ದೇಶ

ಪಾಕಿಸ್ತಾನ ಈ ವರ್ಷ 192 ಬಾರಿ ಕದನ ವಿರಾಮ ಉಲ್ಲಂಘಿಸಿದೆ: ಕೇಂದ್ರ

Lingaraj Badiger

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಲ್ಲಿ ಪದೇಪದೆ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ, ಈ ವರ್ಷ ಜುಲೈ 26ರವರೆಗೆ ಬರೋಬ್ಬರಿ 192 ಬಾರಿ ಕದನ ವಿರಾಮ ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. ಅಲ್ಲದೆ ಪಾಕ್ ಅಪ್ರಚೋದಿತ ದಾಳಿಗೆ ಭಾರತ ತಕ್ಷಣವೇ ಪರಿಣಾಮಕಾರಿ ಉತ್ತರ ನೀಡಿದೆ ಎಂದು ಹೇಳಿದೆ.

ಈ ಬಗ್ಗೆ ಲೋಕಸಭೆಗೆ ಲಿಖಿತ ಉತ್ತರ ನೀಡಿದ ಗೃಹ ಖಾತೆ ರಾಜ್ಯ ಸಚಿವ ಹರಿಭಾಯಿ ಪರತಿಭಾಯಿ ಚೌಧರಿ ಅವರು, 2015, ಜುಲೈ 26ರವರೆಗೆ ಪಾಕಿಸ್ತಾನ 192 ಬಾರಿ ಕದನ ವಿರಾಮ ಉಲ್ಲಂಘಿಸಿದ್ದು, ಈ ವೇಳೆ ಓರ್ವ ಬಿಎಸ್‌ಎಫ್ ಯೋಧ ಹಾಗೂ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಪಾಕಿಸ್ತಾನದ ಅಪ್ರೋದಿತ ದಾಳಿಯಿಂದಾಗಿ 22 ಮಂದಿ ಗಾಯಗೊಂಡಿದ್ದಾರೆ ಮತ್ತು 7, 110 ಮಂದಿ ತಾತ್ಕಾಲಿಕ ತೊಂದರೆಗೆ ಒಳಗಾಗಿದ್ದು, 50 ಮನೆಗಳಿಗೆ ಹಾನಿಯಾಗಿದೆ ಎಂದು ಸಚಿವರು ಹೇಳಿದರು.

ಇದೇ ವೇಳೆ, ರಾಜ್ಯ ಸರ್ಕಾರದ ಪರಿಹಾರದ ಹೊರತಾಗಿಯೂ ಗಡಿಯಲ್ಲಿ ಗುಂಡಿನ ದಾಳಿಗೆ ಬಲಿಯಾಗುವ ನಾಗರಿಕರ ಕುಟುಂಬಕ್ಕೆ 5 ಲಕ್ಷ ರುಪಾಯಿ ಪರಿಹಾರ ನೀಡುವ ಪ್ರಸಾವನೆ ಕೇಂದ್ರದ ಮುಂದಿದೆ ಎಂದು ಚೌಧರಿ ತಿಳಿಸಿದರು.

SCROLL FOR NEXT