಿಮ ಬಂಗಾಳದ ಮಾಜಿ ಸಿಎಂ ದಿವಂಗತ ಜ್ಯೋತಿ ಬಸು ಅವರ 23 ವರ್ಷಗಳ ದಾಖಲೆಯನ್ನು ಮುರಿಯಲಿದ್ದಾರೆ. ಬಸು ಅವರು 1977ರ ಜೂ.21ರಿಂದ 2000ದ ನ.6ರವರೆಗೆ ಅಧಿಕಾರದಲ್ಲಿದ್ದರು.
63 ವರ್ಷದ ಚಾಮ್ಲಿಂಗ್ ಅವರು ಡಿ.12, 1994ರಲ್ಲಿ ಸಿಕ್ಕಿಂ ಡ್ರೆಮಾಕ್ರಟಿಕ್ ಫ್ರಂಡ್ನ ಮುಖ್ಯಮಂತ್ರಿಯಾಗಿ ಮೊದಲು ಅಧಿಕಾರ ವಹಿಸಿಕೊಂಡರು. ತದನಂತರ 2014ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಸತತ 5ನೇ ಬಾರಿಗೆ ಗೆಲವು ಸಾಧಿಸಿ, ಸಿಎಂ ಗಾದಿಯಲ್ಲೇ ಮುಂದುವರಿದರು.